ನಾನು ಮುಖ್ಯಮಂತ್ರಿಯಾಗಬೇಕಾದರೆ ನೀವು ಬಾದಾಮಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆದರೂ ಅವರಿಗೆ ಮತ ನೀಡಬೇಕು ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಂದೆ ಸಿಎಂ ಆಗ್ತೀನಿ ಎಂಬ ಸಂದೇಶ ನೀಡಿದ್ದಾರೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಮಾ.24): ನಾನು ಮುಖ್ಯಮಂತ್ರಿಯಾಗಬೇಕಾದರೆ ನೀವು ಬಾದಾಮಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆದರೂ ಅವರಿಗೆ ಮತ ನೀಡಬೇಕು ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಂದೆ ಸಿಎಂ ಆಗ್ತೀನಿ ಎಂಬ ಸಂದೇಶ ನೀಡಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬಾದಾಮಿ ಜನ ನನ್ನ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದೀರಿ. ನಾನು ಚಾಮುಂಡೇಶ್ವರಿಯಿಂದ ಕೆಲಸ ಮಾಡಿದರೂ ಸಹ ಅವರು ನನ್ನ ಕೈ ಬಿಟ್ಟರು. ನೀವು ಬಿಡಲಿಲ್ಲ. ರಾಜಕೀಯವಾಗಿ ನನಗೆ ಶಕ್ತಿ ಕೊಟ್ಟಿದ್ದೀರಿ. ಆಶೀರ್ವಾದ ಮಾಡಿದಿರಿ. ಬಾದಾಮಿ ಕ್ಷೇತ್ರದ ಜನರಿಗೆ ಕೋಟಿ ಕೋಟಿ ನಮಸ್ಕಾರಗಳು ಎಂದರು.
undefined
ಮಾತು ಮುಂದುವರಿಸಿದ ಅವರು ನಿಮ್ಮನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ.ನಿಮ್ಮ ಋಣ ತೀರಿಸಲು ಸಾದ್ಯವಿಲ್ಲ. ಬಾದಾಮಿ ಜನ ಯಾವಾಲೂ ನನ್ನ ಮನದಲ್ಲಿ ಇರುತ್ತಾರೆ. ಕ್ಷೇತ್ರದ ಎಲ್ಲ ನಾಯಕರು ನನಗೆ ಬೆಂಬಲಿಸಿದರು. ನನಗೆ ಟಿಕೆಟ್ ಕೊಟ್ಟಾಗ ಎರಡ್ಮೂರು ಬಾರಿ ಮಾತ್ರ ಬಂದಿದ್ದೆ. ತಾವೆಲ್ಲ ನನ್ನ ಮೇಲೆ ವಿಶ್ವಾಸ ಇಟ್ರಿ, ಅದಕ್ಕೆ ನಾನು ಚಿರ ಋಣಿ ಎಂದರು.
Breaking ವರುಣಾ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ, ಎರಡು ಕಡೆ ನಿಲ್ಲುವ ಇಂಗಿತ!
ನೀವೆಲ್ಲಾ ನನ್ನ ಸಹಾಯಕ್ಕೆ ನಿಂತಿದ್ದೀರಿ. ನಾನು ಹೆಚ್ಚಾಗಿ ಬರಲಿಕ್ಕೆ ಆಗಲಿಲ್ಲ. ಆದರೂ ಸಹ ನೀವ್ಯಾರು ಬೇಸರ ಮಾಡಿಕೊಳ್ಳಲಿಲ್ಲ.ತಕರಾರು ಹೇಳಲಿಲ್ಲ. 5 ವರ್ಷ ಸಹಕರಿಸಿದ್ದೀರಿ. ನಾನು 5 ವರ್ಷ ಏನೆಲ್ಲಾ ಮಾಡಬೇಕೋ ಮಾಡಿದ್ದೇನೆ. 4 ಸಾವಿರ ಕೋಟಿಗೂ ಅಧಿಕ ಹಣ ಅನುದಾನ ತಂದಿದ್ದೇನೆ. ನಾನು ಬಂದ ಮೇಲೆ ಹೊಳೆ ನೀರು ಬಿಡಿಸಿ ನದಿ ಬತ್ತದಂತೆ ನೋಡಿಕೊಂಡಿದ್ದೇನೆ ಎಂದರು.
ವಿನಯ್ ಕುಲಕರ್ಣಿಗೆ ಶಿಗ್ಗಾವಿ ಟಿಕೆಟ್ ನೀಡದಂತೆ ಅಲ್ಪಸಂಖ್ಯಾತ ಮುಖಂಡರ ಆಗ್ರಹ!
ನಾನು ಸ್ಫರ್ಧೆ ಮಾಡಬೇಕಾದರೆ ಹೈಕಮಾಂಡ್ ನಿರ್ಧಾರ ಮಾಡಬೇಕು. ಹೈಕಮಾಂಡ್ ಬಾದಾಮಿಯಿಂದ ನಿಲ್ಲು ಅಂದ್ರೆ ನಿಲ್ಲುತ್ತೇನೆ. ಯಾರೇ ಅಭ್ಯರ್ಥಿ ಆದರೂ ನಾನೇ ಅಂತ ನೀವು ಮತ ಹಾಕಬೇಕು. ನಾನು ರಾಜಕೀಯದಿಂದ ನಿವೃತ್ತಿ ಆಗೋದಿಲ್ಲ. ನಾನು ಇರೋತನಕ ನಿಮ್ಮ ಕ್ಷೇತ್ರದ ಋಣ ತೀರಿಸೋ ಕೆಲಸ ಮಾಡುತ್ತೇನೆ. ನಿಮ್ಮ ಬೇಡಿಕೆ ಹೈಕಮಾಂಡ್ ಗೆ ತಿಳಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.