
ಬೆಂಗಳೂರು(ಮಾ. 30) ಮಾಜಿ ಸಚಿವರ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಟ್ವೀಟ್ ಸಮರ ಮಾಡಿದೆ. ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಸಂತ್ರಸ್ತೆನಿರ್ಭೀತಿಯಿಂದ ಹೇಳಿಕೆ ನೀಡಿದ್ದಾಳೆ. ನ್ಯಾಯಾಧೀಶರ ಮುಂದೆ ಅಂಜಿಕೆಯಿಲ್ಲದೆ ಉತ್ತರಿಸಿದ್ದಾಳೆ ಸಂತ್ರಸ್ತೆ ಕೋರ್ಟ್ ಗೆ ಬಂದು ಹೇಳಿಕೆ ನೀಡಿದ ಮೇಲೂ ಆರೋಪಿ ರಮೇಶ್ ಜಾರಕಿಹೊಳಿಯನ್ನು ಯಾಕೆ ಬಂಧಿಸಿಲ್ಲ? ಎಂದು ಪ್ರಶ್ನೆ ಮಾಡಿದೆ.
ರೇಪ್ ಕೇಸೋ? ಹನಿಟ್ರ್ಯಾಪೋ? ಈ 5 ಪಾಯಿಂಟ್ಸ್‌ನಲ್ಲೇ ಇತ್ಯರ್ಥ!
ಆರೋಪಿಯ ಬಂಧನ ಮಾಡಿಲ್ಲವೆಂದರೆ ಏನರ್ಥ? ಆರೋಪಿ ಬೀದಿ ಗೂಳಿಯಂತೆ ಓಡಾಡಿಕೊಂಡಿದ್ದಾನೆ. ಇನ್ನೂ ಕೂಡ ಆರೋಪಿಯನ್ನ ಬಂಧಿಸಿಲ್ಲ. ಗೃಹ ಸಚಿವ ಬೊಮ್ಮಾಯಿಯವರೇ? ಯುವತಿ ವಿಡಿಯೋ ಹೇಳಿಕೆ ನೀಡಿದಾಗಲೂ ಕೇಸ್ ಹಾಕಲಿಲ್ಲ. ದೂರು ಸಲ್ಲಿಸಿ ಎಫ್ ಐಆರ್ ದಾಖಲಾದ್ರೂ ಬಂಧಿಸಲಿಲ್ಲ. ಕೋರ್ಟ್ ಗೆ ಹಾಜರಾಗಿ ಹೇಳಿಕೆ ನೀಡಿದ್ರೂ ಆಗಲಿಲ್ಲ. ಇಷ್ಟಾದರೂ ಅತ್ಯಾಚಾರಿಬಂಧಿಸದಂತೆ ಯಾವ ಶಕ್ತಿ ತಡೆಯುತ್ತಿದೆ. ಕಾನೂನಿನ ಮೇಲಿದ್ದ ನಂಬಿಕೆಯನ್ನೇ ನಾಶಪಡಿಸಿದ್ದೀರಾ ಎಂದು ಆರೋಪಿಸಿದೆ.
ಈ ಹಿಂದೆ ಸಹ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟ್ವೀಟ್ ಸಮರ ನಡೆದಿತ್ತು. ಸಿಡಿ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಲೇ ಇದೆ. ಇದೀಗ ಯುವತಿಗೆ ಪೊಲೀಸ್ ಭದ್ರತೆ ನೀಡಲಾಗಿದ್ದು ತನಿಖೆ ಮುಗಿಯುವವರೆಗೂ ಭದ್ರತೆ ನೀಡಲಾಗುತ್ತ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.