ಕೇಂದ್ರ ಅಕ್ಕಿ ನೀಡುತ್ತಿದೆ ಎಂದು ಸತ್ಯ ಹೇಳಿ ಸಿದ್ದರಾಮಯ್ಯನವರೇ: ಕೋಟ

By Kannadaprabha News  |  First Published Jun 16, 2023, 11:58 AM IST

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುವ ಉಚಿತ ಅಕ್ಕಿಯಲ್ಲಿ ಒಂದು ಗ್ರಾಂ ಕೂಡ ಕಡಿಮೆ ಮಾಡಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡುತ್ತಿಲ್ಲ ಎಂದು ಆತ್ಮವಂಚನೆಯ ಮಾತುಗಳನ್ನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.


ಉಡುಪಿ (ಜೂ.16) ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುವ ಉಚಿತ ಅಕ್ಕಿಯಲ್ಲಿ ಒಂದು ಗ್ರಾಂ ಕೂಡ ಕಡಿಮೆ ಮಾಡಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡುತ್ತಿಲ್ಲ ಎಂದು ಆತ್ಮವಂಚನೆಯ ಮಾತುಗಳನ್ನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕೇಳಿರುವ 10 ಕೆಜಿ ಅಕ್ಕಿಯನ್ನೂ ಉಚಿತ ಓಪನ್‌ ಟೆಂಡರ್‌ನಲ್ಲಿ ಕೊಡುವುದಾಗಿ ಕೇಂದ್ರ ಹೇಳಿದೆ. ಆದರೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುವುದಾಗಿ ಹೇಳಿ, ಈಗ ಅದನ್ನು ಜಾರಿಗೆ ತರುವಲ್ಲಿ ತಮ್ಮ ವೈಫಲ್ಯ ಮುಚ್ಚಲು ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸತ್ಯಕ್ಕೆ ಅಪಚಾರ ಮಾಡುತಿದ್ದಾರೆ ಎಂದು ಶ್ರೀನಿವಾಸ್‌ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ವಿದ್ಯುತ್‌ ದರವನ್ನು ಇಳಿಸಲಿ: ಕಾಂಗ್ರೆಸ್‌ ಸರ್ಕಾರಕ್ಕೆ ಕೋಟ ಸವಾಲು

ಈಗಾಗಲೇ ಕೇಂದ್ರ ಸರ್ಕಾರ ಉಚಿತವಾಗಿ 5 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಅದಕ್ಕೆ ಹಿಂದೆ ಕೆಜಿ ಅಕ್ಕಿಗೆ ಕೇಂದ್ರ ಸರ್ಕಾರ 29 ರು. ರಾಜ್ಯ ಸರ್ಕಾರ(Karnataka government) 3 ರು. ಕೊಡಬೇಕಾಗಿತ್ತು. ಈಗ ಕೇಂದ್ರ ಸರ್ಕಾರವೇ ಪೂರ್ಣ ವೆಚ್ಚವನ್ನು ಭರಿಸಿ, ಸಂಪೂರ್ಣ ಉಚಿತವಾಗಿ ರಾಜ್ಯಕ್ಕೆ ಕೊಡುತ್ತಿದೆ. ಸಿದ್ದರಾಮಯ್ಯನವರೇ ಈ ಸತ್ಯವನ್ನು ರಾಜ್ಯದ ಜನತೆಗೆ ಹೇಳಿ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಪ್ರಣಾಳಿಕೆ(Congress manifesto) ಮತ್ತು ಭಾಷಣದಲ್ಲಿ ರಾಜ್ಯದ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಎಂದು ಘೋಷಿಸಿದ್ದು, ಕೇಂದ್ರ ಸರ್ಕಾರ ನೀಡುವ 5 ಕೆಜಿಯನ್ನು ಬಿಟ್ಟು ರಾಜ್ಯ ಸರ್ಕಾರ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುಬೇಕು, ಚುನಾವಣೆಗೆ ಮುಂಚಿತವಾಗಿ ಕೊಟ್ಟಭರವಸೆಯನ್ನು ಈಡೇರಿಸಬೇಕು ಎಂದವರು ಹೇಳಿದರು.

 

ಅಕ್ಕಿ ಕೊಡುತ್ತೇವೆಂದು ಒಪ್ಪಿ ಈಗ ಕೈ ಕೊಟ್ಟ ಕೇಂದ್ರ ಸರ್ಕಾರ: ಸಿಎಂ ಸಿದ್ದು ಗಂಭೀರ ಆರೋಪ

click me!