40% ಕಮಿಷನ್ ಹೊಡೆಯುವುದರಲ್ಲಿ ಬಿಜೆಪಿ ಸರ್ಕಾರ ಮುಳುಗಿದೆ: ಸಿದ್ದರಾಮಯ್ಯ

By Girish Goudar  |  First Published Oct 20, 2022, 9:18 PM IST

ಬಿಜೆಪಿ, ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ, ಬಿಜೆಪಿ ಜನ ಸಂಕಲ್ಪ ಯಾತ್ರೆ ಕುರಿತು ಸಿದ್ದರಾಮಯ್ಯ ವ್ಯಂಗ್ಯ 


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಅ.20): ಚಿತ್ರದುರ್ಗ ಜಿಲ್ಲೆ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ‌ ಬಿ.ಜಿ ಗೋವಿಂದಪ್ಪ ಅವರ 68ನೇ ಜನ್ಮ ದಿನ ಪ್ರಯುಕ್ತ ಇಂದು(ಗುರುವಾರ) ಹೊಸದುರ್ಗ ಪಟ್ಟಣದ ಕೂದಲೆಳೆ ಹಂತದಲ್ಲಿರುವ ಯಲಕಪ್ಪನಹಟ್ಟಿ ಗ್ರಾಮದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗಮಿಸಿ ಇಡೀ ಕಾರ್ಯಕ್ರಮಕ್ಕೆ ಮೆರಗು ತಂದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯಅವರು ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Tap to resize

Latest Videos

ಸಿದ್ದರಾಮಯ್ಯ ಭಾಷಣಕ್ಕೆ ಆಗಮಿಸುವ ಮುನ್ನ ಅನೇಕ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ಅವರನ್ನು ನೋಡಲು ವೇದಿಕೆ ಮೇಲೆ ನೂಕು ನುಗ್ಗಲಾದ ಪ್ರಸಂಗ ಕೆಲ ಕಾಲ ಜರುಗಿತು. ಈ ಸಂದರ್ಭದಲ್ಲಿ ತಾವೇ ಖುದ್ದಗಿ ಸಿದ್ದರಾಮಯ್ಯ ಅವರು, ವೇದಿಕೆ ಮೇಲಿದ್ದ ಜನರನ್ನು ಕೆಳಗೆ ಇಳಿಸುವ ಮೂಲಕ ಜನರಿಗೆ ಗದರಿದರು. ಕಾರ್ಯಕ್ರಮದ ಅತಿಥಿಗಳು ಭಾಷಣ ಮಾಡುವುದಕ್ಕೂ ಬಿಡದೇ ಇದ್ದ ವೇಳೆ ಸಿದ್ದರಾಮಯ್ಯ ಅವರೇ ವೇದಿಕೆ ಮೇಲಿದ್ದವರನ್ನು ಸ್ವತಃ ಕೆಳಗೆ ತಳ್ಳುವ ಮೂಲಕ ಜನರನ್ನು ವೇದಿಕೆಯಿಂದ ಕೆಳಗಿಳಿಸಿದರು. ಆ ವೇಳೆ ಅಲ್ಲಿಯೇ ನಿಂತಿದ್ದ ಚಿತ್ರದುರ್ಗದ ಕಾಂಗ್ರೆಸ್ ನಾಯಕರಿಗೆ ಜನರನ್ನು ಕಂಟ್ರೋಲ್ ಮಾಡೋಕ್ ಆಗಲ್ವಾ ಎಂದು ಕ್ಲಾಸ್ ತೆಗೆದುಕೊಂಡರು.

ಕನ್ನಡಿಗರ ಹಿರಿಮೆ ಹೆಚ್ಚಿಸಿದ ಖರ್ಗೆ ಗೆಲುವಿಗೆ ಆಂಜನೇಯ ಸಂತಸ

ನಂತರ ಭಾಷಣ ಆರಂಭಿಸಿದ ಅವರು, ಮೊದಲು ಅಲ್ಲಿ ನೆರೆದಿದ್ದ ಜನರಿಗೆ ಶಿಸ್ತಿನ ಬಗ್ಗೆ ಪಾಠ ಮಾಡಿದುರು. ಅಭಿಮಾನ ಇರಬೇಕು ಆದ್ರೆ ಶಿಳ್ಳೆ, ಕೇಕೆ ಹಾಕಿದ್ರೆ ಸಾಲದು ಸ್ವಲ್ಪ ಆದ್ರು ಶಿಸ್ತು ಇರಬೇಕು ಎಂದು ಜನರಿಗೆ ಶಿಸ್ತಿನ ಪಾಠ ಮಾಡಿದರು. ನಂತರ ಮಾತುಗಳನ್ನು ಶುರುಮಾಡಿದ ಅವರು, ಬಿಜೆಪಿ ಸಂಕಲ್ಪ ಯಾತ್ರೆ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು. ಮನೆ ಕೊಟ್ಟಿಲ್ಲ, ಗುಂಡಿ ಮುಚ್ಚಿಲ್ಲ, ನೀರಾವರಿ ಯೋಜನೆ ಇಲ್ಲ ಅಂತ ಸಂಕಲ್ಪನಾ? ಬೆಳೆ ಹಾನಿ, ಜಮೀನು ಮುಳುಗಡೆಗೆ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರ ಲೂಟಿ ಹೊಡೆಯುವುದರಲ್ಲಿದೆ. 40% ಕಮಿಷನ್ ಹೊಡೆಯುವುದರಲ್ಲಿ ಬಿಜೆಪಿ ಸರ್ಕಾರ ಮುಳುಗಿದೆ ಎಂದರು. ಪ್ರಧಾನಿ ಮೋದಿಗೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಯ್ಯ ಪತ್ರ. ವರ್ಷ ಕಳೆದರೂ ಮೋದಿಯಿಂದ‌ ಕ್ರಮ ಇಲ್ಲ. ಮೋದಿ ನಾ ತಿನ್ನಲ್ಲ, ತಿನ್ನಲು ಬಿಡಲ್ಲ ಎಂದು ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದರು. 'ಅಯ್ಯೋ ನಿನ್ನ ಮನೆ ಹಾಳಾಗ' ಮತ್ತೇಕೆ ಸುಮ್ಮನಿರೋದು? ಬೊಮ್ಮಾಯಿ ಸರ್ಕಾರದ ವಿರುದ್ದ ಕ್ರಮ ಕೈಗೊಳ್ಳದಿರುವುದು ಡ್ರಾಮಾ ಎಂದು ಕಿಡಿಕಾರಿದರು.

Chitradurga: ಖರ್ಗೆ ಗೆಲವು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ: ಮಾಜಿ ಸಚಿವ ಆಂಜನೇಯ

ನೀವು ಪ್ರಾಮಾಣಿಕವಾಗಿದ್ದರೆ ಸಿಬಿಐ ತನಿಖೆ ಮಾಡಿಸಬೇಕಿತ್ತು. ನರೇಂದ್ರ ಮೋದಿ ಎಲ್ಲಿಗೆ ಚೌಕಿದಾರ ಎಂದು ವ್ಯಂಗ್ಯ ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ ಎಂದು ಸಿಎಂ ಹೇಳ್ತಾರೆ. ಆಗ ಇವರ ಬಾಯಲಿ ಕಡಬು ಸಿಕ್ಕಿಬಿದ್ದಿತ್ತಾ, ಕಡ್ಲೇಪುರಿ ತಿನ್ನುತ್ತಿದ್ದರಾ ಎಂದು ಪ್ರಶ್ನಿಸಿದರು ರಾಹುಲ್ ಗಾಂಧಿಗೆ ಸಿದ್ಧರಾಮಯ್ಯ ಸರ್ಕಾರದ ಭ್ರಷ್ಟಾಚಾರದ ದಾಖಲೆ ಕಳಿಸುವುದಾಗಿ ಸಿಎಂ ಹೇಳಿದ್ದಾರೆ. ತಾಕತ್ತಿದ್ದರೆ ಸಿಎಂ ನಮ್ಮ ಸರ್ಕಾರ, ಮತ್ತು ಅವರ ಸರ್ಕಾರದ ಭ್ರಷ್ಟಾಚಾರದ ತನಿಖೆ‌ ಮಾಡಿಸಲಿ ಎಂದು ಸವಾಲಾಕಿದರು ಸಿಎಂ ಬೊಮ್ಮಾಯಿಗೆ ಧಮ್ಮಿಲ್ಲ, ಧೈರ್ಯ‌ ಇಲ್ಲ ನಮ್ಮ ಆಡಳಿತದಲ್ಲಿ ದೂರು ಬಂದಾಗ 8 ಕೇಸ್ ಸಿಬಿಐಗೆ ಕೊಟ್ಟಿದ್ದೇನೆ ಎಲ್ಲಾ ಕೇಸ್ ಗಳು ಸಿಬಿಐನಿಂದ ಬಿ ರಿಪೋರ್ಟ್ ಆಗಿದೆ. ನಮ್ಮ ಕಾಲದಲ್ಲಿ ಒಂದೇ ಒಂದು ಹಗರಣ ಇರಲಿಲ್ಲ. ಲಜ್ಜೆಗೆಟ್ಟವರು, ಮಾನಗೆಟ್ಟವರು ಅಧಿಕಾರದಲ್ಲಿ ಇರಬಾರದು ಅಂತ ಕಿಡಿಕಾರಿದ್ದಾರೆ. 

ಸಜ್ಜನ ಗೋವಿಂದಪ್ಪ ಅಂಥವರು ಶಾಸಕ ಆಗಬೇಕು. ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡಬಾರದೆಂದ ಸಿದ್ದರಾಮಯ್ಯ. ನೀವು ಮತದಾರರು ತಪ್ಪು ಮಾಡಿದರೆ ರಾಜ್ಯ ಉಳಿಯಲ್ಲ. ಪೆಟ್ರೋಲ್, ಡೀಸೆಲ್, ಗೊಬ್ಬರ, ಗ್ಯಾಸ್ ಬೆಲೆ ಏರಿಕೆ. ಲೂಟಿಕೋರ ಬಿಜೆಪಿ ಸರ್ಕಾರ ಮೊದಲು ತೊಲಗಬೇಕು. ಹಾಲು, ಮೊಸರು, ಮಜ್ಜಿಗೆ, ಮಂಡಿಕ್ಕಿ ಮೇಲೂ ಜಿಎಸ್ ಟಿ, ಬಡವರ ಸುಲಿಗೆ ಮಾಡುವ ಟ್ಯಾಕ್ಸ್ ಹೇರುವ ಸರ್ಕಾರ ತೊಲಗಲಿ. ಜಾತಿ ನೋಡದೆ ಕಾಂಗ್ರೆಸ್ಸಿಗೆ, ಬಿ.ಜಿ.ಗೋವಿಂದಪ್ಪಗೆ ಮತ ಹಾಕಿ ಎಂದ ಸಿದ್ದರಾಮಯ್ಯ. ಹೊಸದುರ್ಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಿಸಿದರಾ ಸಿದ್ಧರಾಮಯ್ಯ? ಎಂಬ ಪ್ರಶ್ನೆ‌ ಹಲವರಲ್ಲಿ ಕಾಡಿತ್ತು 2023ರ ಎಪ್ರಿಲ್ ನಲ್ಲಿ ನಡೆಯುವ ಚುನಾವಣೆಯಲ್ಲಿ ಗೋವಿಂದಪ್ಪಗೆ ಮತ ಹಾಕಿ ಎಂದು ಮನವಿ ಮಾಡಿದರು.
 

click me!