ಪ್ರಸ್ತುತ ಜಾತಿ ಜಾತಿಗಳ ನಡುವೆ ಒಡೆದಾಳುವ ನೀತಿ ಇದೆ. ಇದರೊಟ್ಟಿಗೆ ಕಾಂಗ್ರೇಸ್ ತುಷ್ಠೀಕರಣ ರಾಜಕಾರಣದ ಪರಾಕಾಷ್ಠೆಯನ್ನೇ ತಲುಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಹುಬ್ಬಳ್ಳಿ (ಅ.08): ಪ್ರಸ್ತುತ ಜಾತಿ ಜಾತಿಗಳ ನಡುವೆ ಒಡೆದಾಳುವ ನೀತಿ ಇದೆ. ಇದರೊಟ್ಟಿಗೆ ಕಾಂಗ್ರೇಸ್ ತುಷ್ಠೀಕರಣ ರಾಜಕಾರಣದ ಪರಾಕಾಷ್ಠೆಯನ್ನೇ ತಲುಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸರ್ಕಾರದ ವಿರುದ್ಧ ಹರಿಹಾಯ್ದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಿಂಗಾಯಿತರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸರಿಯಾದ ಸ್ಥಾನ ಮಾನ ಸಿಗದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ಆ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪನವರೇ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಅವರು ಸತ್ಯವನ್ನೇ ಹೇಳಿದ್ದಾರೆ, ಸರ್ಕಾರ ಈ ಕುರಿತು ಗಂಭಿರವಾಗಿ ಚಿಂತಿಸಬೇಕಿದೆ ಎಂದು ಹೇಳಿದರು. ಇನ್ನು, ಕಾಂಗ್ರೆಸ್‌ನ ತುಷ್ಠೀಕರಣದಿಂದಾಗಿ ಮತಾಂಧ ಶಕ್ತಿಗಳಿಗೆ ‘ನಮಗೆ ರಕ್ಷಣೆ ಇದೆ’ಎನ್ನುವ ಮನೋಭಾವನೆ ಬೆಳೆದಿದೆ ಎಂದರಲ್ಲದೆ, ಬರೀ ಅಲ್ಪಸಂಖ್ಯಾತರಷ್ಟೇ ಮತ ಹಾಕಿದ್ದಾರೆ ಎಂದು ಕಾಂಗ್ರೆಸ್ಸಿಗರು ಭಾವಿಸಿದಂತಿದೆ. ಇವರು ದೇಶದ್ರೋಹಿ ಗಳ, ಗಲಭೆಕೋರರ ಪರ ನಿಲ್ಲುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಕಂಪನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಉದ್ಯೋಗಿಗಳು!
ಬರ ಅಧ್ಯಯನ ತಡವಾಗಿ ಬರಲು ರಾಜ್ಯ ಸರ್ಕಾರ ಕಾರಣ: ಬರ ಅಧ್ಯಯನಕ್ಕೆ ಕೇಂದ್ರ ತಂಡವು ತಡವಾಗಿ ಬರಲು ರಾಜ್ಯ ಕಾಂಗ್ರೆಸ್ ಸರ್ಕಾರ ಕಾರಣ. ರಾಜ್ಯದಿಂದ ಪ್ರಸ್ತಾವನೆ ಬಂದ ಕೂಡಲೇ ಕೇಂದ್ರದಿಂದ ತಂಡ ಬಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ ಪ್ರಸ್ತಾಪ ಬಂದ ಬಳಿಕವೇ ಕೇಂದ್ರ ತಂಡ ಬರಬೇಕಾಗುತ್ತದೆ. ರಾಜ್ಯದಿಂದಲೇ ತಡವಾಗಿ ಬಂದರೆ ಏನು ಮಾಡುವುದು. ರಾಜ್ಯ ಸರ್ಕಾರ ಎಲ್ಲದಕ್ಕೂ ಕೇಂದ್ರದತ್ತ ಕೈ ತೋರಿಸಬಾರದು. ಕೆಲವು ತಾಲೂಕುಗಳು ಬರದಿಂದ ಉಳಿದಿವೆ. ಅದನ್ನು ಮೊದಲು ರಾಜ್ಯ ಸರ್ಕಾರ ಘೋಷಣೆ ಮಾಡಲಿ. ಅವರು ಇದುವರೆಗೂ ಪ್ರಸ್ತಾವನೆ ಸಲ್ಲಿಸಿಲ್ಲ ಎಂದರು. ಅಲ್ಲದೇ, ಕಾವೇರಿ ಹಾಗೂ ಬರ ವಿಷಯಕ್ಕೆ ಸ್ಪಂದಿಸಲು ಕೇಂದ್ರ ಸರ್ಕಾರ ತಯಾರಿದೆ ಎಂದರು.
ಉಗ್ರರಿಗೆ ರಾಜ್ಯ ಸರ್ಕಾರಗಳ ಅನುಕಂಪ: ಐಸಿಸ್ ಶಂಕಿತ ಉಗ್ರನಿಗೆ ಧಾರವಾಡ ನಂಟಿನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯುಪಿಎ ಕಾಲದಲ್ಲಿ ದೆಹಲಿಯಿಂದ ಹುಬ್ಬಳ್ಳಿ ವರೆಗೆ ಬಾಂಬ್ ಸ್ಫೋಟ ಆಗುತ್ತಿದ್ದವು. ಆದರೆ, ದೇಶದೊಳಗೆ ಈಗ ಆ ಚಟುವಟಿಕೆ ಇಲ್ಲ. ಕಾಶ್ಮೀರದಲ್ಲಿಯೂ ಬಹಳ ಕಡಿಮೆಯಾಗಿವೆ. ಆದರೆ ಕೆಲವು ಕಡೆ ಉಗ್ರ ಚಟುವಟಿಕೆ ಮಾಡುವವರು ಇದ್ದಾರೆ. ಎಲ್ಲಿ ರಾಜ್ಯ ಸರ್ಕಾರದ ಅನುಕಂಪ ಇರುತ್ತದೆಯೋ ಅಲ್ಲಿ ಅವರು ಈ ಕಾರ್ಯ ಮಾಡುತ್ತಾರೆ. ಅಂಥ ರಾಜ್ಯಗಳಲ್ಲಿ ಅಂಡರ್‌ಗ್ರೌಂಡ್ ಸೆಲ್‌ಗಳನ್ನು ಮಾಡುತ್ತಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ.
ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಶಾಸಕ ಯತ್ನಾಳ
ಈ ವಿಷಯದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಾವು ರಾಜಕೀಯವಾಗಿ ಏನೂ ಹೇಳುತ್ತಿಲ್ಲ. ರಾಜ್ಯ ಸರ್ಕಾರದ ಮಂತ್ರಿಗಳು ಬೇಜವಾಬ್ದಾರಿಯಿಂದ ಮಾತನಾಡಬಾರದು ಎಂದು ಪರೋಕ್ಷವಾಗಿ ಸಚಿವ ಲಾಡ್‌ಗೆ ತಿವಿದರು. ಇನ್ನು, ಲಿಂಗಾಯತರಿಗೆ ಅನ್ಯಾಯವೆಂಬ ಶಾಮನೂರ ಹೇಳಿಕೆ ವಿಚಾರವಾಗಿ, ಅವರು ಅತ್ಯಂತ ಹಿರಿಯರು. ವೀರಶೈವ ಮಹಾಸಭಾ ಅಧ್ಯಕ್ಷರು. ಎಲ್ಲ ಮಾಹಿತಿ ಇಟ್ಟುಕೊಂಡೇ ಹೇಳಿದ್ದಾರೆ. ಅವರ ಹೇಳಿಕೆ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದು ಸಚಿವ ಜೋಶಿ ಹೇಳಿದರು.