ಶಿರಾ ಉಪಚುನಾವಣೆ: ಕೈ ಅಭ್ಯರ್ಥಿ ಫೈನಲ್,ಜೆಡಿಎಸ್‌-ಬಿಜೆಪಿಯಲ್ಲಿ ಟಿಕೆಟ್ ಪೈಪೋಟಿ

By Suvarna NewsFirst Published Sep 29, 2020, 4:19 PM IST
Highlights

ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ರಾಜಕೀಯ ಗರಿಗೆದರಿದ್ದು, ಜೆಡಿಎಸ್-ಬಿಜೆಪಿ ಟಿಕೆಟ್ ಫೈಟ್ ಶುರುವಾಗಿದೆ.

ತಮಕೂರು, (ಸೆ.29): ರಾಜ್ಯದ ಶಿರಾ ಹಾಗೂ ರಾಜರಾಜೇಶ್ವರಿನಗರದ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 3, 2020ರಂದು ಮತದಾನಕ್ಕೆ ದಿನಾಂಕ ನಿಗಧಿಗೊಳಿಸಿ, ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. 

ಇದರ ಬೆನ್ನಲ್ಲೆ ಉಪ ಚುನಾವಣೆಯ ಕದನ ಗರಿಗೆದರಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ಟಿಕೆಟ್ ಗಾಗಿ ಪೈಪೋಟಿ ಕೂಡ ಆರಂಭವಾಗಿದೆ. ಅದರಲ್ಲೂ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಬೈ ಎಲೆಕ್ಷನ್‌ ಅಭ್ಯರ್ಥಿ ಆಯ್ಕೆ ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಶಿರಾ ಬೈ ಎಲೆಕ್ಷನ್: ಡಿಕೆಶಿ ತಂತ್ರ ಸಕ್ಸಸ್, ಕಾಂಗ್ರೆಸ್ ಅಭ್ಯರ್ಥಿ ಫೈನಲ್

ಈಗಾಗಲೇ ಕಾಂಗ್ರೆಸ್‌ನಿಂದ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಟಿಕೆಟ್ ಖಚಿತವಾಗಿದ್ದು, ಅವರು ಪ್ರಚಾರವನ್ನು ಸಹ ಆರಂಭಿಸಿದ್ದಾರೆ. ಇನ್ನು ಬಿಜೆಪಿಯಲ್ಲಿ 4, ಜೆಡಿಎಸ್​ನಲ್ಲಿ ಇಬ್ಬರು ಟಿಕೆಟ್​ ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿದೆ.

ಬಿಜೆಪಿ ಟಿಕೆಟ್​ಗಾಗಿ ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ, ಡಾ.ರಾಜೇಶ್ ಗೌಡ, ಡಾ.ಶಿವಕುಮಾರ್ ನಡುವೆ ಪೈಪೋಟಿ ಇದ್ರೆ. ಜೆಡಿಎಸ್​ನಲ್ಲಿ ದಿವಂಗತ ಸತ್ಯನಾರಾಯಣ ಪುತ್ರ‌ ಸತ್ಯಪ್ರಕಾಶ್, ಕಲ್ಕೆರೆ ರವಿಕುಮಾರ್ ನಡುವೆ ಟಿಕೆಟ್​ಗಾಗಿ ಪೈಪೋಟಿ ಶುರುವಾಗಿದೆ.

click me!