ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಅದರಲ್ಲೀಗ ನಮ್ಮ ಟಗರು (ಸಿದ್ದರಾಮಯ್ಯ) ಕುಳಿತಿದೆ. ಟಗರನ್ನು ಕುರ್ಚಿಯಿಂದ ಇಳಿಸೋದು ಬಹಳ ಕಷ್ಟ. ಟಗರ ಕೊಂಬು ಮುರಿಯೋದು ಸಾಧ್ಯವೇ ಇಲ್ಲ, ಟಗರು ಟಗರೇ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಹೇಳಿದರು.
ಹಾವೇರಿ (ಸೆ.05): ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಅದರಲ್ಲೀಗ ನಮ್ಮ ಟಗರು (ಸಿದ್ದರಾಮಯ್ಯ) ಕುಳಿತಿದೆ. ಟಗರನ್ನು ಕುರ್ಚಿಯಿಂದ ಇಳಿಸೋದು ಬಹಳ ಕಷ್ಟ. ಟಗರ ಕೊಂಬು ಮುರಿಯೋದು ಸಾಧ್ಯವೇ ಇಲ್ಲ, ಟಗರು ಟಗರೇ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಹೇಳಿದರು. ಇಲ್ಲಿಯ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಒಪ್ಪಿದರೆ ನಾನು ಸಿಎಂ ಆಗಲು ಸಿದ್ಧ ಎಂಬ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತೆ. ಆದರೆ, ಸಿಎಂ ಕುರ್ಚಿ ಸದ್ಯಕ್ಕೆ ಖಾಲಿಯಿಲ್ಲ ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣನನ್ನು ನಮ್ಮವರೇ ಹಿಡಿದುಕೊಟ್ಟರು. ನಮ್ಮವರೇ ನಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ ಎಂಬರ್ಥದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, ಶತ್ರುಗಳು ಮನುಷ್ಯನಿಗೆ ಇರುವುದು ಸಹಜ. ಎಲ್ಲರಿಗೂ ಶತ್ರುಗಳು ಇರುತ್ತಾರೆ. ನನ್ನ ಜೊತೆನೇ ಇರ್ತಾರೆ ಯಾರು ಶತ್ರು, ಯಾರು ಮಿತ್ರ ಅಂತಾ ಹೇಗೆ ಗೊತ್ತಾಗುತ್ತೆ..?, ಆ ಲೆಕ್ಕದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ದಸರಾ ಅದ್ಧೂರಿ ಆಚರಣೆಗೆ ಉಪ ಸಮಿತಿಗಳು ಉತ್ತಮ ಸಿದ್ಧತೆ ನಡೆಸಿ ಯಶಸ್ವಿಗೊಳಿಸಿ: ಸಚಿವ ಮಹದೇವಪ್ಪ
ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ ಅಮಾನತು ವಿಚಾರ ನನಗೆ ಗೊತ್ತಿಲ್ಲ, ಅವರು ಅಮಾನತು ಆಗೋದಕ್ಕೂ ಸಿಎಂ ಸಿದ್ದರಾಮಯ್ಯನವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು. ದರ್ಶನ್ ವಿಚಾರವಾಗಿ ಮಾಧ್ಯಮದಲ್ಲಿ ನನ್ನ ಹೆಸರು ಸೇರಿಸಿದ್ದಾರೆ. ನಾನು ದರ್ಶನ್ ಮೊದಲಿನಿಂದಲೂ ಆತ್ಮೀಯ ಸ್ನೇಹಿತರು. ಆದರೆ ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದ್ದಾರೆ. ಸುಮ್ಮನೇ ಯಾರಾದರೂ ಜೈಲಿಗೆ ಹೋಗ್ತಾರಾ ಎಂದು ಪ್ರಶ್ನಿಸಿದರು.
ಮುಸ್ಲಿಂರಿಗೆ ಶಿಗ್ಗಾಂವಿ ಟಿಕೆಟ್ ನೀಡಲು ಒತ್ತಾಯ: ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ನೀಡುವಂತೆ ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದ್ದೇವೆ. ಮೊದಲಿನಿಂದಲೂ ಮುಸ್ಲಿಂರಿಗೆ ಟಿಕೆಟ್ ನೀಡುತ್ತಾ ಬರಲಾಗಿದೆ. ಈ ಬಾರಿಯೂ ಮುಸ್ಲಿಂರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದೇವೆ. ಪಕ್ಷ ೫ ಬಾರಿ ಈಗಾಗಲೇ ಮುಸ್ಲಿಂರಿಗೆ ಟಿಕೆಟ್ ಕೊಟ್ಟಿದೆ. ಸೋತಿದ್ದಾರೆ, ಆಗಲ್ಲ ಅಂದರು. ಆದರೆ, ಈ ಸಾರಿ ಮುಸ್ಲಿಂರಿಗೆ ಟಿಕೆಟ್ ಕೊಡಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದ್ದೇವೆ. ನಾವು ಟಿಕೆಟ್ ಕೇಳಬಹುದು ಅಷ್ಟೇ.
ಕೊಡಗಿನಲ್ಲಿ ಸುರಿದ ಭಾರೀ ಮಳೆಗೆ ಧರೆಗುರುಳಿವೆ 3,077 ವಿದ್ಯುತ್ ಕಂಬಗಳು: 4.83 ಕೋಟಿ ರೂಪಾಯಿ ನಷ್ಟ
ಆದರೆ, ಹೈಕಮಾಂಡ್ ತೀರ್ಮಾನವೇ ಅಂತಿಮ. ಮುಸ್ಲಿಂರಿಗೆ ಟಿಕೆಟ್ ನೀಡುವ ನಿರೀಕ್ಷೆ ನಮಗಿದೆ ಎಂದರು. ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ಇದೆ. ಆದರೆ, ಬಿಜೆಪಿಯಲ್ಲಿ ಟಿಕೆಟ್ ಕೇಳೋರೇ ಇಲ್ಲ. ಮುಂಬರುವ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಗೆಲುವು ಸಾಧಿಸುವ ಹಗಲು ಕನಸು ಕಾಣ್ತಿದ್ದಾರೆ ಎಂದು ಟೀಕಿಸಿದರು.