ಕೆಪಿಸಿಸಿ ಅಧ್ಯಕ್ಷ ಹುದ್ದೆ: ಡಿಕೆಶಿ ಸುತ್ತ 4 ಗೋಡೆ ಕಟ್ಟಿದ ಸಿದ್ದರಾಮಯ್ಯ

By Suvarna News  |  First Published Jan 17, 2020, 5:54 PM IST

ಕಗ್ಗಂಟಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಆಯ್ಜೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಅಂತಿಮಗೊಂಡಿದ್ದು, ಹೈಕಮಾಂಡ್‌ನಿಂದ ಅಧಿಕೃತ ಆದೇಶ ಹೊರ ಬೀಳುವುದೊಂದೇ ಬಾಕಿ ಇದೆ.  ಆದ್ರೆ, ಕೆಪಿಸಿಸಿ ಅಧ್ಯಕ್ಷರಿಗೆ ಸಿದ್ದರಾಮಯ್ಯ ನಾಲ್ಕು ಗೋಡೆಗಳನ್ನು ಕಟ್ಟಿಬಂದಿದ್ದಾರೆ. 


ಬೆಂಗಳೂರು, (ಜ.17): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಅಂತಿಮಗೊಂಡಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ.  ಆದ್ರೆ, ಡಿಕೆಶಿ ಯಾವುದು ಬೇಡ ಎಂದಿದ್ದರೋ ಅದನ್ನೇ ಸಿದ್ದರಾಮಯ್ಯ ಮಾಡಿ ಬಂದಿದ್ದಾರೆ.

ಹೌದು...ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಎಂ.ಬಿ.ಪಾಟೀಲ್ ಪರ ಬ್ಯಾಟಿಂಗ್ ಮಾಡಿದ್ದರು. ಅಲ್ಲದೇ ಡಿಕೆಶಿಗೆ ನೀಡುವುದರಾದರೆ 4 ಕಾರ್ಯಧ್ಯಕ್ಷರುಗಳನ್ನು ನೇಮಿಸುವಂತೆ ಹೈಕಮಾಂಡ್‌ಗೆ ತಿಳಿಸಿಬಂದಿದ್ದಾರೆ.

Tap to resize

Latest Videos

ಸಿದ್ದರಾಮಯ್ಯ ಅವರ ಅಭಿಪ್ರಾಯದಂತೆ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟುವುದರ ಜತೆಗೆ ನಾಲ್ವರನ್ನು ಕಾರ್ಯಧ್ಯಕ್ಷರ ನೇಮಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಸಿದೆ.

ಕಾಂಗ್ರೆಸ್‌ನಲ್ಲಿ 'ಸಂ'ಕ್ರಾಂತಿ: ಕುತೂಹಲ ಮೂಡಿಸಿದ ಸಿದ್ದು ಡಿಕೆಶಿ ಭೇಟಿ

ಗುರುವಾರ ಅಷ್ಟೇ ಆಂಧ್ರಪ್ರದೇಶ ಕಾಂಗ್ರೆಸ್‌ಗೆ ಸಹ ಇಬ್ಬರು ಕಾರ್ಯಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಐದು ಮಂದಿ ಕಾರ್ಯಧ್ಯಕ್ಷರನ್ನು ಕಾಂಗ್ರೆಸ್ ನೇಮಕ ಮಾಡಿದೆ. ಕೊಂಕಣ್ ಮತ್ತು ಪುಣೆ, ನಾಗ್ಪುರ, ನಾಸಿಕ್, ಔರಂಗಬಾದ್ ಹಾಗೂ ಅಮರಾವತಿ ಪ್ರಾಂತ್ಯಗಳಿಗೆ ಒಂದೊಂದು ಕಾರ್ಯಧ್ಯಕ್ಷ ಸ್ಥಾನ ನೀಡಲಾಗಿದೆ.   

ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಪ್ರಾಂತ್ಯಗಳಿಗೆ ಒಂದೊಂದು ಕಾರ್ಯಧ್ಯಕ್ಷ ಸ್ಥಾನ ನೀಡಲಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಸಿದ್ದರಾಮಯ್ಯನವರ ಕೈ ಇದೆ. 

4 ಸಮುದಾಯದ 4 ಹೆಸರು
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದಡಿಯಲ್ಲಿ ಹೈಕಮಾಂಡ್ ಕಂದಾಯ ವಲಯವಾರು 4  ಕಾರ್ಯಧ್ಯಕ್ಷರನ್ನು ನೇಮಕ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಕಲಬುರಗಿ ವಿಭಾಗಕ್ಕೆ ಈಶ್ವರ್ ಖಂಡ್ರೆ (ಲಿಂಗಾಯತ), ಬೆಳಗಾವಿ ವಲಯಕ್ಕೆ ಸತಿಶ್ ಜಾರಕಿಹೊಳಿ (ಎಸ್‌ಟಿ), ಮೈಸೂರು ವಿಭಾಗಕ್ಕೆ ಮಾಜಿ ಸಂಸದ ಆರ್. ಧ್ರುವನಾರಾಯಣ (ಎಸ್‌ಸಿ)  ಬೆಂಗಳೂರು ವಲಯಕ್ಕೆ ಜಮೀರ್ ಅಹ್ಮದ್ ಖಾನ್ (ಮುಸ್ಲಿಂ) ಅವರನ್ನು ಕಾರ್ಯಧ್ಯಕ್ಷರನ್ನಾಗಿ ಮಾಡಲು ಚಿಂತನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಅಧಿಕೃತ ಪ್ರಕಟಣೆಯನ್ನು ತಡೆಹಿಡಿದೆ. 

ಕೆಪಿಸಿಸಿ ಅಧ್ಯಕ್ಷ ಹುದ್ದೆ: ಡಿಕೆ ಶಿವಕುಮಾರ್ ಕಟ್ಟಿ ಹಾಕಲು ಸಿದ್ದರಾಮಯ್ಯ ಹೊಸ ತಂತ್ರ

ಡಿಕೆಶಿಗೆ ಬೇಡವಾಗಿರುವ ಕಾರ್ಯಧ್ಯಕ್ಷ ಹುದ್ದೆ
ಇತ್ತೀಚೆಗೆ ಬೆಂಗಳೂರಿನಲ್ಲಿ ಪರಮೇಶ್ವರ ನಿವಾಸದಲ್ಲಿ ನಡೆದ ಕಪಿಸಿಸಿ ಅಧ್ಯಕ್ಷ ಆಯ್ಕೆ ಸಂಬಂಧ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಧ್ಯಕ್ಷರ ನೇಮಕ ಮಾಡಲು ಅಭಿಪ್ರಾಯ ತಿಳಿಸಿದರು. ಆದ್ರೆ, ಇದಕ್ಕೆ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಪರ್ಸನಲ್ ಆಗಿ ಇತ್ತೀಚೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾರ್ಯಧ್ಯಕ್ಷ ಸ್ಥಾನ ಏಕೆ..? ಆ ಹುದ್ದೆ ಸೃಷ್ಟಿ ಬೇಡವೆಂದು ಮನವಿ ಮಾಡಿದ್ದರು.

 ಡಿಕೆಶಿ ಸುತ್ತ ನಾಲ್ಕು ಗೋಡೆ 
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ರಾಜಕೀಯ ಬಾಂಧವ್ಯ ಅಷ್ಟಕಷ್ಟೇ. ಇದು ಎಲ್ಲರಿಗೂ ತಿಳಿದಿರುವ ವಿಚಾರವೇ. ಇದೀಗ ಡಿಕೆಶಿ ಕೆಪಿಸಿಸಿ ಪಟ್ಟಕಟ್ಟಲು ಹೈಕಮಾಂಡ್‌ ತೀರ್ಮಾನಿಸಿರುವ ಬೆನ್ನಲ್ಲೇ ಇದಕ್ಕೆ ಸಿದ್ದರಾಮಯ್ಯ ಕಾರ್ಯಧ್ಯಕ್ಷ ಎನ್ನುವ ನಾಲ್ಕು ಅಡ್ಡಗೋಡೆಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ತಮ್ಮ ಹಠ ಸಾಧಿಸುವಲ್ಲಿ ಯಶ್ವಿಯಾಗಿದ್ದಾರೆ.

click me!