\ಒಂದು ಸಂಘಟನೆ ನಿಷೇಧಿಸಿದರೆ, ಇನ್ನೊಂದು ಸಂಘಟನೆ ಹುಟ್ಟಿಕೊಳ್ಳುತ್ತದೆ. ಬದಲಾಗಿ ಆರ್‌ಎಸ್‌ಎಸ್‌ನಲ್ಲಿರುವ ದಲಿತರು, ಶೂದ್ರರು ಮತ್ತು ಕೆಳವರ್ಗದವರನ್ನು ಸೆಳೆಯಬೇಕಿದೆ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿ
ಒಂದು ಸಂಘಟನೆ ನಿಷೇಧಿಸಿದರೆ, ಇನ್ನೊಂದು ಸಂಘಟನೆ ಹುಟ್ಟಿಕೊಳ್ಳುತ್ತದೆ. ಬದಲಾಗಿ ಆರ್‌ಎಸ್‌ಎಸ್‌ನಲ್ಲಿರುವ ದಲಿತರು, ಶೂದ್ರರು ಮತ್ತು ಕೆಳವರ್ಗದವರನ್ನು ಸೆಳೆಯಬೇಕಿದೆ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿಗೆ ಬುದ್ಧ, ಬಸವ, ಅಂಬೇಡ್ಕರ ವಿಚಾರಧಾರೆ ತಿಳಿಹೇಳುವ ಪ್ರಯತ್ನ ಮಾಡುತ್ತೇವೆ. ಆರ್‌ಎಸ್‌ಎಸ್‌ನಲ್ಲಿರುವ ದಲಿತರನ್ನು ಸೆಳೆಯುವ ಮೂಲಕ ಅಹಿಂದಗೆ ಮತ್ತಷ್ಟುಶಕ್ತಿ ತುಂಬಬೇಕಿದೆ. ಯಾವುದೇ ಸಂಘಟನೆ ಬ್ಯಾನ್ ಮಾಡುವುದು ನಮಗೆ ಪರಿಹಾರವಲ್ಲ ಎಂದರು.
ತಾಳ್ಮೆಯಿಂದ ಇರಿ, ಗ್ಯಾರಂಟಿ ಭರವಸೆ ಈಡೇರಿಸುತ್ತೇವೆ: ಲಕ್ಷ್ಮೀ ಹೆಬ್ಬಾಳ್ಕರ್
ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ರದ್ದು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಎಲ್ಲ ಕಾಯ್ದೆಗಳ ಬಗ್ಗೆ ಚರ್ಚೆಯಾಗಬೇಕು. ತಕ್ಷಣವೇ ಕಾಯ್ದೆಗಳನ್ನು ನಿಷೇಧಗೊಳಿಸುವುದು ಅಸಾಧ್ಯವಾಗಿದೆ. ಈ ಬಗ್ಗೆ ಸರ್ಕಾರ ಹಾಗೂ ಪಕ್ಷದಲ್ಲಿ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಆಗಬೇಕು. ಸಂಪೂರ್ಣ ಚರ್ಚೆ ಆದ ಮೇಲೆಯೇ ಈ ಸಂಬಂಧ ಸರ್ಕಾರದಿಂದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸತೀಶ ಜಾರಕಿಹೊಳಿಗೆ ಭರ್ಜರಿ ಸ್ವಾಗತ
ಚನ್ನಮ್ಮನ ಕಿತ್ತೂರು: ಇತಿಹಾಸ ಪ್ರಸಿದ್ಧ ಕಿತ್ತೂರು ಪಟ್ಟಣಕ್ಕೆ ನೂತನ ಸಚಿವರಾಗಿ ಆಗಮಿಸಿದ ಸತೀಶ ಜಾರಕಿಹೊಳಿಯವರಿಗೆ ಅಭಿಮಾನಿ ಬಳಗದ ವತಿಯಿಂದ ಹಾಗೂ ಕಾರ್ಯಕರ್ತರಿಂದ ಭಾನುವಾರ ಭರ್ಜರಿ ಸ್ವಾಗತ ದೊರೆಯಿತು.
ಬೆಳಗಾವಿಗೆ ನಾಳೆ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್; ಭರ್ಜರಿ ಸ್ವಾಗತಕ್ಕೆ ಕಾರ್ಯಕರ್ತರು ಸಜ್ಜು!
ಸಚಿವರಾಗಿ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಸಿಸದ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಜೆಸಿಬಿ ಮೂಲಕ ಪುಷ್ಪಾರ್ಚಣೆ ಮಾಡಿದರು. ನಂತರ ನೂತನ ಸಚಿವರು ವೀರ ರಾಣಿ ಕಿತ್ತೂರು ಚನ್ನಮಾಜಿಗೆ ಹಾಗೂ ವೀರರಾದ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರು ಬಾಳಪ್ಪ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಅರ್ಪಿಸಿದರು. ಈ ಸಮಯದಲ್ಲಿ ಜಾರಕಿಹೊಳಿ ಅವರ ಅಪಾರ ಅಭಿಮಾನಿಗಳು ಜಯಘೋಷ ಹಾಕುವುದರ ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಸಕ ಬಾಬಾಸಾಹೇಬ್ ಪಾಟೀಲ, ರೋಹಿಣಿ ಪಾಟೀಲ, ಸೌದತ್ತಿ ಶಾಸಕ ವಿಶ್ವಾಸ ವೈದ್ಯ, ಮುದುಕಪ್ಪ ಮರಡಿ, ಸಂಗನಗೌಡ ಪಾಟೀಲ, ರಾಜಸಲೀಂ ಖಾಸಿಂನವರ, ಶಂಕರ ಹೊಳಿ, ಪಪಂ ಸದಸ್ಯ ಶಂಕರ ಬಡಿಗೇರ, ಕೃಷ್ಣಾ ಬಾಳೆಕುಂದ್ರಿ ಹಾಗೂ ಅಶ್ಪಾಕ್ ಹವಾಲ್ದಾರ, ಬಸವರಾಜ ಸಂಗೋಳ್ಳಿ, ಪಪಂ ಮಾಜಿ ಅಧ್ಯಕ್ಷ ಹನಿಫ್ ಸುತಗಟ್ಟಿ,ಚಂದ್ರಗೌಡ ಪಾಟೀಲ, ಸುರೇಶ ಜೋರಾಪೂರ, ಸುನಿಲ ಗಿವಾರಿ ಸೇರಿದಂತೆ ಅಪಾರ ಕಾಂಗ್ರೆಸ… ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಜರಿದ್ದರು.