ಶಿಗ್ಗಾಂವಿ ಟಿಕೆಟ್ ಸಿಕ್ಕ ಖುಷಿಯಲ್ಲೇ ತಂದೆ, ಅಜ್ಜನಿಂದ ಕಲಿತಿದ್ದೇನೆ ಎಂದ ಭರತ್ ಬೊಮ್ಮಾಯಿ

Published : Oct 20, 2024, 11:23 PM IST
ಶಿಗ್ಗಾಂವಿ ಟಿಕೆಟ್ ಸಿಕ್ಕ ಖುಷಿಯಲ್ಲೇ ತಂದೆ, ಅಜ್ಜನಿಂದ ಕಲಿತಿದ್ದೇನೆ ಎಂದ ಭರತ್ ಬೊಮ್ಮಾಯಿ

ಸಾರಾಂಶ

ಶಿಗ್ಗಾವಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಭರತ್ ಬೊಮ್ಮಾಯಿಗೆ ಟಿಕೆಟ್ ಘೋಷಣೆಯಾಗಿದ್ದು, ಬಸವರಾಜ ಬೊಮ್ಮಾಯಿ ಪುತ್ರ ಭರತ್, ಚುನಾವಣೆಗೆ ತಯಾರಿ ನಡೆಸಿದ್ದು, ತಂದೆ ಮತ್ತು ಅಜ್ಜನ ಮಾರ್ಗದರ್ಶನದಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ.

ಬೆಂಗಳೂರು (ಅ.20): ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಚುನಾವಣೆಗೆ ತಯಾರಿಕೆ ಗರಿಗೆದರಿದೆ.

ನವೆಂಬರ್ 23 ಕ್ಕೆ ರಿಲಸ್ಟ್ ನೋಡಿ. ನಮ್ಮ ಅಜ್ಜನೋರು ಅನೇಕ ಉತ್ತಮ ಕಾರ್ಯ ಮಾಡಿದ್ದಾರೆ. ಈಗ ನಾನು ರಾಜಕೀಯ ಎಂಟ್ರಿ ಆಗಿದೆ. ಅಜ್ಜ, ತಂದೆ, ಈಗ ನಾನು ಈ ಬಗ್ಗೆ ಖುಷಿ ಇದೆ, ನರ್ವಸ್ ಸಹ ಇದೆ. ಮಿಕ್ಸಡ್ ಫೀಲ್ ಇದೆ. ನನಗೆ ಟಿಕೆಟ್ ಆಗಿದ್ದು ಗೊತ್ತಾಗಿದ್ದೆ ಟಿವಿ ಮೂಲಕ ನಿನ್ನೆ ಎಲ್ಲೊ ಹೊರಗೆ ಇದ್ದೆ. ಟಿವಿ ನೋಡಿ ಗೊತ್ತಾಯಿತು.

ಇನ್ಫೋಸಿಸ್‌, ರಿಲಾಯನ್ಸ್ ಸೇರಿ 6 ಕಂಪೆನಿಗೆ ಷೇರುಪೇಟೆಯಲ್ಲಿ ನಷ್ಟ, ಯಾರು ಎಷ್ಟು ಸಾವಿರ ಕೋಟಿ ಕಳಕೊಂಡ್ರು?

ಚುನಾವಣೆ ತಯಾರಿ ನೋಡಿದ್ದೇನೆ. 2018 ರಿಂದ ತಂದೆ ಜೊತೆ ಕೆಲಸ ಮಾಡಿದ್ದೇನೆ. ತಂದೆಯನ್ನು ಹತ್ತಿರದಿಂದ ನೋಡಿ ಕಲಿತಿದ್ದೇನೆ. ಅಜ್ಜನನ್ನು ನೋಡಿದ್ದೇನೆ. ಚುನಾವಣೆ ಭಾಷಣ, ಮಾತುಗಾರಿಕೆ ಎಲ್ಲಾ ಕಲಿಯುತ್ತಿದ್ದೇನೆ. ನನ್ನದೇ ಆದ ಒಂದು ಶೈಲಿ ಇದೆ. ನಮ್ಮ ಪಾರ್ಟಿಯಲ್ಲಿ ಅನೇಕ ಹಿರಿಯರು ಮಾತಾಡೋದು ನೋಡಿದ್ದೇನೆ. ಮೋದಿ ಅವರ ಭಾಷಣ, ಯಡಿಯೂರಪ್ಪ ಅವರ ಶೈಲಿ, ತಂದೆಯವರ ಮಾತಿನ ಶೈಲಿ ಎಲ್ಲಾ ನೋಡಿದ್ದೇನೆ. ನಾನು ಇದು ನೋಡಿ ನನ್ನದೇ ಆದ ಶೈಲಿ ರೂಡಿಸಿಕೊಂಡಿದ್ದೇನೆ. ನಾಳೆ ಹಾವೇರಿ ಹೋಗುತ್ತೇನೆ. ಒಳ್ಳೆ ದಿನ ನೋಡಿ ನಾಮಿನೇಶನ್ ಹಾಕುತ್ತೇನೆ ಎಂದು ಭರತ್ ಬೊಮ್ಮಾಯಿ ಹೇಳಿದರು.

ಜನಸೇವೆ ಮಾಡೋಕೆ ನಂಗೆ ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಧನ್ಯವಾದಗಳು, ತಂದೆ ತಾಯಿ ಆಶಿರ್ವಾದ ದಿಂದ ನಂಗೆ ಅವಕಾಶ ಸಿಕ್ಕಿದೆ. ತಂದೆಯವರು ನಾಲ್ಕು ಬಾರಿ ಶಾಸಕರು. ತಂದೆಯವರು ಮಾಡಿದ್ದ ಕಾರ್ಯನಾನು ಮುಂದುವರಿಸುತ್ತೇನೆ. ನಾವು ಟಿಕೆಟ್ ಕೇಳಿರಲಿಲ್ಲ. ಪಾರ್ಟಿ ತೀರ್ಮಾನಕ್ಕೆ ನಾವು ಬದ್ಧ. ನಾನು 2018 ರಿಂದ ನಾನು ತಂದೆ ಜೊತೆ ಕೆಲಸ ಮಾಡಿದ್ದೇನೆ. ಮನೆ ಮನೆ ಓಡಾಟ ಮಾಡಿದ್ದೇನೆ. ಮನೆ ಮನೆಗೆ ನಾನು ಗುರುತಿಸಿಕೊಂಡಿದ್ದೇನೆ. ನಂಗೆ ಆಸಕ್ತಿ ಅಷ್ಟು ಇರಲಿಲ್ಲ. ಪಾರ್ಟಿ ತೀರ್ಮಾನ. ನಾನು ನಾಳೆ ಕ್ಷೇತ್ರಕ್ಕೆ ಹೋಗ್ತಾ ಇದ್ದೇನೆ ಎಂದರು. ಇದೆಲ್ಲದರ ನಡುವೆ BJP ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ ಮಾಡಿ ಭರತ್ ಬೊಮ್ಮಾಯಿ ಮಾತುಕತೆ ನಡೆಸಿದರು.

ಸುದೀಪ್ ತಾಯಿ ನಿಧನಕ್ಕೆ ಕನ್ನಡದಲ್ಲೇ ಪತ್ರ ಬರೆದು ಸಂತಾಪ ಸೂಚಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್

ಇನ್ನು ಮಗನಿಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಮಾತನಾಡಿದ ಸಂಸದ ಬಸವರಾಜ್ ಬೊಮ್ಮಾಯಿ ಅವರು, ನಡ್ಡಾ ಅವರು ನನಗೆ ಮಾತಾಡೋಕೆ ಅವಕಾಶವೇ ನೀಡಿಲ್ಲ. ನಿಮ್ಮ ಮಗನಿಗೆ ಟಿಕೆಟ್ ಅಂದ್ರು. ಅಲ್ಲಿ ಹೆಸರು ಮತ್ತು ಗೆಲುವು ಮುಖ್ಯ ಅಂದ್ರು. ನಾನು ಎರಡು ದಿನ ಸಮಯ ನೀಡಿ ಎಂದೆ. ಅವರು ಅದಕ್ಕೆ ಅವಕಾಶ ನೀಡಲೆ ಇಲ್ಲ. ನಿರ್ಧಾರ ಆಗಿದೆ, ಸರ್ವೆ ವರದಿ ಕೂಡ ಭರತ್ ಪರ ಇದೆ. ಅಮಿತ್ ಶಾ ಕೂಡ ಅದೇ ಹೇಳಿದರು. ಚುನಾವಣೆ ಎದುರಿಸಬೇಕು. ಚುನಾವಣೆ ಗೆಲ್ಲಬೇಕು ಎಂದರು. ಹೀಗಾಗಿ ನಾನು ತಲೆ ಬಾಗಿದ್ದೇನೆ. ಪಕ್ಷ ತೀರ್ಮಾನ ಮಾಡಿದೆ. ನಂಗೆ ಈ ಬಾರಿ ಭರತ್ ಗೆ ಟಿಕೆಟ್ ಬೇಡ ಎನ್ನೋದು ಇತ್ತು. ಆದರೆ ಪಕ್ಷ ನಂಬಿಕೆ ಇಟ್ಟು ಅವಕಾಶ ಮಾಡಿದೆ. ನಾ ಏನೆ ಆಗಿದ್ರು ಅದಕ್ಕೆ ಪಕ್ಷ ಕಾರಣ. ವಿಶ್ವಾಸ ಇಟ್ಟು ಪಕ್ಷ ತೀರ್ಮಾನ ಮಾಡಿರುವಾಗ ನಾನು ಬೇಡ ಎನ್ನಲು ಆಗಲಿಲ್ಲ. ನನ್ನ ಮನಸ್ಸಿನ ಭಾವನೆ ಏನೆ ಇದ್ದರು, ಪಾರ್ಟಿಯೆ ತೀರ್ಮಾನ ಮಾಡಿರುವಾಗ ಒಪ್ಪಿದೆ‌. ಕಾರ್ಯಕರ್ತರು ಸಹ ಕೈ ಬಿಡಬೇಡಿ ಎಂದರು. ಕಾರ್ಯಕರ್ತರು ಸಹ ಭಾವನಾತ್ಮಕ ಮಾತು ಆಡಿದ್ದಾರೆ. ಮನಸ್ಸಿನಲ್ಲಿ ಏನೆ ಇದ್ದರೂ ಸಹ
ನಾನು ಪಕ್ಷಕ್ಕಾಗಿ ಸಮಾಜಕ್ಕೆ ಒಪ್ಪಿದ್ದೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
Karnataka News Live: ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ: ಯತೀಂದ್ರಗೆ ಆಲ್ ದಿ ಬೆಸ್ಟ್ ಹೇಳಿದ ಕಾಂಗ್ರೆಸ್ ಶಾಸಕ