ಮುಡಾ ಹಗರಣ: ಸಚಿವ ಬೈರತಿ ಸುರೇಶ್‌ಗೆ ಸಾರಾ, ಜಿ.ಟಿ.ದೇವೇಗೌಡ ತಿರುಗೇಟು

By Kannadaprabha NewsFirst Published Jul 28, 2024, 7:49 AM IST
Highlights

ಮೈಸೂರಿನ ಮುಡಾ ಹಗರಣದಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿರುವುದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧ ಜೆಡಿಎಸ್ ನಾಯಕ, ಶಾಸಕ ಜಿ.ಟಿ.ದೇವೇಗೌಡ ಹಾಗೂ ಮಾಜಿ ಸಚಿವ, ರಾಜ್ಯ ಜೆಡಿಎಸ್ ಕಾರಾಧ್ಯಕ್ಷ ಸಾ.ರಾ.ಮಹೇಶ್ ಅವರು ಆಕ್ರೋಶ ವ್ಯಕ್ತಡಿಸಿದ್ದಾರೆ. 

ಮೈಸೂರು (ಜು.28): ಮೈಸೂರಿನ ಮುಡಾ ಹಗರಣದಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿರುವುದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧ ಜೆಡಿಎಸ್ ನಾಯಕ, ಶಾಸಕ ಜಿ.ಟಿ.ದೇವೇಗೌಡ ಹಾಗೂ ಮಾಜಿ ಸಚಿವ, ರಾಜ್ಯ ಜೆಡಿಎಸ್ ಕಾರಾಧ್ಯಕ್ಷ ಸಾ.ರಾ.ಮಹೇಶ್ ಅವರು ಆಕ್ರೋಶ ವ್ಯಕ್ತಡಿಸಿದ್ದಾರೆ. 'ನನ್ನ ಹೆಸರಲ್ಲಿ ಒಂದೇ ಒಂದು ಮುಡಾಸೈಟ್ ಇದ್ದರೆ ಅಥವಾ ಯಾರಿಗಾದರೂ ನಾನು ಶಿಫಾರಸ್ಸು ಪತ್ರ ನೀಡಿದ್ದರೆ ರುಜುವಾತುಪಡಿಸಿ, ತಕ್ಷಣವೇ ಎಲ್ಲಾ ಜಮೀನನ್ನು ವಾಪಸ್ ಮಾಡುತ್ತೇನೆ' ಎಂದು ಸಾ.ರಾ.ಮಹೇಶ್ ಸವಾಲು ಹಾಕಿದ್ದಾರೆ. ಇದೇ ವೇಳೆ, 'ಸಚಿವರು 7 ದಿನದೊಳಗೆ ನನ್ನ ವಿರುದ್ಧದ ಆರೋಪಕ್ಕೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ನನ್ನ ಹೆಸರಿಗೆ ಕಳಂಕ ತಂದಿರುವುದಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಗೊಳಿಸುತ್ತೇನೆ' ಎಂದು ಜಿ.ಟಿ.ದೇವೇಗೌಡ ಎಚ್ಚರಿಸಿದ್ದಾರೆ. 

ನಗರದಲ್ಲಿ ಶನಿವಾರ ಉಭಯ ನಾಯಕರು ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, 'ಚಾಮುಂಡೇಶ್ವರಿ ಕ್ಷೇತ್ರವ್ಯಾಪ್ತಿಯ ಇಬ್ಬರು ರೈತರಿಗೆ 50:50 ಅನುಪಾತದಲ್ಲಿ ನ್ಯಾಯದೊರಕಿಸಿಕೊಡುವಂತೆ ನಾನು ಬರೆದ ಪತ್ರವನ್ನಿಟ್ಟುಕೊಂಡು ನನಗೆ ನಿವೇಶನ ನೀಡಿರುವುದಾಗಿ ಸಚಿವ ಭೈರತಿ ಸುರೇಶ್ ಆರೋಪಿಸಿದ್ದಾರೆ. ಈ ಬಗ್ಗೆ ಸಚಿವರು ಏಳು ದಿನಗಳ ಒಳಗೆ ಉತ್ತರ ಕೊಡಬೇಕು. ತಪ್ಪಿದರೆ ನಾನೇ ನೋಟಿಸ್‌ ಕೊಟ್ಟು, ನನ್ನ ಹೆಸರಿಗೆ ಕಳಂಕ ತಂದಿರುವುದಕ್ಕೆ ಕಾರಣ ಕೇಳುತ್ತೇನೆ. ನನ್ನ ಹೆಸರಲ್ಲಿ ಸೈಟ್ ಇದ್ದರೆ ರುಜುವಾತುಪಡಿಸಲಿ ಎಂದು ಸವಾಲು ಹಾಕಿದರು.

Latest Videos

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ಆಗಿಲ್ಲ: ಸಂಸದ ಬೊಮ್ಮಾಯಿ

'ನನ್ನ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಅಕ್ರಮವಾಗಿ ಮುಡಾ ಅಥವಾ ಗೃಹ ಮಂಡಳಿ ಯಿಂದ ಒಂದೇ ಒಂದು ನಿವೇಶನ ಪಡೆದಿದ್ದರೆ, ಸಾಬೀತುಪಡಿಸಲಿ. ಗೋವಿಂದರಾಜ್ ಅವರು ಮುಡಾ ಅಧ್ಯಕ್ಷರಾಗಿದ್ದಾಗ ಅನೇಕರು ನಿಯಮ ದಂತೆ ಅರ್ಜಿ ಸಲ್ಲಿಸಿದ್ದೆವು. ಆಗ ಲಾಟರಿಯಲ್ಲಿ ನನಗೆ 5080 ಅಳತೆಯ ನಿವೇಶನ ಲಭಿಸಿತು. ನನ್ನ ತಂದೆ ನನಗೆ 18 ಎಕರೆ ಜಮೀನು ನೀಡಿದ್ದರು. ಅದನ್ನು ಉತ್ತು, ಬೆಳೆದು ಜೀವನ ನಡೆಸಿದ್ದೇನೆ. ಇದರ ಜೊತೆಗೆ ಸಮೀಪದಲ್ಲಿಯೇ 15 ಎಕರೆ ಜಮೀನು ಪಡೆದಿದ್ದೇನೆ. 

ಅದನ್ನು ಹೊರತುಪಡಿಸಿ ಗೃಹ ಮಂಡಳಿಯ ಲ್ಲಾಗಲಿ, ಮುಡಾ ವತಿಯಿಂದಾಗಲಿ ಒಂದೇ ಒಂದು ನಿವೇಶನ ವನ್ನೂ ಪಡೆದಿಲ್ಲ. ಆ ನಿವೇಶನ ದೊರಕುವ ಮುನ್ನ ನಾನು ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದೆ. ನಾನು ಅನೇಕ ಬಾರಿ ಶಾಸಕನಾಗಿದ್ದೇನೆ, ಸಚಿವನಾಗಿದ್ದೇನೆ, ಗೃಹಮಂಡಳಿ ಅಧ್ಯಕ್ಷನಾಗಿದ್ದೆ. ಆದರೂನನ್ನ ಹೆಸರಿನಲ್ಲಾಗಲಿ, ನನ್ನ ಕುಟುಂಬ ವರ್ಗದವರ ಹೆಸರಿನಲ್ಲಾಗಲಿ ಒಂದೇ ಒಂದು ವಾಣಿಜ್ಯ ಸಂಕೀರ್ಣ, ಶಾಲೆ, ಕಲ್ಯಾಣ ಮಂಟಪ, ಹೊಟೇಲ್ ಮಾಡಿದ್ದರೆ ತಿಳಿಸಲಿ. ನಾನು ಇಷ್ಟು ವರ್ಷದ ರಾಜಕೀಯದಲ್ಲಿ ನಾನೆಷ್ಟು ಆಸ್ತಿ ಮಾಡಿದ್ದೇನೆ ಎಂಬುದು ತನಿಖೆಯಾಗಲಿ. ನನ್ನಷ್ಟು ಪ್ರಾಮಾಣಿಕವಾಗಿ ಇರುವ ಶಾಸಕರನ್ನು ತೋರಿಸಲಿ' ಎಂದು ಸವಾಲು ಹಾಕಿದರು. 

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ 15300 ಕೋಟಿ ನೆರವು: ಇದು ಯುಪಿಎ ಸರ್ಕಾರದಲ್ಲಿ ನೀಡಿದ್ದಕ್ಕಿಂತ ಹೆಚ್ಚು!

ಸಾ.ರಾ.ಮಹೇಶ್ ಮಾತನಾಡಿ, 'ಮುಖ್ಯಮಂತ್ರಿ ಸಮ್ಮುಖದಲ್ಲಿ ನಗರಾಭಿವೃದ್ಧಿ ಸಚಿವರು ನನ್ನ ಹೆಸರು ಹೇಳಿದ್ದಾರೆ. ನನ್ನ ಹೆಸರಲ್ಲಿ ಸೈಟ್ ಇದ್ದರೆ ರುಜುವಾತು ಮಾಡಲಿ' ಎಂದು ಸವಾಲು ಹಾಕಿದರು.'ದಟ್ಟಗಳ್ಳಿ ಸರ್ವೇ ನಂ.133/3ರಲ್ಲಿ 9 ಗುಂಟೆ ಜಾಗವು ನನ್ನ ಪತ್ನಿಯ ಹೆಸರಿನಲ್ಲಿದೆ. ಬೋಗಾದಿಯಲ್ಲಿ 2.11 ಎಕರೆ ಜಾಗ ಕೊಟ್ಟಿದ್ದೀವಿ ಎಂದು ಹೇಳಿದ್ದಾರೆ. ಆ ಜಾಗ ಯಾರ ಹೆಸರಿನಲ್ಲಿದೆ ಎಂಬುದನ್ನು ಹೇಳಲಿ. ಈ ಬಗ್ಗೆ ತನಿಖೆ ಆಗಲಿ' ಎಂದು ಅವರು ಒತ್ತಾಯಿಸಿದರು. 'ನಾನು ಮುಡಾಕ್ಕೆ ಒಂದೇ ಒಂದು ಶಿಫಾರಸ್ಸು ಪತ್ರ ಸಹ ಕೊಟ್ಟಿಲ್ಲ. ನಗರಾಭಿವೃದ್ಧಿ ಸಚಿವರು ಬಿಡುಗಡೆ ಮಾಡಿದ ಪಟ್ಟಿಯಲ್ಲಿ ನನ್ನ ಹೆಸರು ಹೇಗೆ ಬಂತು ಅನ್ನೋದೇ ಗೊತ್ತಿಲ್ಲ. ನಾನು ಶಿಫಾರಸ್ಸು ಪತ್ರ ಕೊಟ್ಟಿರುವುದು ನಿಜವಾದರೆ ಅದನ್ನು ಬಹಿರಂಗಪಡಿಸಲಿ. ನನ್ನ ಸ್ವಂತ ಹಣದಲ್ಲಿ ಅದನ್ನು ಖರೀದಿಸಿ ವಾಪಸ್ ಪ್ರಾಧಿಕಾರಕ್ಕೆ ಕೊಡುತ್ತೇನೆ' ಎಂದರು.

click me!