ಸಂಸದ ಡಿ.ಕೆ.ಸುರೇಶ್ ಹೇಳಿಕೆ, ನಾಚಿಗೇಡಿತನವಾಗಿದೆ. ಅದು ವಿಪಕ್ಷ ನಾಯಕ ಖರ್ಗೆ ಅವರ ಘನತೆಗೆ ಕುತ್ತು ತಂದಿದೆ. ಇದೇ ರೀತಿಯ ಕಾಂಗ್ರೆಸ್‌ನವರ ಹೇಳಿಕೆಯಿಂದ ತುರ್ತು ಪರಿಸ್ಥಿತಿ ತಂದು, ಅದರ ಶಾಪದಿಂದ ಇವತ್ತು ವಿರೋಧ ಪಕ್ಷದಲ್ಲಿ ಕೂರದಷ್ಟು ಪರಿಸ್ಥಿತಿ ಕಾಂಗ್ರೆಸ್‍ಗೆ ಬಂದಿದೆ: ಸಂಸದ ಬಿ.ವೈ.ರಾಘವೆಂದ್ರ
ಶಿವಮೊಗ್ಗ(ಫೆ.11): ದೇಶ ವಿಭಜನೆ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರ ಪಾಪದ ಕೊಡ ತುಂಬುತ್ತಿದೆ ಎಂದು ಸಂಸದ ಬಿ.ವೈ.ರಾಘವೆಂದ್ರ ಕಿಡಿಕಾರಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್ ಹೇಳಿಕೆ, ನಾಚಿಗೇಡಿತನವಾಗಿದೆ. ಅದು ವಿಪಕ್ಷ ನಾಯಕ ಖರ್ಗೆ ಅವರ ಘನತೆಗೆ ಕುತ್ತು ತಂದಿದೆ. ಇದೇ ರೀತಿಯ ಕಾಂಗ್ರೆಸ್‌ನವರ ಹೇಳಿಕೆಯಿಂದ ತುರ್ತು ಪರಿಸ್ಥಿತಿ ತಂದು, ಅದರ ಶಾಪದಿಂದ ಇವತ್ತು ವಿರೋಧ ಪಕ್ಷದಲ್ಲಿ ಕೂರದಷ್ಟು ಪರಿಸ್ಥಿತಿ ಕಾಂಗ್ರೆಸ್‍ಗೆ ಬಂದಿದೆ. ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿ ಹೇಳಿಕೆ ನೀಡಿದಾಗ ಅವರ ಪಕ್ಷದ ನಾಯಕರು ಕಿವಿ ಹಿಂಡಬೇಕು. ಅವರ ತಪ್ಪಿನ ಅರಿವನ್ನು ಮಾಡಿಕೊಳ್ಳದೆ ಹೊದರೆ ಲೋಕಸಭಾ ಚುನಾವಣೆಯಲ್ಲಿ ಉತ್ತರ ಸಿಗುತ್ತೆ ಎಂದು ಎಚ್ಚರಿಕೆ ನೀಡಿದರು.
ಹಿಂದೂಗಳ ತೆರಿಗೆ ಹಿಂದೂಗಳಿಗೆ ನೀಡಬೇಕು ಎನ್ನುವ ಹರೀಶ್ ಪುಂಜಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಪಂಚದಲ್ಲಿ ಇರುವ ಹಿಂದೂ ರಾಷ್ಟ್ರ ಇದೊಂದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಪದೇ ಪದೇ ತರುತ್ತಿದ್ದಾರೆ. ಅವರ ನೋವಿನ ಭಾವನೆಗಳನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಸಂಸದ ಡಿ.ಕೆ.ಸುರೇಶ್ ಹೇಳಿಕೆಯಲ್ಲಿ ರಾಜಕೀಯ ಮಾಡಲ್ಲ: ಕೆ.ಎಸ್.ಈಶ್ವರಪ್ಪ
ಕಪ್ಪುಪತ್ರ ತೋರಿಸುವುದು ರಾಜಕೀಯ ಗಿಮಿಕ್ ಅಷ್ಟೇ. ಅದಕ್ಕೆ ಬೆಲೆಯಾಗಲಿ, ತೂಕ ಆಗಲಿ ಇಲ್ಲ. ರಾಜ್ಯ ಸರ್ಕಾರ ಹಿಂದೂಗಳ ಮನಸ್ಥಿತಿ ತುಳಿಯುವ ಕೆಲಸ ಮಾಡುತ್ತಿದೆ. ಹನುಮಧ್ವಜ ಹಾಕುವ ವಿಚಾರದಲ್ಲಿ ಚರ್ಚೆಗಳು, ಎಳೆದಾಟಗಳು ನಡೆಯುತ್ತಿವೆ. ಬಂದ್ ಪರಿಸ್ಥಿತಿಗೆ ಹೋಗಬಾರದು. ಸರ್ಕಾರ ಹಿಂದೂಗಳ ಮನಸ್ಥಿತಿ ತುಳಿಯುವ ಕೆಲಸ ಮಾಡುತ್ತಿದೆ. ತುಷ್ಟೀಕರಣ ರಾಜಕೀಯದಿಂದ ಅಲ್ಪಸಂಖ್ಯಾತರ ಮತ ಪಡೆಯಬಹುದು ಅಂತಾ ಕಾಂಗ್ರೆಸ್‌ನವರು ಅಂದುಕೊಂಡಿದ್ದಾರೆ. ಹಿಂದೂಗಳ ವಿರುದ್ಧ ನಡೆದುಕೊಳ್ಳುವುದನ್ನು ಕಾಂಗ್ರೆಸ್‍ನವರು ಬಿಡಬೇಕು ಎಂದು ಚಾಟಿ ಬೀಸಿದರು.