
ರಾಯಚೂರು (ಸೆ.12) : ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಸುದ್ದಿಗೋಷ್ಠಿ ಕರೆಯಲಾಗಿದೆ. ಸುದ್ದಿಗೋಷ್ಠಿಗಾಗಿ ಹಾಕಿದ ಬ್ಯಾನರ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರ ಭಾವಚಿತ್ರ ಕಾಣೆಯಾಗಿದೆ. ಎಐಸಿಸಿ(AICC) ಕಾರ್ಯದರ್ಶಿ ರಾಹುಲ್ ಗಾಂಧಿ(Rahul Gandhi) ಹಮ್ಮಿಕೊಂಡಿರುವ ಭಾರತ ಐಕ್ಯತಾ ಯಾತ್ರೆ(Bharat Jodo Yatra) ನಿಮಿತ್ತ ಡಿ.ಕೆ.ಶಿವಕುಮಾರ(D.K.Shivakumar) ಸ್ಥಳ ಪರಿಶೀಲನೆಗೆ ಆಗಮಿಸಿದ್ದಾರೆ. ಈ ವೇಳೆ ಸುದ್ದಿಗೋಷ್ಠಿ ಕರೆದಿದ್ದು, ಬ್ಯಾನರ್(Banner) ಹಾಕಲಾಗಿದೆ. ಆದರೆ, ಸ್ಥಳೀಯ ನಾಯಕರ ಕಣ್ತಪ್ಪಿನಿಂದ ಆಗಿದೆಯೋ ಅಥವಾ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆಯೋ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಭಾವಚಿತ್ರ ಮಾತ್ರ ಕೈಬಿಡಲಾಗಿದೆ.
ಇನ್ನೂ ಬ್ಯಾನರ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ಚರ್ ಖಂಡ್ರೆ(Eshwar Khandre), ಎನ್.ಎಸ್ .ಬೋಸರಾಜು(N.S.Bosaraju), ಮಾಜಿ ಸಚಿವ ಎಚ್. ಆಂಜನೇಯ(H.Anjaneya), ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ(Amaregowda Bhayyapur), ಮಾಜಿ ಶಾಸಕ ಹಂಪನಗೌಡ ಬಾದರ್ಲ,(Hampangowda badarli) ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್Basangowda Daddal, ಲಿಂಗಸೂಗೂರು ಶಾಸಕ ಡಿ.ಎಸ್. ಹೂಲಗೇರಿ(D.S.Holageri) , ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ(Basanagowda Turvihal) ಹಾಗೂ ಎಂಎಲ್ ಸಿ ಶರಣಗೌಡ ಭಯ್ಯಾಪೂರ ಮತ್ತು ಮಾಜಿ ಶಾಸಕರ ಫೋಟೋ ಗಳು ಬ್ಯಾನರ್ ನಲ್ಲಿ ಹಾಕಲಾಗಿದೆ. ಆದ್ರೆ ಪಕ್ಷದ ಮಾಜಿ ಸಿಎಂ ಫೋಟೋ ಕೈಬಿಟ್ಟಿದ್ದು ಸಿದ್ದರಾಮಯ್ಯ ಅಭಿಮಾನಿಗಳಿಗೆ ಬೇಸರವಾಗಿದೆ.
ಮೋದಿಯನ್ನ ಮಣಿಸೋಕೆ ರಾಹುಲ್ ಗಾಂಧಿ ಸಜ್ಜು, ಸಫಲವಾಗುತ್ತಾ‘ಭಾರತ್ ಜೋಡೋ ಯಾತ್ರೆ’ ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.