ಪ್ರಧಾನಿ ಮೋದಿ ಮುಂದೆ ಬೊಮ್ಮಾಯಿ ಗಢ ಗಢ ನಡಗ್ತಾರೆ: ಸಿದ್ದರಾಮಯ್ಯ

By Girish Goudar  |  First Published Jan 4, 2023, 12:00 AM IST

ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ರಾಜ್ಯದ ಎಲ್ಲ ಕೆರೆ ತುಂಬಿಸುತ್ತೇವೆ. ಮಹದಾಯಿ ಯೋಜನೆ ನಿರ್ಮಾಣಕ್ಕೆ ಯಡಿಯೂರಪ್ಪ ರಕ್ತದಲ್ಲಿ ಬರೆದುಕೊಡ್ತೇನೆ ಎಂದ್ರು, ಡಬಲ್ ಇಂಜಿನ್ ಸರ್ಕಾರ ಏನು ಮಾಡ್ತಿದೆ. ಯಡಿಯೂರಪ್ಪಗೆ. ಧಮ್ಮಿದ್ರೇ, ತಾಕತ್ತಿದ್ರೇ ಬಡವರಿಗೆ ಒಂದು ಮನೆ ಕೊಡಲಿ: ಸಿದ್ದರಾಮಯ್ಯ


ವಿಜಯನಗರ(ಜ.04):  ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಬಂದಿರುವ ಹಿನ್ನಲೆಯಲ್ಲಿ ಬಾಗಿನ ಅರ್ಪಿಸಿದ್ದೇವೆ . 40 ವರ್ಷಗಳ ಹೋರಾಟಕ್ಕೆ ಅಂತ್ಯ ಹಾಡಿದ್ದೇವೆ. ಭೀಮಾ ನಾಯ್ಕ ಜೆಡಿಎಸ್ ಶಾಸಕರಾಗಿದ್ದಾಗಲೇ ಅನುದಾನ ಬಿಡುಗಡೆ ಮಾಡಿದ್ದೇವೆ. ಅಭಿವೃದ್ಧಿಗೆ ಪಕ್ಷ ಅಗತ್ಯವಿಲ್ಲ. ಚುನಾವಣೆಯಲ್ಲಿ ಮಾತ್ರ ಭರವಸೆ ನೀಡ್ತೇವೆ. ಗೆದ್ದ ಮೇಲೆ ಆ ಪಕ್ಷ ಈ ಪಕ್ಷ ಅಂತೇನಿಲ್ಲ ಎಲ್ಲರ ಅಭಿವೃದ್ಧಿ ಮಾಡಬೇಕು. ನಾನು ಸಿಎಂ ಅಗಿದ್ದಾಗ ಪಕ್ಷಾತೀತವಾಗಿ ಎಲ್ಲ ಕ್ಷೇತ್ರಕ್ಕೆ ಅನುದಾನ ನೀಡಿದ್ದೇವೆ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಮಂಗಳವಾರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ತಮ್ಮ ಸರ್ಕಾರದ ಅವಧಿಯ ಅಭಿವೃದ್ಧಿ ಬಗ್ಗೆ ವಿವರಣೆ ಹೇಳಿ ಮತಯಾಚನೆ ಮಾಡಿದ ಸಿದ್ದರಾಮಯ್ಯ, ಮೂರುವರೆ ವರ್ಷದಲ್ಲಿ ಬಿಜೆಪಿಯ ಯಾರಾದರೂ ಒಂದು ಭರವಸೆ ಈಡೇರಿಸಿದ್ದೀರಾ?. ಬಸವರಾಜ ಬೊಮ್ಮಯಿ ಒಂದೇ ವೇದಿಕೆ ಮೇಲೆ ಬರಲಿ. ಧೈರ್ಯವಿದ್ರೇ ಅಭಿವೃದ್ಧಿ ಚರ್ಚೆಗೆ ಒಂದೇ ವೇದಿಕೆಯಲ್ಲಿ ಬರಲಿ. ಕಾಂಗ್ರೆಸ್‌ನವರ ಧಮ್ಮಿನ ಬಗ್ಗೆ ಪ್ರಶ್ನೆ ಮಾಡೋ ಬೊಮ್ಮಾಯಿ ಅವರು ಮೋದಿ ಮುಂದೆ ನಾಯಿಯಂತೆ ಇರುತ್ತಾರೆ. ಗಢ ಗಢ ನಡಗುತ್ತಾರೆ ಅಂತ ಸಿಎಂ ವಿರುದ್ಧ ಸಿದ್ದು ಕಿಡಿ ಕಾರಿದ್ದಾರೆ. 

Latest Videos

undefined

ASSEMBLY ELECTION: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಸಂಕ್ರಾಂತಿಗಿಲ್ಲ: ಸಿದ್ದರಾಮಯ್ಯ

ಆಪರೇಷನ್ ಕಮಲದ ಮೂಲ ಅಧಿಕಾರಕ್ಕೆ ಬಂದಿದ್ದೀರಾ?, ಧಮ್ಮಿದ್ರೇ,  ತಾಕತ್ತಿದ್ರೇ, ಬೊಮ್ಮಯಿ ಅವರೇ ಕೇಂದ್ರದಿಂದ ಹಣ ತನ್ನಿ. ಕೇಂದ್ರದ ನಾಯಕರ ಮುಂದೆ ನಿಮ್ಮ ತಾಕತ್ತು ಧಮ್ಮು ಎಲ್ಲಿ ಹೋಗ್ತದೆ ಬೊಮ್ಮಾಯಿ. ಅಂತ ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ರಾಜ್ಯದ ಎಲ್ಲ ಕೆರೆ ತುಂಬಿಸುತ್ತೇವೆ. ಮಹದಾಯಿ ಯೋಜನೆ ನಿರ್ಮಾಣಕ್ಕೆ ಯಡಿಯೂರಪ್ಪ ರಕ್ತದಲ್ಲಿ ಬರೆದುಕೊಡ್ತೇನೆ ಎಂದ್ರು, ಡಬಲ್ ಇಂಜಿನ್ ಸರ್ಕಾರ ಏನು ಮಾಡ್ತಿದೆ. ಯಡಿಯೂರಪ್ಪಗೆ. ಧಮ್ಮಿದ್ರೇ, ತಾಕತ್ತಿದ್ರೇ ಬಡವರಿಗೆ ಒಂದು ಮನೆ ಕೊಡಲಿ. ವಿಧಾನ ಸೌದದ ಗೋಡೆಗಳು ನಲವತ್ತು ಪರ್ಸೆಂಟ್ ಕೇಳುತ್ತಿದೆ. ಮಂತ್ರಿಗಳು ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈಶ್ವರಪ್ಪ, ಎಂಟಿಬಿ ನಾಗರಾಜ್, ನಿಂಬಾವಳಿ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಕೊಟ್ಟಂತೆ ನಿಂಬಾವಳಿಗೆ ಅಗಬಾರದು ನಿಂಬಾವಳಿಯನ್ನ ಬಂಧಿಸಿ. ಕಂಟ್ರಾಕ್ಟರ್ ಅಸೋಸಿಯೇಷನ್ ಪರ್ಸೆಂಟೆಜ್‌ ಆರೋಪವಿದೆ. ವಿಚಾರಣೆ ಮಾಡೋ ಬದಲು ಕೆಂಪಣ್ಣ ಅವರನ್ನೇ ಬಂಧಿಸಿದ್ದಾರೆ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ. ರಾಜ್ಯವನ್ನು ಉಳಿಸೋದಕ್ಕಾಗಿ ಕಾಂಗ್ರೆಸ್ ಗೆಲ್ಲಿಸಬೇಕಿದೆ ಅಂತ ಹೇಳಿದ್ದಾರೆ. 

Hampi Utsav 2023: ಜ.27ರಿಂದ 3 ದಿನ ಅದ್ಧೂರಿ ‘ಹಂಪಿ ಉತ್ಸವ’, ಸಿಎಂ ಬೊಮ್ಮಾಯಿ ಚಾಲನೆ

ಮತ್ತೊಮ್ಮೆ ಸಿದ್ದರಾಮಯ್ಯ ‌ಮುಖ್ಯಮಂತ್ರಿಯಾಗ್ತಾರೆ ಎಂದ ಶಾಸಕ ಭೀಮಾನಾಯ್ಕ 

ಸಾರ್ಥಕ ನಮನ ಹೆಸರಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಭೀಮಾ ನಾಯ್ಕ, ಸಿದ್ದರಾಮಯ್ಯ ಮುಖ್ಯಮಂತ್ರಿ ಯಾದ್ರೇ ಮಾತ್ರ ರಾಜ್ಯದ ಅಭಿವೃದ್ಧಿಯಾಗ್ತದೆ. ಮುಖ್ಯಮಂತ್ರಿ ಅಗೇ ಆಗ್ತಾರೆ ಎಂದ ವೇದಿಕೆ ಕುಟ್ಟಿ ಹೇಳಿದ್ದಾರೆ. ಸಿದ್ದರಾಮಯ್ಯ ಕಂಡ್ರೇ ಬಿಜೆಪಿಗೆ ನಡುಕ. ಇವನ್ಯಾನೋ ಸಿಟಿ ರವಿ ಸಿದ್ದರಾಮಯ್ಯ ಬಗ್ಗೆ ಮಾತನಾಡ್ತಾನೆ. ಅವನೊಬ್ಬ ಲೂಟಿ ರವಿ. ಸಿದ್ದರಾಮಯ್ಯ ಕಾಲಿನ ಧೂಳಿಗೆ ಈ ಲೂಟಿ ರವಿ ಸಮನವಲ್ಲ ಅಂತ ಸಿ.ಟಿ. ರವಿ ವಿರುದ್ಧ ಹರಿಹಾಯ್ದಿದ್ದಾರೆ. 

ಹಗರಿಬೊಮ್ಮನಹಳ್ಳಿಯಲ್ಲಿ ಮಾಜಿ ಸಿಎಂ ಸಿದ್ದು ಸಂಚಾರ 

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಗರಿಬೊಮ್ಮನಹಳ್ಳಿಯಲ್ಲಿ ಭರ್ಜರಿ ಸ್ವಾಗತ ಕೋರಲಾಗಿದೆ. ಮಾಲವಿ ಜಲಾಶಯಕ್ಕೆ ಬಾಗಿನ ಅರ್ಪಣೆ ಬಳಿಕ ಹಗರಿಬೊಮ್ಮನಹಳ್ಳಿಯಲ್ಲಿ ರೋಡ್ ಶೋ ನಡೆಸಲಾಗಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾಜಿ ಸಿಎಂ ಸಂಚಾರ ನಡೆಸಿದ್ದಾರೆ. ಜೆಸಿಬಿ ಮೇಲಿಂದ ಹೂ ಎಸೆದು ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಶಾಸಕ ಭೀಮಾ ನಾಯ್ಕ್, ಮಾಜಿ ಸಚಿವ ಸಂತೋಷ್ ಲಾಡ್, ಪಿ.ಟಿ ಪರಮೇಶ್ವರ್ ನಾಯ್ಕ್, ಶಾಸಕರಾದ ಜೆ.ಎನ್ ಗಣೇಶ್, ತುಕಾರಾಂ ಸಾಥ್ ನೀಡಿದ್ದರು.

click me!