ಕೆಪಿಸಿಸಿ ನೂತನ ಸಾರಥಿಯಾಗಿ ಡಿಕೆಶಿ ಪದಗ್ರಹಣ| ವಿಶ್ವದಾಖಲೆಯ ಹಾಗೂ ಇಡೀ ರಾಷ್ಟ್ರವೇ ತಿರುಗಿ ನೋಡುವಂತಹ ವರ್ಚುಯಲ್ ರ‍್ಯಾಲಿ| ಬಿಜೆಪಿ ವಿರುದ್ಧ ಗುಡುಗಿದ ಡಿಕೆಶಿ|
ಬೆಂಗಳೂರು(ಜು.02): ಕೆಪಿಸಿಸಿ ನೂತನ ಸಾರಥಿ ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕ ಅದ್ಧೂರಿಯಾಗಿ ನಡೆದಿದೆ.ವಿಶ್ವದಾಖಲೆಯ ಹಾಗೂ ಇಡೀ ರಾಷ್ಟ್ರವೇ ತಿರುಗಿ ನೋಡುವಂತಹ ವರ್ಚುಯಲ್ ರ‍್ಯಾಲಿ ಮೂಲಕ ಬರೋಬ್ಬರಿ 10 ಲಕ್ಷ ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ಶಿವಕುಮಾರ್ ಕೆಪಿಸಿಸಿಯ 41ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ.
ಡಿಕೆ ಶಿವಕುಮಾರ್‌ಗೆ ಇದ್ದಲ್ಲಿಯೇ ಸಿಕ್ತು ವಿಶೇಷ ಆಶೀರ್ವಾದ...!
ಇನ್ನು ಪದಗ್ರಹಣ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಡಿಕೆಶಿ ಕಾಂಗ್ರೆಸ್ ನಡೆದು ಬಂದ ಹಾದಿ, ತಾವು ಕಾಂಗ್ರೆಸ್ನಲ್ಲಿ ಬೆಳೆದು ಬಂದ ಹಾದಿಯನ್ನು ಉಲ್ಲೇಖಿಸಿದ್ದಾರೆ. ಇದೇ ಸಂದರ್ಭದಲ್ಲಿ ತನ್ನನ್ನು ಕಟಗ್ಟಿ ಹಾಕಲು ಯತ್ನಿಸಿದ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ ಕನಕಪುರದ ಬಂಡೆ ಯಾರೆಷ್ಟೇ ಕಟ್ಟಿ ಹಾಕಲು ಯತ್ನಿಸಿದರೂ 'ಡಿಕೆ ಶಿವಕುಮಾರ್ ಯಾರಿಗೂ ಜಗ್ಗೋ ಮಗ ಅಲ್ಲ' ಎಂದು ಬಹಿರಂಗವಾಗೇ ಚಾಲೆಂಜ್ ಹಾಕಿದ್ದಾರೆ.
ಡಿಕೆಶಿ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ
* ನನಗೆ ಅಧ್ಯಕ್ಷ ಸ್ಥಾನದ ಹಂಬಲ ಇರಲಿಲ್ಲ. ಅಧ್ಯಕ್ಷ ಸ್ಥಾನದ ಜೊತೆಗೆ ಬರುಬಹುದಾದಂತಹ ಸ್ಥಾನ ಮಾನಗಳ ಆಸೆಯೂ ನನಗಿಲ್ಲ. ಆದರೆ ನನಗೆ ಈ ಚಾಲೆಂಜ್ ಎದುರಿಸಲು ನನಗೆ ಉತ್ಸಾಹ ಇದೆ. ನನಗೆ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇದೆ
* ಅನೇಕ ಕಷ್ಟಗಳನ್ನ ನಾನು ಎದುರಿಸಿದ್ದೇನೆ. ನಾನು ತಪ್ಪು ಮಾಡಿದ್ರೆ ಯಾವುದೇ ಶಿಕ್ಷೆ ಎದುರಿಸಲು ತಯಾರಿದ್ದೇನೆ. ನಾನು ಯಾರಿಗು ದ್ರೋಹ ಮಾಡಿಲ್ಲ.
* ಕಾಂಗ್ರೆಸ್ ಪಕ್ಷ ಹಾಗು ನಾಯಕರ ವಿರುದ್ಧ ಇಲ್ಲಿಯವರೆಗೂ ಒಂದೇ ಒಂದು ಚಕಾರ ಶಬ್ದ ಮಾತಾಡಿದವನಲ್ಲ. ನನಗೆ ಅದೇ ದೊಡ್ಡ ಶಕ್ತಿ, ನಾನುಪಕ್ಷ ನಿಷ್ಠ.
* ಐದು ಬೆರಳು ಸೇರಿದ್ರೆ ಮಾತ್ರ ಹಸ್ತ, ಆಗ ಮಾತ್ರ ಹಾಸ್ತಕ್ಕೆ ಬೆಲೆ. ಹೊಸ ಅದ್ಯಾಯವನ್ನ ಆರಂಭ ಮಾಡಬೇಕಿದೆ.
* ನನಗೆ ಗುಂಪುಗಾರಿಕೆ ಮೇಲೆ ನಂಬಿಕೆ ಇಲ್ಲ. ನಾನು ಯಾವುದೇ ನಿರ್ಧಾರಗಳನ್ನ ವಯಕ್ತಿಕವಾಗಿ ತೆಗೆದುಕೊಳ್ಳಲ್ಲ. ಎಲ್ಲರಿಗೂ ಸ್ಥಾನ ಮಾನ ಸೀಗುವಂತ ಕಾರ್ಯಕ್ರಮಗಳನ್ನ ರೂಪಿಸ್ತೇವೆ.
* ವ್ಯಕ್ತಿ ಪೂಜೆ ಮಾಡಲ್ಲ, ಪಕ್ಷದ ಪೂಜೆ ಮಾಡೊಣ. ನನಗೆ ಯಾರು ಹಿಂಬಾಲಕರು ಬೇಡ. ನನಗೆ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇದೆ.
* ಯಾರು ಎಷ್ಟೇ ತೊಂದರೆ ಕೊಡಲಿ, ಆದ್ರೆ ಡಿಕೆ ಶಿವಕುಮಾರ್ ಯಾರಿಗೂ ಜಗ್ಗೋ ಮಗ ಅಲ್ಲ. ಅಮಿತ್ ಶಾ ತೊಂದರೆ ಕೊಡಲಿ. ಎಷ್ಟೇ ಪ್ರಕರಣ ಹಾಕಲಿ ಪರವಾಗಿಲ್ಲ
* ನನ್ನ ಕನಕಪುರ ಬಂಡೆ ಅಂತಾ ಕರೀತಾರೆ. ನನಗೆ ಬಂಡೆ ಆಗಲು ಇಷ್ಟವಿಲ್ಲ, ಬಂಡೆ ಆಕೃತಿ ಆಗುತ್ತೆ. ನಾನು ವಿಧಾನ ಸೌಧದ ಮೆಟ್ಟಿಲಿಗೆ ಹಾಕಿರುವ ಕಲ್ಲಾಗಲು ಬಯಸ್ತೇನೆ. ನನ್ನ ಮೇಲೆ ನೀವು ಕಾಲಿಟ್ಟು ವಿಧಾನ ಸೌಧದ ಒಳಗೆ ಹೋಗಿ, ನಾನು ಖುಷಿ ಪಡ್ತೇನೆ.
* ಬಿಜೆಪಿ ಮುಕ್ತ ರಾಜ್ಯವನ್ನಾಗಿ ನಿರ್ಮಿಸಲು ನಾವೆಲ್ಲ ಕಂಕಣ ಬದ್ಧರಾಗಬೇಕು
* ಆಪರೇಷನ್ ಕಮಲಕ್ಕೆ ಕೆಲವರು ಪಕ್ಷ ಬಿಟ್ಟು ಹೋಗಿದ್ದಾರೆ. ಇನ್ನು ಕೆಲವರಿಗೆ ಹೋಗುವ ಆಸೆ ಇದ್ರೆ ಹೋಗಬಹುದು. ಕಾಂಗ್ರೆಸ್‌ಗೆ ಎಲ್ಲವನ್ನ ಅರಗಿಸಿಕೊಳ್ಳುವ ಶಕ್ತಿ ಇದೆ. ಪಕ್ಷ ಬಿಟ್ಟು ಅಲ್ಲಿ ಹೋಗ್ತೇನೆ, ಇಲ್ಲಿ ಹೋಗ್ತೇನೆ ಎಂಬ ಬ್ಲ್ಯಾಕ್ ಮೇಲ್ ಗೆಲ್ಲ ಹೆದರಲ್ಲ. ಕಾಂಗ್ರೆಸ್ ಪಕ್ಷವನ್ನ ಬೇರು ಮಟ್ಟದಿಂದ ಕಟ್ಟುವ ಶಕ್ತಿ ನಮಗಿದೆ.
* ಕಾಂಗ್ರೆಸ್ ಕಾರ್ಯಕರ್ತರನ್ನ ಶಕ್ತಿಯುವತರನ್ನಾಗಿ ಮಾಡೊದೆ ನನ್ನ ಧ್ಯೇಯ. ವಿಧಾನಸೌಧದಲ್ಲಿ ಕಾಂಗ್ರೆಸ್ ಹೆಜ್ಜೆ ಇಡುವಂತ ಕೆಲದ ನಾನು ಮಾಡ್ತೇನೆ. ನಾನು ವಿಧಾನ ಸೌಧದ ಮೆಟ್ಟಿಲಾಗಿ ನಿಮ್ಮನ್ನ ವಿಧಾನ ಸೌಧದ ಒಳಗೆ ಕಳಿಸುವ ಕೆಲಸಕ್ಕೆ ನಾನು ಸಜ್ಜಾಗಿದ್ದೇನೆ.