'ಯಾರ್ರೀ ಈಶ್ವರಪ್ಪ.. ವಿಶ್ವನಾಥ್.. ನಾಚಿಕೆ ಇಲ್ವಾ'  ಕೆಂಡವಾದ ಬಿಜೆಪಿ ಸಂಸದ

Published : Mar 02, 2021, 06:01 PM ISTUpdated : Mar 02, 2021, 06:14 PM IST
'ಯಾರ್ರೀ ಈಶ್ವರಪ್ಪ.. ವಿಶ್ವನಾಥ್.. ನಾಚಿಕೆ ಇಲ್ವಾ'  ಕೆಂಡವಾದ ಬಿಜೆಪಿ ಸಂಸದ

ಸಾರಾಂಶ

ಮೀಸಲಾತಿ ಕೇಳಲು ನಿಮಗೆ ನಾಚಿಕೆಯಾಗೋಲ್ವಾ?/ ಮೀಸಲಾತಿ ಕೇಳಿದವರ ವಿರುದ್ದ ಸಿಡಿದೆದ್ದ ಸಂಸದ ವಿ. ಶ್ರೀನಿವಾಸ್ ಪ್ರಸಾದ್/ ಕುರುಬರು, ಪಂಚಮಸಾಲಿ ಮೀಸಲಾತಿ ಕೇಳಿದವರಿಗೆ ಪ್ರಸಾದ್ ಟಾಂಗ್/ 10 ಕೋಟಿ ಕೊಟ್ಟು ಹೆಲಿಕ್ಯಾಪ್ಟರ್ ತಗೊಳೋರು ಮೀಸಲಾತಿ ಕೇಳ್ತೀರಾ? ಈ ರಾಜ್ಯಕ್ಕೆ ಸಿಎಂ ಆಗ್ತಿರಾ. ಅಂತ ಜನಾಂಗಕ್ಕೆ ಮಿಸಲಾತಿ ಕೊಡಬೇಕಾ? / ತಮ್ಮ ಪಕ್ಷದವರ ವಿರುದ್ಧವೇ ಹರಿಹಾಯ್ದ ಪ್ರಸಾದ್

ಮೈಸೂರು(ಮಾ. 02)   ಮೀಸಲಾತಿ ಕೇಳಲು ನಿಮಗೆ ನಾಚಿಕೆಯಾಗೋಲ್ವಾ? ಎಂದು ಮೀಸಲಾತಿ ಕೇಳಿದವರ ವಿರುದ್ದ  ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಕೆಂಡ ಕಾರಿದ್ದಾರೆ.

ಕುರುಬರು, ಪಂಚಮಸಾಲಿ ಮೀಸಲಾತಿ ಕೇಳಿದವರಿಗೆ ಪ್ರಸಾದ್ ಟಾಂಗ್ ನೀಡಿದ್ದಾರೆ 10 ಕೋಟಿ ಕೊಟ್ಟು ಹೆಲಿಕ್ಯಾಪ್ಟರ್ ತಗೊಳೋರು ಮೀಸಲಾತಿ ಕೇಳ್ತೀರಾ?. ಈ ರಾಜ್ಯಕ್ಕೆ ಸಿಎಂ ಆಗ್ತಿರಾ. ಅಂತ ಜನಾಂಗಕ್ಕೆ ಮಿಸಲಾತಿ ಕೊಡಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.

ಕರ್ನಾಟದಲ್ಲಿನ ಮೀಸಲಾತಿ ಹೋರಾಟ; ಹೊಸ ಲೆಕ್ಕಾಚಾರ

ಮೈಮೇಲೆ ಬಟ್ಟೆ ಇಲ್ಲದವರು ಕೇಳಲಿ. ಆನೆ ಮೇಯಿಸಿಕೊಂಡು ಕಾಡಲ್ಲಿ ಇರೋರು ಕೇಳಿದ್ರೆ ಅದನ್ನ ಒಪ್ಪೋಣ. ದೊಡ್ಡ ದೊಡ್ಡ ಬಿಸಿನಸ್‌ಮ್ಯಾನ್‌ಗಳು, ಉಪಮುಖ್ಯಮಂತ್ರಿಗಳಾಗಿದ್ದರು ರಿಯಲ್ ಎಸ್ಟೇಟ್ ಮಾಡುವವರಿಗೆ ಮಿಸಲಾಗಿ ಕೊಡಬೇಕಾ? ಆ ಎಂಟಿಬಿ 10 ಕೋಟಿ ಕೊಟ್ಟು ಹೆಲಿಕ್ಯಾಪ್ಟರ್ ತಗೋಳೋಕೆ ಆಗುತ್ತೆ. ಇಂತವರೇಲ್ಲ ಮಿಸಲಾತಿ ಕೇಳ್ತಿರಾ? ಎಂದು ತಮ್ಮ ಪಕ್ಷದವರ ವಿರುದ್ಧವೇ ಹರಿಹಾಯ್ದಿದ್ದಾರೆ.

ಅದ್ಯಾರೋ 2A ಗೆ ಸೇರಿಸಿ ಅಂತಾರೆ. ಕುಳಿತಿರುವ ಜಾಗದಲ್ಲಿ 2Aಗೆ ಸೇರಿಸಲು ಆಗುತ್ತಾ? ಇವೇಲ್ಲದರ ಬಗ್ಗೆ ಸರ್ಕಾರ ಸ್ಪಷ್ಟವಾದ ಹೇಳಿಕೆ ಕೊಡಬೇಕು. ಸಿಎಂ ಹಾಗೂ ಕಾನೂನು ಸಚಿವರು ಇದನ್ನ ಸ್ಪಷ್ಟಪಡಿಸಬೇಕು. ಒಂದೆ ಹೇಳಿಕೆಯಲ್ಲಿ ಎಲ್ಲವನ್ನು ಮುಗಿಸಬೇಕು‌. ನಮ್ಮ ಇತಿ ಮಿತಿ ಏನಿದೆ ಅಂತ ಹೇಳಿಕೆ ಕೊಟ್ಟ ಮುಗಿಸಬೇಕು. ಯಾರನ್ನ 2A ಸೇರಿಸುತ್ತಿದ್ದೀರಾ ಹಾಗಾದ್ರೆ 2A ನಲ್ಲಿ ಇರೋರು ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.

ಮೀಸಲಾತಿ ಶೇ.  50 ಗಿಂತ ಜಾಸ್ತಿ ಇರಬಾರದು ಅಂತ ಸುಪ್ರೀಂಕೋರ್ಟ್ ಹೇಳಿದೆ. ಇದನ್ನ ಮುಂದುವರೆಸಬಾರದು. ಯಾರ್ರೀ ಅದು ಈಶ್ವರಪ್ಪ ...ವಿಶ್ವನಾಥ್. ಯಾವುದೋ ವೇದಿಕೆ ಮೇಲೆ ನಿಂತ್ಕೊಂಡು ಜನ ಸೇರಿಸಿ ಮೀಸಲಾತಿ ಕೇಳೋಕೆ ಆಗುತ್ತಾ? ಆ ವಿಶ್ವನಾಥ್ ದೇಶಕ್ಕೆಲ್ಲ ಮಾತನಾಡ್ತಾನೆ ಅವನಿಗೆ ಗೊತ್ತಾಗೋಲ್ವಾ. ಬೀದಿಯಲ್ಲಿ ನಿಂತು ಮೀಸಲಾತಿ  ಮಾತನಾಡೋದಲ್ಲ ಎಂದು ಏಕವಚನದಲ್ಲಿಯೇ ವಾಗ್ದಾಳಿ ಮಾಡಿದ್ದಾರೆ.

ಮೀಸಲಾತಿಗೆ ಬಗ್ಗೆ ನಾನು ಮಾತನಾಡುವಾಗ ಸರಿಯಾಗಿ ಉತ್ತರ ಕೊಡಬೇಕು. ಸುದೀರ್ಘವಾಗಿ ರಾಜಕಾರಣ ಮಾಡಿರುವವನು ನಾನು. ಮೀಸಲಾತಿ ಪ್ರಶ್ನೆ ಕೇಂದ್ರದ ಮುಂದೆ ಇರುತ್ತೆ. ಎಸ್‌ಟಿಗೆ ಕೊಡಬೇಕೋ ಬೇಡ್ವೋ ಅನ್ನೋದನ್ನ ಕೇಂದ್ರ ತೀರ್ಮಾನ ಮಾಡುತ್ತೆ‌. ರಾಜ್ಯ ಸರ್ಕಾರ ಶಿಫಾರಸ್ಸು ಮಾತ್ರ ಮಾಡಬೇಕು. ತಜ್ಞರ ಸಮಿತಿ ನೇಮಕ ಮಾಡಬೇಕು. ಇದನ್ನ ಮಾಡಿದವರು ಹಾವಲೂರು ಒಬ್ಬರೇ. ನಾಯಕ ಸಮಾಜಕ್ಕೆ ಎಸ್.ಟಿ.ಸೇರಿಸಲು ಕಾನೂನು ರೀತಿಯಲ್ಲಿ ಹೋರಾಟ ಮಾಡಿದ್ರು. ಈ ರೀತಿಯ ವರ್ತನೆ ಸರಿಅಲ್ಲ ಎಂದು ಪ್ರಸಾದ್ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರಲ್ಲೇ ಮಾತನಾಡುತ್ತೇನೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯ ಹಿಂದಿನ ರಹಸ್ಯವೇನು?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ