'ಇದೇ ರೀತಿ ಮಾತು ಮುಂದುವರಿಸಿದ್ರೆ..' ಮುಲ್ಲಾನ ಬಗ್ಗೆ ಸಿಟಿ ರವಿ ಹೇಳಿಕೆಗೆ ಎಸ್‌ಡಿಪಿಐ ವಾರ್ನಿಂಗ್

Published : Jul 28, 2026, 11:24 AM IST
SDPI On CT Ravi

ಸಾರಾಂಶ

'ಮುಲ್ಲಾನ ಎದೆ ಸೀಳಿದರೆ ಮೂರಕ್ಷರವಿಲ್ಲ..' ಎಂಬ ಎಂಎಲ್‌ಸಿ ಸಿಟಿ ರವಿ ಹೇಳಿಕೆ ವಿಚಾರವಾಗಿ ಎಸ್‌ಡಿಪಿಐ ಆಕ್ರೋಶ ವ್ಯಕ್ತಪಡಿಸಿದ್ದು, ಸಿಟಿ ರವಿ ಇದೇ ರೀತಿ ಮಾತು ಮುಂದುವರಿಸಿದರೆ ಚಿಕ್ಕಮಗಳೂರಿಗೆ ಕಾಲಿಡಲು ಬಿಡೋಲ್ಲ ಎಂದು ಎಚ್ಚರಿಕೆ ನೀಡಿದರು.

ಚಿಕ್ಕಮಗಳೂರು (ಜು.28): 'ಮುಲ್ಲಾನ ಎದೆ ಸೀಳಿದರೆ ಮೂರಕ್ಷರವಿಲ್ಲ..' ಎಂಬ ಎಂಎಲ್‌ಸಿ ಸಿಟಿ ರವಿ ಹೇಳಿಕೆ ವಿಚಾರವಾಗಿ ಇದೀಗ ಚಿಕ್ಕಮಗಳೂರಿನಲ್ಲಿ ಹಿಂದೂ-ಮುಸ್ಲಿಂ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಸಿಟಿ ರವಿ ಹೇಳಿಕೆಗೆ ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದು, 'ಇದೇ ರೀತಿ ಮಾತನಾಡುತ್ತಿದ್ದಾರೆ, ಮುಸ್ಲಿಂರೆಲ್ಲ ಒಗ್ಗಟ್ಟಾಗಿ ಚಿಕ್ಕಮಗಳೂರಿಗೆ ಕಾಲಿಡದಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದೆ.

ಸಿಟಿ ರವಿಗೆ ಎಸ್‌ಡಿಪಿಐ ಎಚ್ಚರಿಕೆ

ಸಿಟಿ ರವಿ ಹೇಳಿಕೆ ವಿಚಾರವಾಗಿ ಇಂದು ಎಸ್‌ಡಿಪಿಐ ಮುಖಂಡ ಅತೀಕ್ ಚಿಕ್ಕಮಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಮುಲ್ಲಾಗಳು ಯಾರೂ ಅನಕ್ಷರಸ್ಥರಲ್ಲ. ಸಿಟಿ ರವಿ ಮಾತೆತ್ತಿದ್ದರೆ ಮುಸ್ಲಿಂರನ್ನ ಎಳೆದು ತರ್ತಾರೆ, ಮುಸ್ಲಿಮರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡ್ತಿದ್ದಾರೆ. ಇನ್ಮುಂದೆ ನಾವು ದ್ವೇಷ ಭಾಷಣ ಸಹಿಸೋಲ್ಲ. ಭಾಷಣದಲ್ಲಿ ಇದೇ ರೀತಿ ಬಾಯ್ಬಿಡ್ತಿದ್ರೆ ನಾವು ನಿಮ್ಮನ್ನು ಚಿಕ್ಕಮಗಳೂರಿಗೆ ನುಗ್ಗೋಕೆ ಬಿಡೋಲ್ಲ, ಮುಂದೆ ಇಂತಹ ಸನ್ನಿವೇಶ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದರು.

ಸಿಟಿ ರವಿ ಎದೆ ಸೀಳಿದರೆ ಎಷ್ಟು ಅಕ್ಷರ ಇವೆ?

ಸಿಟಿ ರವಿ ಮುಲ್ಲಾನ ಎದೆ ಸೀಳಿದರೆ ಮೂರಕ್ಷರ ಇಲ್ಲ ಅಂತಾರೆ. ಹಾಗಾದ್ರೆ ಸಿಟಿ ರವಿ ಎದೆ ಸೀಳಿದ್ರೆ ಎಷ್ಟು ಇದೆ ಎಂದು ಹೇಳಬೇಕು ಎಂದು ಮುಸ್ಲಿಮ್ ಮುಖಂಡ ಅತೀಕ್ ಪ್ರಶ್ನಿಸಿದರೆ. ಅತೀಕ್ ಮಾತಿಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಬೆಳವಣಿಗೆ ಪರಸ್ಪರ ವಾಗ್ವಾದಕ್ಕೆ ಕಾರಣವಾಯಿತು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆಡಿಯೋ ವೈರಲ್‌ನಿಂದ ಹಿನ್ನಡೆ ಆಗಿರೋದು ನಿಜ - ಮತ್ತೆ ಮಂತ್ರಿ ಆಗುವ ಬಗ್ಗೆ ಜಮೀರ್ ಸ್ಫೋಟಕ ಹೇಳಿಕೆ
ಸಚಿವರ ಪಾರ್ಟಿಗೆ ಹುಡುಗಿಯರ ಸಪ್ಲೈ ಮಾಡಲು ₹80,000 ಆಫರ್! ಗ್ಲಾಮರ್ ಜಗತ್ತಿನ ಕರಾಳ ಮುಖ ಬಿಚ್ಚಿಟ್ಟ ಮಾಡೆಲ್!