ಧರ್ಮ ವಿಭಜನೆ ಬಗ್ಗೆ ನಾನೂ ವಿರೋಧಿಸಿದ್ದೆ, ಅದು ತಪ್ಪು ಎಂದಿದ್ದೆ: ಡಿಕೆಶಿ

By Govindaraj SFirst Published Aug 21, 2022, 5:15 AM IST
Highlights

ಬಾಳೇಹೊನ್ನೂರಿನ ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿ ಸಿದ್ದರಾಮಯ್ಯ ಆಶೀರ್ವಾದ ಪಡೆದಿದ್ದಾರೆ. ಅವರಿಬ್ಬರ ಸಂಭಾಷಣೆ ನನಗೆ ಗೊತ್ತಿಲ್ಲ. ಮನುಷ್ಯ ತಪ್ಪು ಮಾಡಿದರೆ ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರು (ಆ.21): ಬಾಳೇಹೊನ್ನೂರಿನ ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿ ಸಿದ್ದರಾಮಯ್ಯ ಆಶೀರ್ವಾದ ಪಡೆದಿದ್ದಾರೆ. ಅವರಿಬ್ಬರ ಸಂಭಾಷಣೆ ನನಗೆ ಗೊತ್ತಿಲ್ಲ. ಮನುಷ್ಯ ತಪ್ಪು ಮಾಡಿದರೆ ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಧರ್ಮದ ಆಶೀರ್ವಾದ ನಮಗೆ ಬೇಕು. ನಿನ್ನೆ ಸ್ವಾಮೀಜಿ ಜೊತೆಗೆ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಅವರು ಏನು ಮಾತನಾಡಿದ್ದಾರೆ ಎಂಬುದು ನನಗೆ ನನಗೆ ಗೊತ್ತಿಲ್ಲ. 

ಕ್ಷಮೆ ಕೇಳುವುದರಲ್ಲಿ ತಪ್ಪೇನೂ ಇಲ್ಲ. ನಾವೇನೂ ದೇವರಲ್ಲ. ಅಂದು ನಾನು ಕೂಡ ಕ್ಯಾಬಿನೆಟ್‌ನಲ್ಲಿ ಇದ್ದೆ. ಸಾಕಷ್ಟುವಿರೋಧ ಮಾಡಿದ್ದೆ. ಜೊತೆಗೆ ಈ ಬಗ್ಗೆ ಹಿಂದೆಯೇ ನಾನು ಬಹಿರಂಗವಾಗಿ ಕ್ಷಮೆ ಕೇಳಿದ್ದೆ. ಧರ್ಮದ ವಿಚಾರದಲ್ಲಿ ಕೈ ಹಾಕಬಾರದೆಂದು ಹೇಳಿದ್ದೆ ಎಂದು ತಿಳಿಸಿದರು. ಹಿಂದುತ್ವವನ್ನು ಕಾಂಗ್ರೆಸ್‌ ಒಪ್ಪಿಕೊಳ್ಳಲಿ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್‌ ಅವರು, ನಾನೇನು ಹಿಂದು ಅಲ್ವೇನ್ರಿ? ಗಾಂಧಿ ಪರಿವಾರ ಕಾಶ್ಮೀರದ ಪಂಡಿತರು. 

ನಾನೇನು ಹಿಂದೂ ಅಲ್ವೇನ್ರಿ?, ಹಿಂದುತ್ವ ಅವರಪ್ಪನ ಆಸ್ತಿನಾ?: ಬಿಜೆಪಿಗರ ವಿರುದ್ಧ ಡಿಕೆಶಿ ಗರಂ

25 ವರ್ಷಗಳ ಹಿಂದೆ ಯುಗಾದಿ ಹಬ್ಬದ ದಿನ ಸೋನಿಯಾಗಾಂಧಿ ಅವರ ಮನೆಗೆ ಹೋಗಿದ್ದೆವು. ಸೋನಿಯಾ ಅವರು ಯುಗಾದಿ ಹಬ್ಬ ಆಚರಿಸುತ್ತಿದ್ದರು. ಹಾಗೆಯೇ ನಮ್ಮ ತಂದೆತಾಯಿ ನನಗೆ ಶಿವನ ಮಗ ಕುಮಾರ ಅಂದರೆ ಶಿವಕುಮಾರ ಎಂದು ಹೆಸರು ಇಟ್ಟಿದ್ದಾರೆ. ಸಿದ್ದರಾಮಯ್ಯಗೆ ಅವರ ಮನೆ ದೇವರ ಹೆಸರು ಇಟ್ಟಿದ್ದಾರೆ. ನಾವೇನು ಕಲ್ಲು, ಮಣ್ಣು ಅಂತ ಹೆಸರು ಇಟ್ಟುಕೊಂಡಿದ್ದೇವಾ? ಹಿಂದುತ್ವ ಅವರಪ್ಪನ ಆಸ್ತಿನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ತಿ ಉಳಿಸಿಕೊಳ್ಳೋದು ವಿರೋಧ ಪಕ್ಷ ಜವಾಬ್ದಾರಿ: ಸರ್ಕಾರದ ಆಸ್ತಿಗಳನ್ನು ಉಳಿಸಿಕೊಳ್ಳುವುದು ವಿರೋಧ ಪಕ್ಷದ ಸ್ಥಾನದಲ್ಲಿರುವ ನಮ್ಮ ಜವಾಬ್ದಾರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಶನಿವಾರ ರಾಜ್ಯ ಸರ್ಕಾರ ನಗರದ ಚಿಕ್ಕಪೇಟೆಯ ರಜತಾ ಕಾಂಪ್ಲೆಕ್ಸ್‌ನಲ್ಲಿರುವ ಸರ್ಕಾರಿ ಪ್ರೌಢ ಶಾಲೆಯನ್ನು ಹರಾಜಿಗೆ ಇಟ್ಟಿರುವ ಹಿನ್ನೆಲೆಯಲ್ಲಿ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರಿ ಶಾಲೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ. ದಾಖಲೆಗಳು ಇಲ್ಲದೇ ಏನೂ ಮಾತನಾಡಲು ಸಾಧ್ಯವಿಲ್ಲ. ಇಲ್ಲಿನ ವರ್ತಕರು ಕೆಲವೊಂದು ಸಮಸ್ಯೆ ಇದೆ ಎಂದಿದ್ದಾರೆ. 

ಈ ಬಗ್ಗೆ ನಾವೆಲ್ಲ ಕುಳಿತು ಚರ್ಚೆ ಮಾಡುತ್ತೇವೆ. ಸರ್ಕಾರದ ಆಸ್ತಿ ಉಳಿಸುವ ಪ್ರಯತ್ನ ಮಾಡುತ್ತೇವೆ ಎಂದರು. ಸರ್ಕಾರ ಆಯಾ ಸಮಯಕ್ಕೆ ಕೆಲವೊಂದು ಪಾಲಿಸಿ ಮಾಡುತ್ತದೆ. ಅವುಗಳನ್ನು ಮತ್ತು ದಾಖಲೆಗಳನ್ನು ನೋಡಿಕೊಂಡು ಮುಂದೆ ಮಾತನಾಡುತ್ತೇನೆ. ಸರ್ಕಾರಿ ಸ್ವತ್ತುಗಳನ್ನು ಉಳಿಸಲು ಸರ್ವ ಪ್ರಯತ್ನ ಮಾಡುವುದರ ಜೊತೆಗೆ ಸರ್ಕಾರವೂ ಕೂಡ ಸರ್ಕಾರಿ ಆಸ್ತಿಯನ್ನು ಮಾರಾಟ ಮಾಡದೆ ಉಳಿಸಬೇಕು ಎಂಬುದು ನಮ್ಮ ಆಗ್ರಹ ಎಂದು ಹೇಳಿದರು. ಚಿಕ್ಕಪೇಟೆಯ ರಜತ ಕಾಂಪ್ಲೆಕ್ಸ್‌ನಲ್ಲಿರುವ ಸರ್ಕಾರಿ ಶಾಲೆ ಕಟ್ಟಡ ಎನ್ನುವುದಕ್ಕೆ ದಾಖಲೆಗಳಿಲ್ಲದ ಕಾರಣಕ್ಕೆ ಕಂದಾಯ ಇಲಾಖೆ ಜಾಗವನ್ನು ಮಾರಾಟಕ್ಕೆ ಇಟ್ಟಿದೆ. 

ಇಂಧನ ಇಲಾಖೆಯಲ್ಲಿ ಒಳ ಒಪ್ಪಂದ ಆರೋಪ, ಸಿಬಿಐ ತನಿಖೆಗೆ ಡಿಕೆಶಿ ಒತ್ತಾಯ

1945ರಲ್ಲಿ ದಾನಿಗಳು ಈ ಜಾಗವನ್ನು ಸರ್ಕಾರಿ ಶಾಲೆ ಕಟ್ಟಲು ಕೊಟ್ಟಿದ್ದರು. 1979ರಲ್ಲಿ ರಜತ ಎಂಟರ್‌ ಪ್ರೈಸಸ್‌ ಶಿಥಿಲಾವಸ್ಥೆ ಕಟ್ಟಡವನ್ನು ಸರ್ಕಾರದಿಂದ ಭೋಗ್ಯಕ್ಕೆ ಪಡೆದುಕೊಂಡಿತ್ತು. 2005ರಲ್ಲಿ ಗುತ್ತಿಗೆ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ 2011ರಲ್ಲಿ ರಜತ ಕಾಂಪ್ಲೆಕ್ಸ್‌ ಬಾಡಿಗೆದಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ .6.41 ಕೋಟಿಗೆ 10 ವರ್ಷಕ್ಕೆ ಗುತ್ತಿಗೆ ನೀಡಲಾಗಿತ್ತು. ಇದೀಗ ಗುತ್ತಿಗೆ ಪಡೆದವರು ಜಾಗ ನಮ್ಮದು ಎನ್ನುತ್ತಿದ್ದಾರೆ. ಸರ್ಕಾರದ ಬಳಿ ದಾಖಲೆಗಳಿಲ್ಲದ ಕಾರಣ ಕಂದಾಯ ಇಲಾಖೆ ಜಾಗವನ್ನು ಹರಾಜಿಗೆ ಇಟ್ಟಿದೆ. ಶಾಲೆಯನ್ನು ಉಳಿಸಿಕೊಳ್ಳಲು ಶಾಲಾ ಆಡಳಿತ ಮಂಡಳಿ ಪರದಾಡುತ್ತಿದೆ.

click me!