ಫುಲ್ ಗರಂ ಆದ್ರು ಆರ್‌ಆರ್‌ ನಗರ ಅಭ್ಯರ್ಥಿ ಕುಸುಮಾ : ಕಾರಣ ಏನು..?

By Kannadaprabha News  |  First Published Oct 16, 2020, 8:25 AM IST

RR ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಫುಲ್ ಗರಂ ಆಗಿದ್ದಾರೆ. ಕುಸುಮಾ ಗರಂ ಆಗಲು ಕಾರಣ ಏನು..? 


ಬೆಂಗಳೂರು (ಅ.16):  ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸುವ ಮೂಲಕ ನನ್ನ ಹಾಗೂ ಕಾಂಗ್ರೆಸ್‌ ಪಕ್ಷದ ಧ್ವನಿಯನ್ನು ಅಡಗಿಸಬಹುದು ಎಂದುಕೊಂಡಿದ್ದರೆ ಅದು ಸುಳ್ಳು. ನನ್ನ ವಿರುದ್ಧದ ಶೋಷಣೆಗೆ ರಾಜರಾಜೇಶ್ವರಿನಗರದ ಜನತೆಯೇ ಸೂಕ್ತ ಉತ್ತರ ಕೊಡುತ್ತಾರೆ ಎಂದು ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ತಿಳಿಸಿದ್ದಾರೆ.

ಬುಧವಾರ ನಾಮಪತ್ರ ಸಲ್ಲಿಕೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿರುವುದಾಗಿ ತಮ್ಮ ಮೇಲೆ ದಾಖಲಾಗಿರುವ ಎಫ್‌ಐಆರ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ರಾಜಕೀಯಕ್ಕೆ ಬಂದಿರುವುದು ರಾಜಕಾರಣದ ಜೊತೆಗೆ ಸಮಾಜಮುಖಿ ಕೆಲಸ ಹಾಗೂ ಜನರ ಕೆಲಸ ಮಾಡಲು. ಒಬ್ಬ ಅಸಹಾಯಕ ಹೆಣ್ಣು ಮಗಳು ಸಮಾಜಮುಖಿ ಕೆಲಸ ಮಾಡಲು ಬಂದ ತಕ್ಷಣ ನನ್ನ ಗುರಿಯಾಗಿಸಿಕೊಂಡು (ಟಾರ್ಗೆಟ್‌) ಎಫ್‌ಐಆರ್‌ ದಾಖಲಿಸಿದ್ದೀರಿ. ನನಗಿಂತ ಮೊದಲು ಎಲ್ಲಾ ರೀತಿಯಲ್ಲೂ ನೀತಿ ಸಂಹಿತೆ ಉಲ್ಲಂಘಿಸಿದವರು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು.

Tap to resize

Latest Videos

undefined

ಕನಕಪುರದ ಇತಿಹಾಸ ಗೊತ್ತಿಲ್ಲವೆ? FIRತಪ್ಪೇನು? ಡಿಕೆಶಿಗೆ ಎಚ್‌ಡಿಕೆ ಗುನ್ನಾ! .

ನಮ್ಮ ಸಮಾಜದಲ್ಲಿ ನಿರ್ಜನ ಪ್ರದೇಶದಲ್ಲಿ ಒಬ್ಬ ಹೆಣ್ಣು ಮಗಳ ಮೇಲೆ ಆಗುವ ಶೋಷಣೆಯಷ್ಟೇ ದೊಡ್ಡ ಶೋಷಣೆ ಬುಧವಾರ ರಾಜರಾಜೇಶ್ವರಿನಗರ ಬಿಬಿಎಂಪಿ ಕಚೇರಿ ಆವರಣದಲ್ಲಿ ನನ್ನ ಮೇಲೆ ನಡೆದಿದೆ. ಇದೆಲ್ಲದಕ್ಕೂ ನಾನು ಪ್ರೀತಿಸುವ ರಾಜ ರಾಜೇಶ್ವರಿನಗರ ಜನರು ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದರು.

click me!