RR ನಗರ, ಶಿರಾದಲ್ಲಿ ಚುನಾವಣಾ ಸಿದ್ಧತೆ: ಎಲ್ಲೆಡೆ ಬಿಗಿ ಭದ್ರತೆ

By Suvarna News  |  First Published Nov 2, 2020, 5:48 PM IST

ಕಳೆದೊಂದು ತಿಂಗಳಿಂದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣಾ ಸಮರಾಂಗಣದ ಬಹಿರಂಗ ಪ್ರಚಾರದ ಭರಾಟೆಗೆ ಭಾನುವಾರ ಸಂಜೆ ಅಂತಿಮ ತೆರೆ ಬಿದ್ದಿದೆ.


ಬೆಂಗಳೂರು (ನ. 02): ಇನ್ನೂ ಉಪ ಚುನಾವಣೆಗೆ ಮತದಾನಕ್ಕೆ ಒಂದೇ ದಿನ ಬಾಕಿ ಉಳಿದಿದ್ದು, ಇಂದು ಮನೆ-ಮನೆಗೆ ತೆರಳಿ ಮತಪ್ರಭುವಿಗೆ ಅಭ್ಯರ್ಥಿಗಳು ವಿನಂತಿಸಿದ್ದಾರೆ. ರಾಜ್ಯದಲ್ಲಿ ನಡೆದಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಆಡಳಿತರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗಳಿಗೆ ಪ್ರತಿಷ್ಠೆಯಾಗಿದೆ.

Tap to resize

Latest Videos

ಕಳೆದೊಂದು ತಿಂಗಳಿಂದ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪ ಚುನಾವಣಾ ಸಮರಾಂಗಣದ ಬಹಿರಂಗ ಪ್ರಚಾರದ ಭರಾಟೆಗೆ ಭಾನುವಾರ ಸಂಜೆ ಅಂತಿಮ ತೆರೆ ಬಿದ್ದಿದೆ. ಇದರ ಬೆನ್ನಲ್ಲೆ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದ ಆಡಳಿತ ಹಾಗೂ ವಿರೋಧ ಪಕ್ಷಗಳ ಘಟಾನುಘಟಿ ನಾಯಕರುಗಳು ಹೊರ ನಡೆದಿದ್ದಾರೆ.

ನಾಳೆ ಆರ್‌ ಆರ್ ನಗರದಲ್ಲಿ ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 3600 ಚುನಾವಣಾ ಸಿಬ್ಬಂದಿ, 1600 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 

 

 

click me!