ಈ ಬಾರಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ ಅವರು ಎರಡನೇ ಬಾರಿ ಹಾಗೂ ಹಿಟ್ನಾಳ ಕುಟುಂಬ 3ನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಯಿತು. ಆದರೆ, ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಮುನಿಸಿಕೊಂಡ ಸಂಗಣ್ಣ ಕರಡಿ ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿ ತಾವು ಸತತವಾಗಿ ಸೋಲಿಸಿದ ಹಿಟ್ನಾಳ ಕುಟುಂಬದ ಗೆಲುವಿಗೆ ಶ್ರಮಿಸಿದರು. ಕಾಂಗ್ರೆಸ್ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು, ಅದರಲ್ಲಿ ಯಶ ಕಂಡ
ಕೊಪ್ಪಳ(ಜೂ.05): ಸತತ ಎರಡು ಸೋಲಿಗೆ ಕಾರಣವಾಗಿದ್ದ ಸಂಗಣ್ಣ ಕರಡಿ ಅವರೇ ಈ ಬಾರಿ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಹಿಟ್ನಾಳ ಕುಟುಂಬದ ಗೆಲುವಿಗೆ ಆಸರೆಯಾಗಿದ್ದಾರೆ.
2014ರಲ್ಲಿ ಸಂಸದ ಸಂಗಣ್ಣ ಅವರ ವಿರುದ್ಧ ಸ್ಪರ್ಧೆ ಮಾಡಿದ್ದ ಕೆ.ಬಸವರಾಜ ಹಿಟ್ನಾಳ ಸೋತು, ನಂತರ 2019ರಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು ಪುತ್ರ ರಾಜಶೇಖರ ಹಿಟ್ನಾಳ ಅವರನ್ನು ಅಖಾಡಕ್ಕೆ ಇಳಿಸಿದ್ದರು. ಆಗಲೂ ಬಿಜೆಪಿ ಅಭ್ಯರ್ಥಿಯಾಗಿದ್ದ ಸಂಗಣ್ಣ ಗೆಲುವು ಸಾಧಿಸಿದ್ದರು.
undefined
ಕಾಂಗ್ರೆಸ್ ಶಾಸಕರು, ಸಚಿವರ ಕ್ಷೇತ್ರಗಳಲ್ಲೇ ಅರಳಿದ ಕಮಲ: ಕೈಹಿಡಿಯದ ಗ್ಯಾರಂಟಿ ಯೋಜನೆಗಳು
ಈ ಬಾರಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ ಅವರು ಎರಡನೇ ಬಾರಿ ಹಾಗೂ ಹಿಟ್ನಾಳ ಕುಟುಂಬ 3ನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಯಿತು. ಆದರೆ, ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಮುನಿಸಿಕೊಂಡ ಸಂಗಣ್ಣ ಕರಡಿ ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿ ತಾವು ಸತತವಾಗಿ ಸೋಲಿಸಿದ ಹಿಟ್ನಾಳ ಕುಟುಂಬದ ಗೆಲುವಿಗೆ ಶ್ರಮಿಸಿದರು. ಕಾಂಗ್ರೆಸ್ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು, ಅದರಲ್ಲಿ ಯಶ ಕಂಡರು.