ಬೆಂಗಳೂರು(ಮಾ.  30)  ಸಿಡಿ ಪ್ರಕರಣದಲ್ಲಿ ಒಂದಿಷ್ಟು ಅಂಶಗಳನ್ನು  ಮತ್ತೆ ಮತ್ತೆ ನೋಡಬೇಕು. ಒಂದಿಷ್ಟು ಪ್ರಶ್ನೆಗಳು ಹಾಗೆ ಉಳಿದುಕೊಂಡಿದ್ದು ಯುವತಿ ಹೇಳಿಕೆ  ನಂತರ ಅವಕ್ಕೆ ಉತ್ತರ ಸಿಗಬಹುದು. ಯುವತಿ ಹೇಳಿಕೆ ನಂತರ ಯಾವೆಲ್ಲ ಪರಿಣಾಮ ಆಗಲಿದೆ?

1.ರಮೇಶ್ ಜಾರಕಿಹೊಳಿ ಬಂಧನ? ;  ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿ ಈ ಹಿಂದೆ ಲಿಖಿತ ದೂರಿನಲ್ಲಿ ಆರೋಪ ಮಾಡಿದ್ದರು. ನ್ಯಾಯಾಧೀಶರ ಮುಂದೆ ನೀಡಿರುವ ಹೇಳಿಕೆಯಲ್ಲಿಯೂ  ಈ ಅಂಶ  ಪ್ರಸ್ತಾಪವಾದರೆ ಜಾರಕಿಹೊಳಿಗೆ ಬಂಧನ ಭೀತಿ ಎದುರಾಗಲಿದೆ.

ಹೇಳಿಕೆ ನಂತರ ಅಸಲಿ ಆಟ ಈಗ ಶುರುವಾಗಿದೆ

2.ಯುವತಿಯೇ ಎಸ್‌ಐಟಿ ವಶಕ್ಕೆ;  ಹೆಚ್ಚಿನ ಮಾಹಿತಿ ಬೇಕಿದ್ದು ಯುವತಿಯನ್ನೇ ವಿಚಾರಣೆಗೆಂದು ವಿಶೇಷ ತನಿಖಾ ತಂಡ ತನ್ನ ವಶಕ್ಕೆ ಪಡೆದುಕೊಳ್ಳಬಹುದು.

3. ಪ್ರಕರಣಗಳೆಲ್ಲ ಒಂದೇ ಕಡೆ; ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ, ಬೆಳಗಾವಿಯಲ್ಲಿ ಯುವತಿ ಪೋಷಕರು ಕೊಟ್ಟ ಕಂಪ್ಲೆಂಟ್, ಸದಾಶಿವನಗರದಲ್ಲಿನ ದೂರು ಎಲ್ಲವೂ ಒಂದೇ ಕೇಸ್ ಎಂದು ಪರಿಗಣಿಸಿ ವಿಚಾರಣೆ ನಡೆಸಬಹುದು.

4. ವಿಡಿಯೋ;   ಬಿಡುಗಡೆಯಾಗಿದ್ದ ರಾಸಲೀಲೆ ವಿಡಿಯೋ ಅಸಲಿಯೋ ನಕಲಿಯೋ ಇನ್ನು ಗೊತ್ತಾಗಿಲ್ಲ. ಯುವತಿ ಕುಟುಂಬದವರೊಂದಿಗೆ ಮಾತನಾಡಿದ್ದಾರೆ ಎನ್ನುವ ಆಡಿಯೋಗಳಿಗೂ ಕಾನೂನಿನ ಮಾನ್ಯತೆ ಇಲ್ಲ.  ಸಂತ್ರಸ್ತೆ ನೀಡಿದ   ಹೇಳಿಕೆ ಆಧಾರದಲ್ಲಿ ಹೊಸದಾಗಿ ತನಿಖೆ ಆರಂಭವಾಗಬಹುದು.

5. ಶಂಕಿತ ಕಿಂಗ್ ಪಿನ್;   ಇಲ್ಲಿಯತನಕ ಇದು ಅತ್ಯಾಚಾರವೋ, ಹನಿಟ್ರ್ಯಾಪೋ ಎಂಬ ಗೊಂದಲ ಇತ್ತು. ಆದರೆ ಈಗ ಯುವತಿಯೇ ಹೇಳಿಕೆ   ಆಕಸ್ಮಾತ್ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದರೆ, ಅತ್ಯಾಚಾರದ ಪ್ರಕರಣ ಎಂದೇ ಪರಿಗಣಿಸಬೇಕಾಗುತ್ತದೆ. ತನಿಖೆ ನಂತರವೇ ಸತ್ಯ ಗೊತ್ತಾಗಬೇಕು. ಸಿಡಿ ಸಿದ್ಧಮಾಡಿದ್ದಾರೆ, ಗ್ರಾಫಿಕ್ಸ್ ಮಾಡಲಾಗಿದೆ, ಶಂಕಿತ ಕಿಂಗ್ ಪಿನ್ ಗಳು ಇದ್ದಾರೆ ಎನ್ನುವುದಕ್ಕೆಲ್ಲ ಸದ್ಯಕ್ಕೆ ಬೆಲೆ ಇಲ್ಲದಂತಾಗುತ್ತದೆ.