ತಂದೆಯ ಲಾಲೂ ಯಾದವ್ ರೆಕಾರ್ಡ್ ಮುರಿದ ಮಗ ತೇಜಸ್ವಿ!

By Suvarna News  |  First Published Nov 2, 2020, 5:21 PM IST

ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಪ್ರಚಾರ ಅಂತ್ಯ| ತಂದೆಯ ಲಾಲೂ ಯಾದವ್ ರೆಕಾರ್ಡ್ ಮುರಿದ ಮಗ ತೇಜಸ್ವಿ|  17 Rally ಹಾಗೂ ಎರಡು ರೋಡ್‌ ಶೋ ನಡೆಸಿದ ತೇಜಸ್ವಿ


ಪಾಡ್ನಾ(ನ.02): ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಪ್ರಚಾರ ಮುಗಿದಿದೆ. ಹೀಗಿರುವಾಗ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ತಮ್ಮ ಹೆಸರಲ್ಲಿ ಕುತೂಹಲಕಾರಿ ದಾಖಲೆ ನಿರ್ಮಿಸಿದ್ದಾರೆ. ಮಹಾಘಟಬಂಧನದ ಸಿಎಂ ಅಭ್ಯರ್ಥಿ ತೇಜಸ್ವಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಹೀಗಿರುವಾಗ ತೇಜಸ್ವಿ ತನ್ನ ತಂದೆ ಲಾಲೂ ಪ್ರಸಾದ್ ಯಾದವ್‌ರನ್ನು ಒಂದು ದಿನದಲ್ಲಿ ಅತೀ ಹೆಚ್ಚು Rally ನಡೆಸಿರುವ ವಿಚಾರದಲ್ಲಿ ಹಿಂದಿಕ್ಕಿದ್ದಾರೆ. ಎರಡನೇ ಹಂತದ ಮತದಾನಕ್ಕೂ ಮೊದಲು ತೇಜಸ್ವಿ ಯಾದವ್ ಶನಿವಾರದಂದು ಬರೋಬ್ಬರಿ 17 Rally ಹಾಗೂ ಎರಡು ರೋಡ್‌ ಶೋ ನಡೆಸಿ ಈ ಹೊಸ ದಾಖಲೆ ನಿರ್ಮಿಸಿದ್ದಾರೆ.

ಇದಕ್ಕೂ ಮುನ್ನ ಒಂದು ದಿನದಲ್ಲಿ ಅತ್ಯಧಿಕ Rally ನಡೆಸಿದ್ದ ದಾಖಲೆ ಬಿಹಾರದ ಮಾಜಿ ಸಿಎಂ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೆಸರಲ್ಲಿತ್ತು. ಅವರು ಒಂದು ದಿನದಲ್ಲಿ 16 ಜನ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದರು. ಈ ಸಂಬಂಧ ಸುದ್ದಿ ಸಂಸ್ಥೆ ಎಎನ್‌ಐಗೆ ನಿಡಿದ ಸಂದರ್ಶನದಲ್ಲಿ ಮಾತನಾಡಿದ ತೇಜಸ್ವಿ 'ಶಾರೀರಿಕ ಹಾಗೂ ಮಾನಸಿಕವಾಗಿ ನಾನು ಆಯಾಸಗೊಂಡಿಲ್ಲ. ಜನರ ಮೇಲೆ ನನಗೆ ಅಭೂತಪೂರ್ವ ಪ್ರೀತಿ, ಸಮರ್ಥನೆ ಹಾಗೂ ಬೆಂಬಲ ಸಿಗುತ್ತಿದೆ. ಹೀಗಾಗೇ ನಾನು ನಿರಂತರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ.' ಎಂದಿದ್ದಾರೆ.

Tap to resize

Latest Videos

ಶನಿವಾರದಂದು ತೇಜಸ್ವಿ ತನ್ನ ಮೊದಲ ರ್ಯಾಲಿಯನ್ನು ಸೀತಾಮಢಿಯ ರಿಗಾ ಬ್ಲಾಕ್‌ನಿಂದ ಬೆಳಗ್ಗೆ 10 ಗಂಟೆ 5 ನಿಮಿಒಷಕ್ಕೆ ಆರಂಭಿಸಿ, ವೈಶಾಲಿ ಜಿಲ್ಲೆಯ ಬಿದೂಪುಉರ ಬ್ಲಾಕ್‌ನಲ್ಲಿ ಸಂಜೆ 4 ಗಂಟೆ 45 ನಿಮಿಷಕ್ಕೆ ಕೊನೆಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದರು. ಇನ್ನು ನಿತೀಶ್ ಕುಮಾರ್ ಪ್ರತಿದಿನ ಸುಮಾರು 6 ರಿಂದ 7 ಸಮಾವೇಶವನ್ನುದ್ದೇಶಿಸಿ ಮಾತನಾಡಿದರೆ, ಪಿಎಂ ಮೋದಿ ಒಟ್ಟು ಹನ್ನೆರಡು ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

click me!