
ಬೆಂಗಳೂರು(ಮಾ. 18) ಶುಕ್ರವಾರ ವಿಧಾನಸಭಾ ಕಲಾಪದಲ್ಲಿ ಪ್ರಸಿಡಿ ಪ್ರಕರಣ ತಿಧ್ವನಿಸಲಿದೆ. ಕಾಂಗ್ರೆಸ್ ನಾಯಕರು ನಿಲುವಳಿ ಸೂಚನೆ ನೀಡಿದ್ದಾರೆ. ನಾಳೆಯ(ಶುಕ್ರವಾರ) ಚರ್ಚೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆದಿದೆ.
ಡಿ ಕೆ ಶಿವಕುಮಾರ್, ರಮೇಶ್ ಕುಮಾರ್, ವಿ ಎಸ್ ಉಗ್ರಪ್ಪ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು ಕಾನೂನು ಅಂಶಗಳು, ಬಿಜೆಪಿಯಿಂದ ವ್ಯಕ್ತವಾಗಬಹುದಾದ ಆಕ್ಷೇಪಗಳ ಬಗ್ಗೆ ಸಮಾಲೋಚನೆ ನಡೆದಿದೆ.
'ನಾನು ಮೊದಲೆ ಈ ಹೆಸರು ಹೇಳಿದ್ದೆ' ಕುಮಾರಸ್ವಾಮಿ
ಕಲಾಪದಲ್ಲಿ ಎಲ್ಲಾ ಶಾಸಕರು ಇರುವಂತೆ ಶಾಸಕರಿಗೆ ಸೂಚನೆ ಕೊಡಲು ಸಭೆಯಲ್ಲಿ ತಿರ್ಮಾನ ತೆಗೆದುಕೊಳ್ಳಲಾಗಿದೆ. ಚರ್ಚೆಯಲ್ಲಿ ಪ್ರಮುಖ ನಾಯಕರು ಮಾತ್ರ ಸಿಡಿ ಕುರಿತು ಪ್ರಸ್ತಾಪ ಮಾಡಲು ತೀರ್ಮಾನ ಮಾಡಲಾಗಿದೆ.
ವೈಯಕ್ತಿಕ ಟೀಕೆ ಮಾಡಿ ಕಲಾಪ ಗೊಂದಲ ಆಗದಂತೆ ನೋಡಿಕೊಳ್ಳಬೇಕು. ಪ್ರಶ್ನೋತ್ತರದ ಮುನ್ನವೇ ಅವಕಾಶ ಕೇಳಲು ಸಭೆಯಲ್ಲಿ ತಿರ್ಮನ ಮಾಡಲಾಗಿದ್ದ ಅವಕಾಶ ಸಿಗದಿದ್ದರೆ ಪ್ರಶ್ನೋತ್ತರ ಕಲಾಪದ ಬಳಿಕ ಚರ್ಚೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.