ಸಾವರ್ಕರ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಆಗಿದ್ದರೆ ಅದನ್ನು ಬಿಜೆಪಿಯವರು ದಾಖಲೆ ಸಹಿತ ಸಾಬೀತುಪಡಿಸಬೇಕು. ಅವರೇ ವೇದಿಕೆ ಸಿದ್ಧಪಡಿಸಿದರೂ ಪರವಾಗಿಲ್ಲ. ನಾನೂ ಆ ಚರ್ಚೆಯಲ್ಲಿ ಭಾಗವಹಿಸಲು ಸಿದ್ಧ ಎಂದ ಎಸ್.ಎಂ.ಪಾಟೀಲ ಗಣಿಹಾರ
ವಿಜಯಪುರ(ಆ.28): ಸಾವರ್ಕರ ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಅಲ್ಲ. ಅವರು ದೇಶಪ್ರೇಮದ ಯಾವುದೇ ಕೆಲಸ ಮಾಡಿಲ್ಲ. ಅಂಥವರಿಗೆ ದೇಶಭಕ್ತರು, ಸ್ವಾತಂತ್ರ್ಯ ಹೋರಾಟಗಾರರು ಎಂಬ ಪಟ್ಟಕಟ್ಟಬಾರದು ಎಂದು ಕಾಂಗ್ರೆಸ್ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಅವರು ಹೇಳಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವರ್ಕರ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಆಗಿದ್ದರೆ ಅದನ್ನು ಬಿಜೆಪಿಯವರು ದಾಖಲೆ ಸಹಿತ ಸಾಬೀತುಪಡಿಸಬೇಕು. ಅವರೇ ವೇದಿಕೆ ಸಿದ್ಧಪಡಿಸಿದರೂ ಪರವಾಗಿಲ್ಲ. ನಾನೂ ಆ ಚರ್ಚೆಯಲ್ಲಿ ಭಾಗವಹಿಸಲು ಸಿದ್ಧ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆ ಲೋಗೋ ಬಿಡುಗಡೆ, ಕರ್ನಾಟಕದಲ್ಲಿ 511 ಕಿ.ಮೀ ಪಾದಯಾತ್ರೆ
ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ, ಅವರಿಗೆ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಯಾಗಿತ್ತೇ ಹೊರತು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅಲ್ಲ. ಬಿಜೆಪಿಗರಿಗೆ ಮಾಡಲು ಕೆಲಸವಿಲ್ಲ. ವರ್ಷಕ್ಕೊಮ್ಮೆ ಆ ವ್ಯಕ್ತಿಯ ಹೆಸರನ್ನು ಮುನ್ನೆಲೆಗೆ ತರುತ್ತಾರೆ ಅಷ್ಟೇ. ಅಭಿವೃದ್ಧಿ ಕಾರ್ಯ ಮಾಡದೇ ಜನರ ಬಳಿ ಹೋಗಲು ಯಾವ ವಿಷಯವೂ ಅವರ ಬಳಿ ಇಲ್ಲ. ಹೀಗಾಗಿ ಈ ವಿಷಯವನ್ನು ಮುನ್ನೆಲೆಗೆ ತಂದಿದ್ದಾರಷ್ಟೇ ಎಂದು ಆರೋಪಿಸಿದರು.
ಗಣೇಶ, ಸಾವರ್ಕರ್ ಹೆಸರಲ್ಲಿ ಬಿಜೆಪಿ ರಾಜಕೀಯ: ಚಲುವರಾಯಸ್ವಾಮಿ
ಗಣೇಶೋತ್ಸವ ಸಂದರ್ಭದಲ್ಲಿ ದೇಶಭಕ್ತರ ಫೋಟೋ ಇಡೋಣ. ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ ಬಾಲ ಗಂಗಾಧರ ತಿಲಕ ಅವರ ಫೋಟೋ ಇಡಬೇಕು. ಅದನ್ನು ಹೊರತುಪಡಿಸಿ ಸಾವರ್ಕರ ಅವರ ಫೋಟೋ ಇಟ್ಟರೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಹೇಳಿದರು.
ಡಾ.ರವಿಕುಮಾರ ಬಿರಾದಾರ ಮಾತನಾಡಿ, ಚಾತುರ್ವಣ ಪದ್ಧತಿ ಮರಳಿ ತರಲಿಕ್ಕೆ ಬಿಜೆಪಿಯವರು ಹೊರಟಿದ್ದಾರೆ. ಕನ್ನಡ ನಾಡಿನಲ್ಲಿ ಸಾಕಷ್ಟುಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಅಂಥವರನ್ನು ಕೈ ಬಿಟ್ಟು ಸಾವರ್ಕರ್ ಅವರನ್ನು ಮಹಾನ್ ದೇಶಭಕ್ತ ಎಂದು ಬಿಂಬಿಸುತ್ತಿರುವುದು ಸರಿಯಲ್ಲ ಎಂದರು. ಪ್ರಮುಖರಾದ ಸಾಹೇಬಗೌಡ ಬಿರಾದಾರ, ವಸಂತ ಹೊನಮೋಡೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.