ಒಂದೆಡೆ ಸಂಪುಟ ಸಂಭ್ರಮ: ಮತ್ತೊಂದೆಡೆ ಬಿಎಸ್‌ವೈಗೆ ಹೊಸ ಸಂದೇಶ ರವಾನಿಸಿದ ಬಿಜೆಪಿ ಶಾಸಕ

By Suvarna NewsFirst Published Feb 6, 2020, 10:48 AM IST
Highlights

ಒಂದೆಡೆ ಬೆಂಗಳೂರಿನ ರಾಜಭನವದಲ್ಲಿ ಸಂಪುಟ ಸಂಭ್ರಮ ಮನೆ ಮಾಡಿದ್ರೆ, ಮತ್ತೊಂದೆಡೆ ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕ ಬಿಎಸ್‌ವೈಗೆ ಹೊಸ ಸಂದೇಶ ರವಾನಿಸಿದ್ದಾರೆ. 

ಬೆಂಗಳೂರು, (ಫೆ.06): ಸಂಪುಟದಲ್ಲಿ ಸಚಿವಸ್ಥಾನ ಸಿಗದ ಹಿನ್ನೆಲೆಯಲ್ಲಿ ಬೆಳಗಾವಿಯ ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಮಾಮನಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಆನಂದ ಮಾಮನಿ ಮತ್ತೆ ಮತ್ತೊಂದು ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ. ರಾಜಭನವದಲ್ಲಿ 10 ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಪದಗ್ರಹ ಕಾರ್ಯಕ್ರಮ ನಡೆದಿದೆ.

ಸಂಪುಟ ವಿಸ್ತರಣೆ: ಬಹಿರಂಗವಾಗಿ ಬಂಡಾಯ ಬಾವುಟ ಹಾರಿಸಿದ ಬಿಜೆಪಿ ಶಾಸಕ

ಮತ್ತೊಂದೆಡೆ ಸುವರ್ಣ ನ್ಯೂಸ್ ಜತೆ ಮಾತನಾಡಿರುವ ಆನಂದ್ ಮಾಮನಿ, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ ಕೈ ತಪ್ಪಿದೆ. ಪಕ್ಷಕ್ಕೆ ನಿಷ್ಠನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸದ್ಯ ವಿಧಾನಸಭೆ ಉಪ ಸಭಾಪತಿ ರಾಜೀನಾಮೆ ಕೊಡಿಸಬೇಕು. ಉಪ ಸಭಾಪತಿಯನ್ನಾಗಿ ನನ್ನನ್ನ ನೇಮಕ ಮಾಡಬೇಕು ಎಂದು ಹೊಸ ಸಂದೇಶ ರವಾನಿಸಿದರು.

ಪ್ರಸ್ತುತ  ಕಾಂಗ್ರೆಸ್‌ನ ಬಾಗೇಪಲ್ಲಿ ಕ್ಷೇತ್ರದ ಶಾಸಕ ಕೃಷ್ಣರೆಡ್ಡಿ ಅವರು ಉಪಸಭಾಪತಿಯಾಗಿದ್ದು, ಅವರ ರಾಜೀನಾಮೆ ಪಡೆಯುವಂತೆ ಸಿಎಂಗೆ ಆಗ್ರಹಿಸಿರುವುದು ಭಾರೀ ಕುತೂಹಲ ಮೂಡಿಸಿದೆ.

 "ಇನ್ನಾದರೂ ನನ್ನ ಕ್ಷೇತ್ರವನ್ನು ಹಾಗೂ ನಮ್ಮಂಥವರನ್ನು ಬೆಳೆಸಲು, ಈಗಾಗಲೇ ಸಾಕಷ್ಟು ಬಾರಿ ಇಲ್ಲಿಯವೆರೆಗೆ ಸರ್ಕಾರದಲ್ಲಿ ಅಧಿಕಾರ ಅನುಭವಿಸಿದವರು ಯಾವತ್ತೂ ತಾವು ಪಡೆದ ಸ್ಥಾನಮಾನ ಕಿಂಚಿತ್ತೂ ತ್ಯಜಿಸಲು ಹಿಂದೆಟು ಹಾಕುತ್ತಿರುವುದು ಒಂದೆಡೆಯಾದರೆ, ಪಕ್ಷದ ಮುಖಂಡರೂ ಸಹ ನನ್ನ ಕ್ಷೇತ್ರವನ್ನು ಹಾಗೂ ನಮ್ಮಂಥವರನ್ನು ಬೆಳೆಸಲು ಯಾವುದೇ ಆಸಕ್ತಿ ತೋರಿಸದಿರುವುದು ಇನ್ನೊಂದೆಡೆ. ಇನ್ಮೇಲೆ ಪಕ್ಷ ನಿಷ್ಠರಿಗೆ ಕಾಲವಿಲ್ಲವೇ, ಸಚಿವ ಸ್ಥಾನ ಸಿಗದಿದ್ದಕ್ಕೆ ಮೊನ್ನೆ ಅಷ್ಟೇ ಟ್ವೀಟ್ ಮಾಡಿ ಬಹಿರಂಗ ಅಸಮಾಧಾನ ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಹುದು.

click me!