ಕುಸುಮಾ ನಾಮಪತ್ರಕ್ಕೆ ಮುಹೂರ್ತ ಫಿಕ್ಸ್

By Kannadaprabha News  |  First Published Oct 12, 2020, 7:25 AM IST

ಕುಸುಮಾಗೆ ಆರ್‌ ಆರ್‌ ನಗರದಿಂದ ಟಿಕೆಟ್ ನೀಡಲಾಗಿದ್ದು ನಾಮಪತ್ರ ಸಲ್ಲಿಕೆಗೂ ಮುಹೂರ್ತ ಫಿಕ್ಸ್ ಆಗಿದೆ. 


ಬೆಂಗಳೂರು (ಅ.12):  ಶಿರಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ. ಜಯಚಂದ್ರ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು ಭಾನುವಾರ ಬಿ-ಫಾರಂ ಸ್ವೀಕರಿಸಿದ್ದು, ಅ.14ರಂದು ಕುಸುಮಾ ಹಾಗೂ ಅ.15 ರಂದು ಟಿ.ಬಿ. ಜಯಚಂದ್ರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

"

Tap to resize

Latest Videos

ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಅಭ್ಯರ್ಥಿಗಳು ಅಧಿಕೃತವಾಗಿ ಪಕ್ಷದ ಬಿ-ಫಾರಂ ಸ್ವೀಕರಿಸಿದರು. 

RR ನಗರ, ಶಿರಾ ಉಪಚುನಾವಣೆ: ಸಿದ್ದು-ಡಿಕೆಶಿ ಜಂಟಿ ತಂತ್ರಗಾರಿಕೆ..!

ಅ.14 ರಂದು ರಾಜರಾಜೇಶ್ವರಿನಗರದಲ್ಲಿ ಕುಸುಮಾ ಹನುಮಂತರಾಯಪ್ಪ ಹಾಗೂ ಅ.15ರಂದು ಶಿರಾದಲ್ಲಿ ಟಿ.ಬಿ.ಜಯಚಂದ್ರ ನಾಮಪತ್ರ ಸಲ್ಲಿಸಲಿದ್ದಾರೆ.

ಎರಡೂ ಕಡೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತೆರಳಿ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೆ ಸಾಥ್‌ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

click me!