ಕೇವಲ ಎಂಇಎಸ್‌ನಿಂದ ಚುನಾಯಿತರಾದ ಶಾಸಕರು ಮಾತ್ರ ವಿಧಾನಸಭೆಯಲ್ಲಿ ಗಡಿಭಾಗದ ಮರಾಠಿಗರ ಧ್ವನಿ ಎತ್ತಲಿದ್ದಾರೆ. ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಎಂಇಎಸ್ ಮತ್ತು ಶಿವಸೇನೆ ಜಂಟಿಯಾಗಿ ಕಣಕ್ಕಿಳಿದಿದೆ. ಮರಾಠಿ ಭಾಷಿಕರ ಹಿತಾಸಕ್ತಿಗಾಗಿ ಎಂಇಎಸ್ ಗೆಲ್ಲಿಸಬೇಕು ಎಂದು ಕೋರಿದ ಸಂಜಯ ರಾವೂತ್
ಖಾನಾಪುರ(ಮೇ.05): ಮಹಾರಾಷ್ಟ್ರದ ಬಿಜೆಪಿ ಮುಖಂಡರಿಗೆ ಈಗ ಗಡಿವಿವಾದ ನೆನಪಿಗೆ ಬಂದಿದೆ. ಉಳಿದ ದಿನಗಳಲ್ಲಿ ಅವರಿಗೆ ಗಡಿಭಾಗದ ಮರಾಠಿಗರ ಭವಣೆ ಕೇಳಿಸುವುದಿಲ್ಲ. ಹೀಗಾಗಿ ಬಿಜೆಪಿ ಮರಾಠಿಗರ ವಿರೋಧಿ ಎಂಬುವುದು ತಿಳಿದು ಬರುತ್ತದೆ ಎಂದು ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಹಾಗೂ ಶಿವಸೇನೆ ವಕ್ತಾರ ಸಂಜಯ ರಾವೂತ್ ಗುಡುಗಿದರು.
ಪಟ್ಟಣದಲ್ಲಿ ಬುಧವಾರ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಅಭ್ಯರ್ಥಿ ಮುರಳೀಧರ ಪಾಟೀಲ ಪರ ಆಯೋಜಿಸಿದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೇವಲ ಎಂಇಎಸ್‌ನಿಂದ ಚುನಾಯಿತರಾದ ಶಾಸಕರು ಮಾತ್ರ ವಿಧಾನಸಭೆಯಲ್ಲಿ ಗಡಿಭಾಗದ ಮರಾಠಿಗರ ಧ್ವನಿ ಎತ್ತಲಿದ್ದಾರೆ. ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಎಂಇಎಸ್ ಮತ್ತು ಶಿವಸೇನೆ ಜಂಟಿಯಾಗಿ ಕಣಕ್ಕಿಳಿದಿದೆ. ಮರಾಠಿ ಭಾಷಿಕರ ಹಿತಾಸಕ್ತಿಗಾಗಿ ಎಂಇಎಸ್ ಗೆಲ್ಲಿಸಬೇಕು ಎಂದು ಕೋರಿದರು.
ಸಾಹುಕಾರಗಿರಿ ಪದ್ಧತಿ ದೂರು ಮಾಡಿ: ಎಚ್.ಡಿ.ಕುಮಾರಸ್ವಾಮಿ
ಪ್ರಚಾರ ಸಭೆಗೂ ಮುಂಚೆ ರಾವೂತ್ ಸ್ಥಳೀಯ ಎಂಇಎಸ್ ಮುಖಂಡರು ಮತ್ತು ಕಾರ್ಯಕರ್ತರೊಟ್ಟಿಗೆ ಪಟ್ಟಣದ ಶಿವಸ್ಮಾರಕ ವೃತ್ತದಿಂದ ಅರ್ಬನ್ ಬ್ಯಾಂಕ್ ವೃತ್ತದವರೆಗೆ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಎಂಇಎಸ್ ಅಧ್ಯಕ್ಷ ಗೋಪಾಳ ದೇಸಾಯಿ, ಮಾಜಿ ಶಾಸಕ ದಿಗಂಬರ ಪಾಟೀಲ ಮತ್ತಿತರರು ಇದ್ದರು.
ಜೈ ಮಹಾರಾಷ್ಟ್ರ, ಮಹಾರಾಷ್ಟ್ರಕ್ಕೆ ಖಾನಾಪುರ ಸೇರಿಸಿ
ಪ್ರಚಾರ ಸಭೆ ಮತ್ತು ರೋಡ್ ಶೋ ಸಂದರ್ಭದಲ್ಲಿ ಎಂಇಎಸ್ ಮುಖಂಡರು ಮತ್ತು ಕಾರ್ಯಕರ್ತರು ಜೈ ಮಹಾರಾಷ್ಟ್ರ ಮತ್ತು ಖಾನಾಪುರವನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಸಂಯುಕ್ತ ಮಹಾರಾಷ್ಟ್ರ ರಚಿಸಬೇಕು ಎಂಬ ಘೋಷಣೆಗಳನ್ನು ಕೂಗಿದರು.
ಬಿಜೆಪಿಯವರು ತಮ್ಮ ವೈಯುಕ್ತಿಕ ವರ್ಚಸ್ಸನ್ನು ಬಳಸಿ ಚುನಾವಣೆ ಎದುರಿಸದೇ ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕೆ ದೇಶದ ಉನ್ನತ ಹುದ್ದೆಯಲ್ಲಿರುವ ಪ್ರಧಾನಿ ಮೋದಿ ಬರುತ್ತಿದ್ದಾರೆ. ದೆಹಲಿಯಲ್ಲಿದ್ದು ನಮ್ಮ ದೇಶದ ಆಡಳಿತ ವ್ಯವಸ್ಥೆ ನೋಡಬೇಕಾಗಿದ್ದ ಪ್ರಧಾನಿ ವಾರಗಟ್ಟಲೇ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಬಂದು ರಾಜ್ಯ ಸುತ್ತುತ್ತಿರುವುದು ಹಾಸ್ಯಾಸ್ಪದ. ಇದು ದೇಶದ ಪ್ರಧಾನಿ ಹುದ್ದೆಯಲ್ಲಿರುವವರಿಗೆ ಶೋಭೆ ತರುವ ಕೆಲಸವಲ್ಲ ಅಂತ ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಹಾಗೂ ಶಿವಸೇನೆ ವಕ್ತಾರ ಸಂಜಯ ರಾವೂತ್ ತಿಳಿಸಿದ್ದಾರೆ.