ಸಿದ್ದು, ಎಂ.ಬಿ.ಪಾಟೀಲ್‌ ಬಿಜೆಪಿಗೆ ಬರ್ತಾರೆ: ಕಟೀಲ್‌ ಬಾಂಬ್‌

Kannadaprabha News   | Asianet News
Published : Oct 09, 2021, 08:49 AM IST
ಸಿದ್ದು, ಎಂ.ಬಿ.ಪಾಟೀಲ್‌ ಬಿಜೆಪಿಗೆ ಬರ್ತಾರೆ: ಕಟೀಲ್‌ ಬಾಂಬ್‌

ಸಾರಾಂಶ

*  ಬಿಜೆಪಿ ಕದ ತಟ್ಟಲಿದ್ದಾರೆ ಸಿದ್ದರಾಮಯ್ಯ *  ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ತಮ್ಮ ಆಡಳಿತ ಅವಧಿಯಲ್ಲಿನ ಹಿಂದೂತ್ವ ನೆನಪಾಗಲಿಲ್ಲ *  ಹಿಂದೂ ದೇವಾಲಯಗಳ ರಕ್ಷಣೆಗೆ ಗಟ್ಟಿ ತೀರ್ಮಾನ ತೆಗೆದುಕೊಂಡ ಸಿಎಂಗೆ ಅಭಿನಂದನೆ

ವಿಜಯಪುರ(ಅ.09): ಉಪಚುನಾವಣೆಯಲ್ಲಿ(Byelection) ಬಿಜೆಪಿ ಜಯಭೇರಿ ಬಾರಿಸಿದ ನಂತರ ಮಾಜಿ ಸಿಎಂ ಸಿದ್ದರಾಮಯ್ಯನವರು(Siddaramaiah) ಬಿಜೆಪಿ ಬಾಗಿಲು ತಟ್ಟುತ್ತಾರೆ. ಮಾತ್ರವಲ್ಲದೆ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಕೂಡ ಬಿಜೆಪಿಗೆ ಬರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬಾಂಬ್‌ ಸಿಡಿಸಿದ್ದಾರೆ.

ವಿಜಯಪುರದ(Vijayapura) ಕಿತ್ತೂರ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ವಿವಿಧ ಪಕ್ಷ ತೊರೆದು ಬಿಜೆಪಿ(BJP) ಸೇರ್ಪಡೆಗೊಂಡ ಮುಖಂಡರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದ ಅವರು, ಎಂ.ಬಿ. ಪಾಟೀಲರ(MB Patil) ಮನೆ ಈಗ ಖಾಲಿಯಾಗುತ್ತಾ ಸಾಗುತ್ತಿದೆ. ಮುಂದೆ ಅವರು ಸಹ ಬಿಜೆಪಿಗೆ ಬರುತ್ತಾರೆ ಎಂದರು. ಅಷ್ಟೇ ಅಲ್ಲ ಈ ವಿಷಯ ಕೇಳಿ ಯತ್ನಾಳರಿಗೆ ಖುಷಿಯಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ಸಿದ್ದರಾಮಯ್ಯ ಅವರು ಸಹ ಬಿಜೆಪಿ ಬಾಗಿಲು ತಟ್ಟುತ್ತಾರೆ ಎಂದರು. ದೇಶದಲ್ಲಿ ರಾಷ್ಟ್ರಹಿತ, ಕುಟುಂಬ ಹಿತ ಬಯಸುವ ಪಕ್ಷಗಳಿವೆ, ಬಿಜೆಪಿ ರಾಷ್ಟ್ರಹಿತ ಬಯಸುವ ಪಕ್ಷ ಎಂದರು.

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ(HD Kumaraswamy) ಅವರಿಗೆ ತಮ್ಮ ಆಡಳಿತ ಅವಧಿಯಲ್ಲಿನ ಹಿಂದೂತ್ವ(Hindutwa) ನೆನಪಾಗಲಿಲ್ಲ. ಆದರೆ ಈಗ ಏಕಾಏಕಿಯಾಗಿ ಹಿಂದೂಗಳ ಪರ ಮಾತನಾಡುತ್ತಾರೆ. ಹಿಂದೂ ದೇವಾಲಯಗಳ ರಕ್ಷಣೆಗೆ ಗಟ್ಟಿ ತೀರ್ಮಾನ ತೆಗೆದುಕೊಂಡ ಬೊಮ್ಮಾಯಿ(Basavaraj Bommai) ಅವರನ್ನು ಅಭಿನಂದಿಸುವುದಾಗಿ ಕಟೀಲ್‌ ಹೇಳಿದರು.

ಕಾಂಗ್ರೆಸ್ ಸೋಲಿಸಲು ಮುಸ್ಲಿಂ ಅಭ್ಯರ್ಥಿ ಆರೋಪ: ದೇವೇಗೌಡ ಕೆಂಡಾಮಂಡಲ

ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು. ಮುಂದಿನ ಚುನಾವಣೆ ಯಲ್ಲಿ 8 ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಸಿಂದಗಿಯಲ್ಲಿ(Sindagi) ನಮ್ಮ ಪಕ್ಷದ ಅಭ್ಯರ್ಥಿಗೆಲ್ಲಿಸಿ ಕೊಡಿ ಎಂದರು. ಎಳ್ಳಷ್ಟು ನಿಮ್ಮ ಪ್ರೀತಿ, ವಿಶ್ವಾಸಕ್ಕೆ ವಂಚನೆ ಮಾಡಲ್ಲ, ಸಚಿವ ಸ್ಥಾನದ ಬಗ್ಗೆಯೂ ವರಿಷ್ಠರಿಗೆ ಗಮನ ಹರಿಸಲಾಗುವುದು ಎಂದರು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಮಾತನಾಡಿ, ಬಿಜೆಪಿ ಕಟ್ಟುವ ಸಂದರ್ಭದಲ್ಲಿ ಚಹಾ ಕೂಡಾ ಕೊಡುತ್ತಿರಲಿಲ್ಲ, ಮುಂದಿನ ಜಂಗಿ ನಿಕಾಲಿ ಕುಸ್ತಿ ಬಿಜೆಪಿ ವರ್ಚಸ್‌ ಕಾಂಗ್ರೆಸ್‌(Congress), ಜೆಡಿಎಸ್‌(JDS) ಅಂತೂ ತಾಲಿಬಾನಗೆ ಮಾರಾಟವಾಗಿದೆ, ಕರೆಕ್ಟ್ ಕ್ಯಾಂಡಿಡೇಟ್‌ ಸೆಲೆಕ್ಟ್ ಮಾಡಿಕೊಡಿ. ಎಂಟಕ್ಕೆ ಎಂಟು ಕ್ಷೇತ್ರ ಹೊರಗೆ ತೆಗೆಯುತ್ತವೆ ಎಂದರು.

ಇಂಡಿ ವಿಧಾನಸಭೆ 20 ಸಾವಿರ, ನಾಗಠಾಣ ಮತಕ್ಷೇತ್ರದಲ್ಲಿ ಗೆದ್ದೆ ಗೆಲ್ಲುತ್ತಿವೆ, ವಿಜಯಪುರ ಜನತೆ ಅಣೆಕಟ್ಟೆಗೆ ತ್ಯಾಗ ಮಾಡಿದರು, ಬಂಗಾರದಿಂದ ತೂಗಿದರು. ಈಗ ಮಂತ್ರಿಗಿರಿ ತ್ಯಾಗ ಮಾಡಿದ್ದಾರೆ, ನನ್ನನ್ನು ಬಿಡಿ ಜಿಲ್ಲೆಯ ಒಬ್ಬರನ್ನು ಸಚಿವರನ್ನಾಗಿ ಮಾಡಿ ಎಂದರು.

ಅನೇಕರು ಪಕ್ಷದ ವರಿಷ್ಠರನ್ನು ಕಿವಿ ತುಂಬುತ್ತಿರುತ್ತಾರೆ. ಯತ್ನಾಳ ಸರಿಯಿಲ್ಲ. ನಾಲಿಗೆ ಸರಿಯಿಲ್ಲ ಎನ್ನುತ್ತಾರೆ, ಹಣೆಬರದ ಚೆನ್ನಾಗಿತ್ತು ಎಂದರೆ ಯಾರೂ ತಪಗ್ಪಿಸಲಿಕ್ಕೆ ಆಗಲ್ಲ ಎಂದರು. ನನ್ನನ್ನು ಸರಿಯಗಿ ಉಪಯೋಗಿಸಿಕೊಳ್ಳಿ, ಏನೇ ಆದರೂ ಇಲ್ಲಂತೂ ನಾನೇ ಎಂಎಲ್‌ಎ ಎಂದರು. ನನ್ನ ಮುಗಿಸಬೇಕಂದವರನ್ನು ನಾನು ಬಿಟ್ಟಿಲ್ಲ ಎಂದರು.

ಗಾಂಧಿಯನ್ನೇ ಬಿಟ್ಟಿಲ್ಲ ನಿಮ್ಮನ್ನು ಬಿಡುತ್ತಾ ಬಿಜೆಪಿ?: ಪ್ರಜ್ವಲ್‌ ರೇವಣ್ಣ

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ(Laxman Savadi) ಮಾತನಾಡಿ, ಒಳಒಪ್ಪಂದ ರಾಜಕಾರಣ ಬೇಡ, ನಿಮ್ಮ ತಂದೆ-ತಾಯಿಮೇಲೆ ಪ್ರಮಾಣ ಮಾಡಿ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ವಿಜಯಪುರ ಜಿಲ್ಲೆಯಲ್ಲಿ ಪಕ್ಷಕ್ಕೆ ಬಾಧೆಯಿಲ್ಲ ಎಂದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಮಾತನಾಡಿದರು. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಸಂಸದ ರಮೇಶ ಜಿಗಜಿಣಗಿ, ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ವಿ.ಪ. ಸದಸ್ಯ ಅರುಣ ಶಹಾಪುರ, ಆರ್‌.ಎಸ್‌. ಪಾಟೀಲ ಕುಚಬಾಳ, ಮಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಹೇಶ ಟೆಂಗಿನಕಾಯಿ, ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸೇರಿದಂತೆ ಅನೇಕರು ಇದ್ದರು.

ಪಕ್ಷ ಸೇರ್ಪಡೆ:

ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡ ಅಪ್ಪುಗೌಡ ಪಾಟೀಲ ಮನಗೂಳಿ, ಜಿ.ಪಂ. ಮಾಜಿ ಅಧ್ಯಕ್ಷರಾದ ಉಮೇಶ ಕೋಳಕೂರ, ಶಿವಯೋಗೆಪ್ಪ ನೇದಲಗಿ, ಶಿವಶರಣ ಭೈರಗೊಂಡ, ಸುರೇಶಗೌಡ ಬಿರಾದಾರ ಮೊದಲಾದವರು ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ