ಮನೆಗೆ ಕರೆಸಿಕೊಂಡು ಜಮೀರ್‌ಗೆ ಸಿದ್ದರಾಮಯ್ಯ ಫುಲ್ ಕ್ಲಾಸ್...!

ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮರ್‌ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.


ಬೆಂಗಳೂರು, (ಸೆ.11): ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬೆಂಗಳೂರಿನ ಚಾಮರಾಜಪೇಟೆ ಕಾಂಗ್ರೆಸ್ ಜಮೀರ್ ಅಹ್ಮದ್ ಖಾನ್ ಅವರ ಹೆಸರು ಕೇಳಿಬರುತ್ತಿದೆ.

ಹೌದು... ಶ್ರೀಲಂಕಾದ ಕ್ಯಾಸಿನೋಗೆ ಜಮೀರ್ ಅಹ್ಮದ್ ಮತ್ತು ನಟಿ ಸಂಜನಾ ಹೋಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಅವರು ಗಂಭೀರ ಆರೋಪ ಮಾಡಿದ್ದಾರೆ.  ಇದರಿಂದ ಕಾಂಗ್ರೆಸ್‌ ಪಕ್ಷಕ್ಕೆ ಡ್ಯಾಮೇಜ್ ಆಗುವ ಭೀತಿ ಎದುರಾಗಿದೆ.

Latest Videos

"

ಇದರಿಂದ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್‌ ಖಾನ್ ಅವರನ್ನ ತಮ್ಮ ನಿವಾಸಕ ಕರೆಸಿಕೊಂಡು ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಂಜನಾ ಜತೆ ಕ್ಯಾಸಿನೋದಲ್ಲಿದ್ರು ಎಂದ ಸಂಬರಗಿ ವಿರುದ್ಧ ಕೇಸ್ ಜಡಿದ ಶಾಸಕ ಜಮೀರ್

ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿ ಇರುವ ತಮ್ಮ ನಿವಾಸಕ್ಕೆ ಜಮೀರ್​ರನ್ನು ಕರೆಸಿಕೊಂಡ ಸಿದ್ದರಾಮಯ್ಯ ಅವರು  ಈ ಬಗ್ಗೆ ವಿವರಣೆ ಕೇಳಿದರು.  'ಏನಪ್ಪ ಜಮೀರ್ ನಿನ್ನ ಹೆಸರು ಮೀಡಿಯಾದಲ್ಲಿ ಬರ್ತಿದೆ. ಪ್ರತಿ ಬಾರಿಯೂ ನಿನ್ನ ಹೆಸರು ಬರುತ್ತೆ' ಎಂದು ಪಶ್ನಿಸಿದ್ದಾರೆ.

'ಈ ಹಿಂದೆ ಪಾದರಾಯನಪುರ, ಡಿಜೆ ಹಳ್ಳಿ ಗಲಭೆಯಲ್ಲೂ ನಿನ್ನ ಹೆಸರು ಕೇಳಿಬಂತು. ಇದೀಗ ಡ್ರಗ್ಸ್ ಕೇಸ್​ನಲ್ಲೂ ನಿನ್ನದೇ ಹೆಸರು ಬರ್ತಿದೆ. ಏನು ಸಮಾಚಾರ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

"

ಇದಕ್ಕೆ ಪ್ರತಿಕ್ರಿಯಿಸಿದ ಜಮೀರ್​, ಆರೋಪ ಮಾಡುತ್ತಿರುವ ವ್ಯಕ್ತಿಯೂ ಗೊತ್ತಿಲ್ಲ. ಆ ಸಂಜನಾ ಕೂಡ ನನಗೆ ಗೊತ್ತಿಲ್ಲ ಸರ್. ಆದರೂ ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ. ಈ ಸಂಬಂಧ ಪ್ರಶಾಂತ್​ ಸಂಬರಗಿ ವಿರುದ್ಧ ಕ್ರಿಮಿನಲ್ ಒಳಸಂಚು, ಉದ್ದೇಶಪೂರ್ವಕವಾಗಿ ಅಪಮಾನ, ನಕಲಿ ದಾಖಲೆ ಸೃಷ್ಟಿ, ಉದ್ದೇಶ ಪೂರ್ವಕವಾಗಿ ದುಷ್ಕೃತ್ಯ ಎಸಗಿರುವ ಬಗ್ಗೆ ಕೇಸ್​ ದಾಖಲಿಸಿಸುವೆ' ಎಂದು ವಿವರಿಸಿದರು.

ಈ ಹಿಂದೆ ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಪ್ರಕರಣದಲ್ಲೂ ಆರೋಪಿಗಳ ಬೆನ್ನಿಗೆ ನಿಂತು ವಿವಾದಕ್ಕೀಡಾಗಿದ್ದ ಜಮೀರ್‌ನನ್ನು ಸಿದ್ದರಾಮಯ್ಯ ತರಾಟೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

click me!