ತಮ್ಮ ಆಪ್ತ ಸಹಾಯಕ ಮೇಲೆ ಐಟಿ ದಾಳಿ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಬಿಎಸ್‌ವೈ

By Suvarna News  |  First Published Oct 8, 2021, 9:06 PM IST

* ಬಿಎಸ್‌ವೈ ಆಪ್ತ ಸಹಾಯಕರಾಗಿದ್ದ ಉಮೇಶ್ ಮೇಲೆ ಐಟಿ ದಾಳಿ
 * ಈ ದಾಳಿಗೆ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಯಡಿಯೂರಪ್ಪ
* ಇದೇ ವೇಳೆ ಸಿಂದಗಿ ಹಾಗೂ ಹಾನಗಲ್ ಬೈ ಎಲೆಕ್ಷನ್‌ ಬಗ್ಗೆಯೂ ಪ್ರತಿಕ್ರಿಯೆ
 


ಶಿವಮೊಗ್ಗ, (ಅ.08): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಆಪ್ತ ಸಹಾಯಕರಾಗಿದ್ದ ಉಮೇಶ್ ನಿವಾದಲ್ಲಿ ಆದಾಯ ತೆರಿಗೆ ಅಧಿಕಾರಿಗಳು (Income Tax Department) ದಾಳಿ ಮಾಡಿದ್ದು, ಹಲವು ಮಹತ್ವದ ದಾಖಲೆಗಳು ಸಿಕ್ಕಿವೆ. 

ಇನ್ನು ಈ ದಾಳಿಗೆ ಸ್ವತಃ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಶಿವಮೊಗ್ಗದಲ್ಲಿ (Shivamogga) ಇಂದು (ಅ.08) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾವು ತಪ್ಪು ಮಾಡಿಲ್ಲ, ಆಪ್ತ ಉಮೇಶ್ ಮನೆಯ ಮೇಲಿನ ಐಟಿ ದಾಳಿಯಿಂದ (IT Raid) ನಮಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Latest Videos

undefined

ಯಡಿಯೂರಪ್ಪ ಆಪ್ತನಿ​ಗೆ ಗೇಟ್​ ಪಾಸ್​ ನೀಡಿದ ಸಿಎಂ ಬೊಮ್ಮಾಯಿ

ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ.ಅದನ್ನ ತಡಿಯೋಕೆ ನಾವ್ಯಾರು? ಅವರ ಡ್ಯೂಟಿ ಅವರು ಮಾಡುತ್ತಾರೆ. ಐಟಿ ದಾಳಿಗೂ ನಮ್ಮ ಕುಟುಂಬದವರಿಗೆ ಯಾವುದೇ ಸಂಬಂಧ ಇಲ್ಲ. ನಾವು ತಪ್ಪು ಮಾಡಿಲ್ಲ. ನಮಗೆ ಯಾವುದೇ ತೊಂದರೆ ಇಲ್ಲ.ಅದಕ್ಕೆ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ.ನಿಶ್ಚಿತವಾಗಿ ಯಾವುದೇ ಸಮಸ್ಯೆಯಿಲ್ಲ.ವಿಪಕ್ಷಗಳಿಗೆ ಹೇಳಲು ಏನೂ ಇಲ್ಲವಾಗಿದ್ದು ,ಅದಕ್ಕೆ ಈ ವಿಷಯ ಹೇಳುತ್ತಿದ್ದಾರೆ ಎಂದರು.

ಇನ್ನು ಇದೇ ವೇಳೆ ಸಿಂದಗಿ ಹಾಗೂ ಹಾನಗಲ್ ಬೈ ಎಲೆಕ್ಷನ್‌ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿಯವರ (Narendra Modi) ಕಾರ್ಯ ಹಾಗೂ ನಮ್ಮ ಸರಕಾರದ ಒಳ್ಳೆಯ ಕಾರ್ಯಗಳಿಂದಾಗಿ ಉಪಚುನಾವಣೆಯ By Election) ಎರಡೂ ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. ನಾನು ಹಾಗೂ ವಿಜಯೇಂದ್ರ ಎರಡೂ ಕ್ಷೇತ್ರದಲ್ಲಿ ಓಡಾಟ ಮಾಡುತ್ತೇವೆ. ಕೊನೆಯ 2-3 ದಿನ ಸಮಯ ಮಾಡಿಕೊಂಡು ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

ಬೇರೆಯವರ ಟೀಕೆ ಟಿಪ್ಪಣಿಗೆ ನಾನು ಉತ್ತರ ಕೋಡಲು ಹೋಗುವುದಿಲ್ಲ. ಬೆಲೆ ಏರಿಕೆಯ Price Hike) ಕಾರಣಗಳು ಜನರಿಗೆ ಗೊತ್ತಿದೆ. ವಿಶ್ವಕ್ಕೆ ಗೊತ್ತಿದೆ. ಈ ಕಾರಣ ಇಟ್ಟುಕೊಂಡು ಚುನಾವಣೆಯಲ್ಲಿ ಜನ ಹಿನ್ನಡೆ ಮಾಡುತ್ತಾರೆ ಎಂದು ನನಗೆ ಅನ್ನಿಸಿಲ್ಲ ಎಂದು ತಿಳಿಸಿದರು.

ಆರ್ ಎಸ್ ಎಸ್ (RSS) ಕುರಿತ ಕುಮಾರಸ್ವಾಮಿ (HD Kumaraswamy) ಅವರ ಹೇಳಿಕೆ‌ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಕುಮಾರಸ್ವಾಮಿ ಅವರ ಹತ್ತಿರ ಮಾತನಾಡುತ್ತೇನೆ. ಬಾಯಿತಪ್ಪಿ ಎನೋ ಎರಡು- ಮೂರು ಮಾತನಾಡಿದ್ದಾರೆ. ತಪ್ಪು ಗ್ರಹಿಕೆ ಅಗಿರಬಹುದು. ನಾನೇ ಹೋಗಿ ಕುಳಿತು ಅವರ ಬಳಿ ಮಾತನಾಡುತ್ತೇನೆ ಎಂದರು.

click me!