'ಪಿಎಂ ಕೇರ್‌ ಫಂಡ್‌ಗೆ ಚೀನಾ ಕಂಪನಿಯಿಂದ ಕೋಟಿ ಕೋಟಿ ಹಣ'

By Suvarna News  |  First Published Jul 2, 2020, 2:23 PM IST

ಮೋದಿ ಮತ್ತು ಶಾ ದೇಶವನ್ನು ಹಾಳು ಮಾಡಬೇಕು ಅಂತಾನೇ ಅನೇಕ ಕಾರ್ಯಕ್ರಮ ಮಾಡ್ತಾ ಇದ್ದಾರೆ| ಮೋದಿ ಶಾ ಹಿಂದೆ ಆರ್ ಎಸ್ ಎಸ್ ಇದೆ| ಆರ್ ಎಸ್ ಎಸ್ ಮೋದಿ ಮತ್ತು  ಶಾನಾ ಬಡಿಯದಿದ್ದರೆ, ದೇಶಕ್ಕೆ ಇನ್ನಷ್ಟು ಕಷ್ಟ ಬರಲಿದೆ| ಮೋದಿ ವಿರುದ್ಧ ಗುಡುಗಿದ ಖರ್ಗೆ


ಬೆಂಗಳೂರು(ಜು.02): ಕೆಪಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ. ವರ್ಚುವಲ್ Rally ಮೂಲಕ ಅದ್ಧೂರಿಯಾಗಿ ಡಿಕೆಶಿ ಪದಗ್ರಹಣ ಕಾರ್ಯಕ್ರಮ ನಡೆದಿದೆ. ಇನ್ನು ಕಾರ್ಯಕ್ರಮದಲ್ಲಿ ಭಾವಹಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದು, ಮೋದಿ ಹಾಗೂ ಅಮಿತ್ ಶಾ ವಿರುದ್ಧ ಗುಡುಗಿದ್ದಾರೆ. ಇದೇ ವೇಳೆ ರಾಜೀವ್ ಫೌಂಡೇಷನ್ ವಿರುದ್ಧ ಟೀಕಿಸಿದ್ದ ಮೋದಿ ಸರ್ಕಾರಕ್ಕೆ ಪಿಎಂ ಕೇರ್ಸ್‌ ಫಂಡ್‌ ಲೆಕ್ಕ ಕೊಟ್ಟು ತಿರುಗೇಟು ನೀಡಿದ್ದಾರೆ.

ಖರ್ಗೆ ಭಾಷಣದ ಪ್ರಮುಖ ಅಂಶಗಳು

Tap to resize

Latest Videos

* ಮೋದಿ ಮತ್ತು ಶಾ ದೇಶವನ್ನು ಹಾಳು ಮಾಡಬೇಕು ಅಂತಾನೇ ಅನೇಕ ಕಾರ್ಯಕ್ರಮ ಮಾಡ್ತಾ ಇದ್ದಾರೆ. ಮೋದಿ ಶಾ ಹಿಂದೆ RSS ಇದೆ. RSS ಮೋದಿ ಮತ್ತು  ಅಮಿತ್ ಶಾ ಬಡಿಯದಿದ್ದರೆ, ದೇಶಕ್ಕೆ ಇನ್ನಷ್ಟು ಕಷ್ಟ ಬರಲಿದೆ. ಅವರನ್ನು ಹತ್ತಿಕುವುದಿಲ್ಲ, ಅಲ್ಲಿವರೆಗೆ ದೇಶದ ಯುವಕರಿಗೆ ಭವಿಷ್ಯ ಇಲ್ಲ.

* ಈಗಿನ ಕೆಲ ಯುವಕರು ಮೋದಿ ಏನೆ ಮತಾಡಿದ್ರು ಚಪ್ಪಾಳೆ ತಟ್ತಾರೆ. ಮೋದಿ ತಪ್ಪು ಮಾಡಿದ್ರೆ ಅಯ್ಯೊ ಪಾಪ ಬಿಡಿ ಅಂತಾರೆ. ಆದರೆ ಮೋದಿ ಶಾ ದ್ವೇಶದ ರಾಜಕಾರಣ ಮಾಡ್ತಿದ್ದಾರೆ.

ಡಿಕೆ ಶಿವಕುಮಾರ್ ಯಾರಿಗೂ ಜಗ್ಗೋ ಮಗ ಅಲ್ಲ: ಬಿಜೆಪಿ ಮುಕ್ತ ರಾಷ್ಟ್ರವಾಗಿಸಲು ಕರೆ!

* ಆರ್ಥಿಕ ಹಿಂಜರಿತಕ್ಕೆ ಮೋದಿ ಹಾಗೂ ಅಮಿತ್ ಶಾ ಕಾರಣ. ತಮ್ಮ ತಪ್ಪು ಒಪ್ಪಿಕೊಳ್ಳುವುದಿಲ್ಲ. ವಿರೋಧ ಪಕ್ಷದ ಮಾತೂ ಒಪ್ಪುವುದಿಲ್ಲ. ಇಮೇಜ್ ಬೆಳೆಸಿಕೊಳ್ಳಲು ಸುಳ್ಳು ಹೇಳಿ ಪಕ್ಷ ಬೆಳೆಸುತ್ತಿದ್ದಾರೆ. ಇಂದಿ ಎಲ್ಲಾ ಕೆಟ್ಟ ಪರಿಸ್ಥಿತಿಗೆ ಅವರೇ ಕಾರಣ.

* ಮೋದಿ ಕಾಂಗ್ರೆಸ್‌ಗೆ ಬೈಯ್ಯುವುದು, ರಾಹುಲ್ ಹಾಗೂ ಸೋನಿಯಾರನ್ನು ಹಿಯಾಳಿಸುವುದು. ಇಂದು ಅವರು ಮಾಡುವ ರಾಜಕಾರಣ ಸಿಟ್ಟಿನ ಹಾಗೂ ದ್ವೇಷದ ರಾಜಕಾರಣವನ್ನು ಹತ್ತಿಕ್ಕಬೇಕು. ಇಂತ ರಾಜಕಾರಣದಿಂದ ಎಷ್ಟೇ ಕಾರ್ಯಕ್ರಮ ಮಾಡಿದ್ರೂ ಉಪಯೋಗ ಇಲ್ಲ.

* ರಾಜೀವ್ ಗಾಂಧಿ ಫೌಂಡೇಷನ್ ಬಗ್ಗೆ ಟೀಕಿಸುತ್ತಾರೆ. ಇಂದು ಮೋದಿ ಹೊಸ ಟ್ರಸ್ಟ್ ಮಾಡಿದ್ದಾರೆ. ಪಿಎಂ ಕೇರ್ಸ್ ಫಂಡ್. ಇದು ಸಂವಿಧಾನದಲ್ಲಿ ಎಲ್ಲಿದೆ? ಎಷ್ಟು ಸದಸ್ಯರು ಇದ್ದಾರೆ. ಎಷ್ಟು ಹಣ ಕಲೆಕ್ಟ್ ಆಗಿದೆ? ಯಾರಿಂದ ಪಡೆದಿದ್ದೀರಿ? ಲೆಕ್ಕ ಇಲ್ಲ. ಆರ್‌ಟಿಐ ಲೆಕ್ಕ ಕೊಡಲು ಆಗಲ್ಲ ಎನ್ನುತ್ತಿದ್ದಾರೆ. ಕಾನೂನಿನನ್ವಯ ಸಾಧ್ಯವಿಲ್ಲ ಎನ್ನುತ್ತಾರೆ.

* ಎಲ್ಲಾ ವಿಚಾರಗಳಿಗೂ ಲೆಕ್ಕ ಕೇಳುತ್ತೀರಿ ಆದರೆ ಪಿಎಂ ಕೇರ್ಸ್‌ ಯಾಕೆ ಲೆಕ್ಕ ಇಲ್ಲ? ಪಿಎಂ ಕೇರ್‌ ಫಂಡ್‌ಗೆ ಚೀನಾದಿಂದ ಕ್ಸಿಯೋಮಿ ಕಳ್ಸಿದ್ದು ಹತ್ತು ಕೋಟಿ, ಹುವೈ ಏಳು ಕೋಟಿ, ನ್‌ ಫ್ಲಸ್‌ ಒಂದು ಕೋಟಿ, ಟಿಕ್‌ಟಾಕ್ ಸುಮಾರು ಮೂವತ್ತು ಕೋಟಿ. ಪೇಟಿಎಂ ನೂರು ಕೋಟಿ ನೀಡಿದ್ದಾರೆ.

ಡಿಕೆ ಶಿವಕುಮಾರ್‌ಗೆ ಇದ್ದಲ್ಲಿಯೇ ಸಿಕ್ತು ವಿಶೇಷ ಆಶೀರ್ವಾದ...!

* ಕಾಂಗ್ರೆಸ್ ಮುಖಂಡರಿಗೆ ಟೀಕೆ ಮಾಡುತ್ತಾರೆ. ಯಾವಾಗ ನಮ್ಮ ನಾಯಕರ ಮೇಲೆ ಟೀಕೆ ಬರುತ್ತೋ ಆಗ ನಾವು ಪ್ರತಿಯಾಗಿ ಉತ್ತರಿಸೇಕು. ಬಿಜೆಪಿ ವೈಫಲ್ಯವನ್ನು ತೋರಿಸಬೇಕು ಡಿಕೆಶಿ ಖರ್ಗೆ ಮನವಿ. ಅವರು ದೊಡ್ಡ ಹಗರಣ ಮಾಡಿ ನಮಗೆ ಟೀಕಿಸುತ್ತಾರೆ.

* ಸಂತೋಷ್ ಬಾಬು ಜೊತೆ ಇಪ್ಪತ್ತು ಮಂದಿ ಹುತಾತ್ಮರಾದರು. ಆಲ್‌ ಪಾರ್ಟಿ ಮೀಟಿಂಗ್ ಆಯ್ತು. ಎಷ್ಟು ಜನ ಸತ್ತಿದ್ದಾರೆ? ನಮ್ಮ ಭೂಮಿ ಹೋಯ್ತು ಎಂದು ರಾಹುಲ್ ಕೇಳಿದ್ರು.  ಟ್ವೀಟ್ ಮೂಲಕ ಕೇಳಿದ್ರು. ಇದಕ್ಕೆ ಮೋದಿ, ಶಾ, ರಾಜನಾಥ್ ಯಾರೂ ಕೊಟ್ಟಿಲ್ಲ. 

* ನಮ್ಮ ಗಡಿಗೆ ಯಾರೂ ನುಸುಳಿಲ್ಲ. ನಮ್ಮ ಪೋಸ್ಟ್‌ಗೆ ದಾಳಿಯೂ ಮಾಡಿಲ್ಲ ಎಂದು ಮೋದಿ ಹೇಳಿದ್ದಾರೆ. ಆದ್ರೆ ಇಪ್ಪತ್ತು ಜನ ಪ್ರಾಣ ಹೇಗೆ ಕಳೆದುಕೊಂಡ್ರು ಎಂದು ಸ್ಪಷ್ಟನೆ ಕೊಟ್ಟಿಲ್ಲ. ಅವರು ಯಾವ ಜಾಗದಲ್ಲಿ ಸತ್ತರು. ಎಪ್ಪತ್ತು ಜನ ಗಂಭೀರ ಆದ್ರು. ಹತ್ತು ಜನರನ್ನು ಬಿಡುಗಡೆ ಮಾಡಿದ್ರು. ಇಷ್ಟೆಲ್ಲಾ ಹೇಗೆ ಆಯ್ತು. ಗಡಿಯಲ್ಲಿ ಆಗಿದ್ದನ್ನು ಹೇಳದೆ ಸುಳ್ಳು ಹೇಳುತ್ತಿದ್ದಾರೆ. ಇದನ್ನು ನಾವು ಜನರಿಗೆ ತಿಳಿಸಬೇಕು.

* ಮೋಸಗಾರ ಹಾಗೂ ಜನರಿಗೆ ಮೊಸ ಮಾಡುವ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಇದನ್ನು ಯಾವಾಗದವರೆಗೆ ಹೊಡೆದು ಓಡಿಸುವುದಿಲ್ಲವೋ ಅಲ್ಲಿವರೆಗೆ ಅಭಿವೃದ್ಧಿ ಆಗುವುದಿಲ್ಲ. ಆ ಕೆಲಸ ಡಿಕೆಶಿ ಮಾಡುತ್ತಾರೆಂಬ ನಂಬಿಕೆ ಇದೆ. 

* ಎಲ್ಲಿವರೆಗೆ ಸಾಮಾನ್ಯರಿಗೆ ಯುವಕರಿಗೆ ಮೋದಿ ಹಾಗೂ ಬಿಜೆಪಿ ಕೆಲಸ ಮಾಡುತ್ತಿದೆ ಹಾಗೂ ಆರ್‌ಎಸ್‌ ಏನು ಮಾಡುತ್ತಿದೆ ಎಂದು ತಿಳಿಸುವುದಿಲ್ಲವೋ ಅಲ್ಲಿವರೆಗೆ ಯುವಕರ ತಲೆಯಲ್ಲಿರುವ ಮೋದಿ ತೆಗೆದು ಹಾಕಲು ಆಗುವುದಿಲ್ಲ.

click me!