ಸುಳ್ಳು ಭರ​ವ​ಸೆ​ ನೀಡಲು ಬಿಜೆಪಿಯಿಂದ ಸಂಕಲ್ಪ ಯಾತ್ರೆ; ಮಾಜಿ ಶಾಸಕ ಜಿ.ಎಸ್‌. ಪಾಟೀಲ

Published : Oct 23, 2022, 12:45 PM IST
ಸುಳ್ಳು ಭರ​ವ​ಸೆ​ ನೀಡಲು ಬಿಜೆಪಿಯಿಂದ ಸಂಕಲ್ಪ ಯಾತ್ರೆ; ಮಾಜಿ ಶಾಸಕ ಜಿ.ಎಸ್‌. ಪಾಟೀಲ

ಸಾರಾಂಶ

ಸಾಕಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ ಎಂದು ಉದ್ದುದ್ದ ಭಾಷಣ ಮಾಡುತ್ತ ಸಂಕಲ್ಪ ಯಾತ್ರೆ ಮಾಡುವ ಬಿಜೆಪಿ ಮುಖಂಡರು ರಾಜ್ಯದಲ್ಲಿ ಯಾವ ಸ್ಥಳದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂಬುದನ್ನು ಹೇಳಲಿ. ಬಿಜೆಪಿ ವಿರುದ್ಧ ಮಾಜಿ ಶಾಸಕ ಜಿ.ಎಸ್.ಪಾಟೀಲ್ ವಾಗ್ದಾಳಿ

ಡಂಬಳ (ಅ.23) : ಸಾಕಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ ಎಂದು ಉದ್ದುದ್ದ ಭಾಷಣ ಮಾಡುತ್ತ ಸಂಕಲ್ಪ ಯಾತ್ರೆ ಮಾಡುವ ಬಿಜೆಪಿ ಮುಖಂಡರು ರಾಜ್ಯದಲ್ಲಿ ಯಾವ ಸ್ಥಳದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂಬುದನ್ನು ಹೇಳದೆ ರಾಹುಲ್‌ ಗಾಂಧಿ ಬಗ್ಗೆ ವಿರೋಧ ಪಕ್ಷನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ ವಿರುದ್ಧ ವಾಗ್ದಾಳಿ ಮಾಡುವುದೇ ಒಂದು ಸಾಧನೆ ಎಂಬಂತೆ ಪ್ರತಿಬಿಂಬುಸುತ್ತಿರುವುದು ಖೇದಕರ ಎಂದು ಮಾಜಿ ಶಾಸಕ ಜಿ.ಎಸ್‌. ಪಾಟೀಲ ಹೇಳಿದರು.

ಖರ್ಗೆ ತವರಲ್ಲಿಂದು ಬಿಜೆಪಿ ಜನಸಂಕಲ್ಪ ಯಾತ್ರೆ ಅಬ್ಬರ

ಡಂಬಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಾನುವಾರ ಚರ್ಮಗಂಟು ರೋಗದಿಂದ ಬಳಲಿ ಸಾಯುತ್ತಿವೆ. ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಸರಿಯಾದ ಔಷಧೋಪಚಾರ, ಸತ್ತ ದನಕರುಗಳಿಗೆ ಪರಿಹಾರವಿಲ್ಲದೆ ರೈತರು ಸಂಕಷ್ಟಕ್ಕೀಡಾಗಿದ್ದರೆ ಇನ್ನೊಂದೆಡೆ ರೈತರು ಬೆಳೆಗೆ ಪರಿಹಾರ ಸಿಗದೆ ತೀವ್ರ ಆರ್ಥಿಕ ಸಂಕಷ್ಟಕ್ಕಿಡಾಗಿದ್ದಾರೆ. ಅವರಿಗೆ ಇನ್ನೂ ಪರಿಹಾರ ವಿತರಿಸುವಲ್ಲಿ ಈ ಭಾಗದಲ್ಲಿ ವಿಫಲರಾಗಿದ್ದಾರೆ. ಇದನ್ನು ನೋಡುತ್ತಿರುವ ಜನತೆ ಮುಂದಿನ ದಿನಮಾನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಡಂಬಳ ಸೇರಿದಂತೆ ಬಹುತೇಕ ರಸ್ತೆಗಳು ಹದಗೆಟ್ಟಿವೆ. ರಸ್ತೆ ದುರಸ್ತಿ ಮಾಡದಿದ್ದರೆ ಬಸ್‌ ಸಂಚಾರ ಸ್ಥಗಿತಗೊಳಿಸುವುದಾಗಿ ಸಾರಿಗೆ ಸಂಸ್ಥೆ ನೋಟಿಸ್‌ ಜಾರಿ ಮಾಡಿದೆ. ಲೋಕೋಪಯೋಗಿ ಸಚಿವರು ನಮ್ಮ ಜಿಲ್ಲೆಯವರೇ ಇದ್ದರೂ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಕೂಡಲೇ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯ ಮಾಡಿದರು.

ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ, ವಿ.ಟಿ. ಮೇಟಿ ಮುತ್ತಣ್ಣ ಕೊಂತಿಕಲ್ಲ, ಗವಿಸಿದ್ದಪ್ಪ ಬಿಸನಳ್ಳಿ, ಮರಿಯಪ್ಪ ಶಿದ್ದಣ್ಣವರ, ಕುಬೇರಪ್ಪ ಕೋಳ್ಳಾರ, ಜಾಕೀರ ಮೂಲಿಮನಿ, ಹನಮರಡ್ಡಿ ಮೇಟಿ, ಬಸುರಡ್ಡಿ ಬಂಡಿಹಾಳ, ಮನೋಜ ರಾಠೋಡ, ನಾಗರಾಜ ಕಾಟ್ರಳ್ಳಿ, ಶರಣಪ್ಪ ಶಿರುಂದ, ಮಹೇಶಪ್ಪ ಹೋಳೆಯಾಚೆ, ವಿರೂಪಾಕ್ಷಪ್ಪ ಯಲಿಗಾರ ಸೇರಿ​ದಂತೆ ವಿವಿಧ ಗ್ರಾಮದ ಹಿರಿಯರು, ಯುವಕರು, ರೈತರು ಇದ್ದರು.

ಅರ್ಜಿ ಹಾಕದವರಿಗೂ ಕೆಲ್ಸ ಕೊಟ್ಟಿದ್ದ ಕಾಂಗ್ರೆಸ್‌: ಸಿಎಂ ಬೊಮ್ಮಾಯಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!
ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಅಸಮಾಧಾನ!