ಧರ್ಮ ಆಧಾರಿತ ಮೀಸಲಾತಿ ವ್ಯವಸ್ಥೆ ಮಾರಕ: ಶಾಸಕ ಬಸನಗೌಡ ಯತ್ನಾಳ್

By Kannadaprabha News  |  First Published Apr 27, 2024, 12:11 PM IST

ಧರ್ಮ ಆಧಾರಿತವಾಗಿ ಮೀಸಲಾತಿ ವ್ಯವಸ್ಥೆ ಇದ್ದಲ್ಲಿ ದೇಶಕ್ಕೆ ಮಾರಕ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ನಡೆದ ಬಿಜೆಪಿ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.


ಮಾನ್ವಿ (ಏ.27): ಧರ್ಮ ಆಧಾರಿತವಾಗಿ ಮೀಸಲಾತಿ ವ್ಯವಸ್ಥೆ ಇದ್ದಲ್ಲಿ ದೇಶಕ್ಕೆ ಮಾರಕ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ನಡೆದ ಬಿಜೆಪಿ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ ಅಂಶಗಳ ಮೇಲೆ ಮೀಸಲಾತಿಯ ಅಗತ್ಯತೆಯನ್ನು ಅಂಬೇಡ್ಕರ್‌ ಪ್ರತಿಪಾದಿಸಿದ್ದರು. ಆದರೆ ಕಾಂಗ್ರೆಸ್ ಕೇವಲ ಮುಸ್ಲಿಂ ಸಮುದಾಯವನ್ನು ಮಾತ್ರ ಒಲೈಸುವ ಕಾರ್ಯ ಮಾಡುತ್ತಿದೆ. ಕಾಂಗ್ರೆಸ್ ಎಂದಿಗೂ ಕೂಡ ದಲಿತರ ಪರವಾಗಿಲ್ಲ ಎಂದು ದೂರಿದರು.

ಭಾರತವನ್ನು ವಿಶ್ವದ 5 ನೇ ಆರ್ಥಿಕ ಬಲಿಷ್ಠ ರಾಷ್ಟ್ರವನ್ನಾಗಿಸುವ ಗುರಿ ಹೊಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಎಲ್ಲರೂ ಶ್ರಮಿಸಬೇಕು ಎಂದರು. ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಸಂಸದ ಬಿ.ವಿ.ನಾಯಕ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

Latest Videos

undefined

ಪಾಕ್‌ ಜಿಂದಾಬಾದ್‌ ಅಂದ್ರೆ ಡಮ್‌ ಅನಿಸುವೆ: ನಾನು ಗೃಹ ಮಂತ್ರಿಯಾದರೆ, ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿಯಾದರೆ ಪೊಲೀಸರಿಗೆ ಪುಲ್ ಪವರ್ ಕೊಟ್ಟು, ಪಾಕಿಸ್ತಾನ ಜಿಂದಾಬಾದ್‌ ಅಂತ ಹೇಳುವುದಕ್ಕಿಂತ ಮೊದಲೇ ಡಮ್ ಎನ್ನಿಸುತ್ತೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಗುರುವಾರ ಬಿಜೆಪಿ ಬೃಹತ್ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಅಂಗಡಿಯಲ್ಲಿ ಹನುಮಾನ ಚಾಲೀಸ್ ಹಚ್ಚಿದರೆ, ಜೈ ಶ್ರೀರಾಮ ಕೂಗಿದವರ ಮೇಲೆ ಹಲ್ಲೆ ಮಾಡಲಾಗುತ್ತಿದೆ. 

ಕಾಂಗ್ರೆಸ್ ಪಂಚ ಗ್ಯಾರಂಟಿಗಳು ನಿರಂತರ, ಎಂದು ನಿಲ್ಲೋದಿಲ್ಲ: ಸಿಎಂ ಸಿದ್ದರಾಮಯ್ಯ

ಹೋಟೆಲ್‌ಗೆ ರಾಮೇಶ್ವರ ಹೆಸರಿಟ್ಟರೆ ಬಾಂಬ್ ಇಡುತ್ತಾರೆ. ಇದನ್ನು ಯೋಚಿಸಬೇಕು. ಕಾಂಗ್ರೆಸ್‌ಗೆ ವೋಟ್ ಹಾಕಿದರೇ ದೇಶದ ಪರಿಸ್ಥಿತಿ ಗಂಭೀರವಾಗುತ್ತದೆ ಎಂದರು. ತಾವು ವೋಟು ಹಾಕುತ್ತಿರುವುದು ಮೋದಿಗೆ ಮಾಡುತ್ತಿರುವ ಉಪಕಾರವಲ್ಲ. ಭಾರತ ಅಭಿವೃದ್ಧಿ, ಭದ್ರತೆಗೆ ತಮ್ಮ ಮತ ಹಾಕಬೇಕು. ಕಾಂಗ್ರೆಸ್‌ನವರು ಮೋದಿ ಬಟ್ಟೆ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರೊಬ್ಬ ಪ್ರಧಾನಿ ಎನ್ನುವುದು ಮರೆಯಬಾರದು. ಪ್ರಧಾನಿಯಾದವರು ರಾಹುಲ್ ರೀತಿ ಅರೆ ಹುಚ್ಚರಂತೆ ಬಟ್ಟೆ ಹಾಕೋಬೇಕಾ ಅಂತ ಪ್ರಶ್ನಿಸಿದರು.

click me!