ಪ್ರಚಾರದಲ್ಲಿ ಮೋದಿ ಫೋಟೋ ಬಳಕೆಗೆ ಕೋರ್ಟ್ ಮೊರೆ ಹೋದ ಈಶ್ವರಪ್ಪ, ಬಳಸುವ ಹಕ್ಕಿಲ್ಲ ಎಂದ ಅಶೋಕ್

By Suvarna NewsFirst Published Apr 6, 2024, 2:27 PM IST
Highlights

ರೆಬೆಲ್  ಈಶ್ವರಪ್ಪ ಅವರು ಮೋದಿ ಫೋಟೋ ಬಳಸಿಕೊಂಡು ಪ್ರಚಾರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ  ಆರ್ ಅಶೋಕ್ ಅವರು ಈಶ್ವರಪ್ಪ ಅವರು ಮೋದಿ ಫೋಟೋ ಬಳಕೆ ಮಾಡುವಂತಿಲ್ಲ ಎಂದಿದ್ದಾರೆ.

ಬೆಂಗಳೂರು (ಏ.6): ಶಿವಮೊಗ್ಗದಲ್ಲಿ ಮೋದಿ ಫೋಟೋ ಬಳಕೆ ವಿಚಾರದಲ್ಲಿ ಬಿಜೆಪಿ ಬಂಡಾಯ ನಾಯಕ ಈಶ್ವರಪ್ಪ ಮತ್ತು ರಾಘವೇಂದ್ರ ನಡುವೆ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಈಶ್ವರಪ್ಪ ಅವರು ಮೋದಿ ಫೋಟೋ ಬಳಕೆ ಮಾಡುವಂತಿಲ್ಲ ಎಂದಿದ್ದಾರೆ. ಇದು ತಪ್ಪು ಸರ್ಕಾರದ ಕಾರ್ಯಕ್ರಮ ಗಳಲ್ಲಿ ಪ್ರಧಾನಿ ಫೋಟೊ ಬಳಸಬಹುದು. ಆದರೆ ಚುನಾವಣೆ ವಿಚಾರದಲ್ಲಿ ಮೋದಿ ಫೋಟೋ ಬಳಕೆ ಮಾಡುವುದು ಪಕ್ಷದ ಅಭ್ಯರ್ಥಿ ಗೆ ಮಾತ್ರ ಅವಕಾಶವಿರುತ್ತದೆ. ಈ ಬಗ್ಗೆ ಪಕ್ಷ ಕ್ರಮ ತೆಗೆದು ಕೊಳ್ಳುತ್ತದೆ ಎಂದಿದ್ದಾರೆ.

ಕೋರ್ಟ್ ಮೊರೆ ಹೋದ ಈಶ್ವರಪ್ಪ: 
ಇನ್ನೊಂದೆಡೆ ಮೋದಿ ಭಾವಚಿತ್ರಕ್ಕಾಗಿ ಈಶ್ವರಪ್ಪ ಬಿಗ್ ಫೈಟ್ ಮಾಡುತ್ತಿದ್ದಾರೆ. ತಮ್ಮ ಚುನಾವಣೆಯಲ್ಲಿ ಮೋದಿ ಅವರ ಭಾವಚಿತ್ರವನ್ನು ಬಳಸಿಕೊಳ್ಳಲು ಕೋರ್ಟ್ ಮೊರೆ  ಹೋಗಿದ್ದಾರೆ. ನ್ಯಾಯಾಲಯದಲ್ಲಿ ಮೋದಿ ಭಾವಚಿತ್ರಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೆವಿಯಟ್ ಸಲ್ಲಿಸಿದ್ದಾರೆ. ಮೋದಿ  ಭಾವಚಿತ್ರವನ್ನು ಬಳಸುವುದನ್ನು ಕಾನೂನಾತ್ಮಕವಾಗಿ ತಡೆಯಲು ಪ್ರಯತ್ನಿಸದಂತೆ ಅದಕ್ಕೆ ಮುನ್ನೆಚ್ಚರಿಕೆಯಾಗಿ ಕೇವಿಯಟ್ ಸಲ್ಲಿಸಿದ್ದಾರೆ.

Lok Sabha Election 2024: ಒಂದು ಸಿದ್ದಾಂತಕ್ಕಾಗಿ ಪಕ್ಷದ ಆದೇಶ ಮೀರಿ ಸ್ಪರ್ಧಿಸುತ್ತಿದ್ದೇನೆ: ಈಶ್ವರಪ್ಪ

ನಾನು ಭಾರತದ ಪ್ರಧಾನಿಯ ಭಾವಚಿತ್ರವನ್ನು ಉಪಯೋಗಿಸುತ್ತಿದ್ದೇನೆ. ಭಾರತೀಯ ಸಂವಿಧಾನದಲ್ಲಿ ಎಲ್ಲಾ ಭಾರತೀಯರು ಹೆಮ್ಮೆಯ ಪ್ರಧಾನಿಯ ಭಾವಚಿತ್ರವನ್ನು ಬಳಸಿಕೊಳ್ಳಲು ಅವಕಾಶವಿದೆ. ಅದರ ವಿರುದ್ಧ ಯಾರಾದರೂ ದಾವೇ ಹೂಡಿದರೆ ತಡೆಯಲು ಮುಂಜಾಗ್ರತ ಕ್ರಮವಾಗಿ ನ್ಯಾಯಾಲಯದಲ್ಲಿ ಕೆವಿಯಟ್ ಸಲ್ಲಿಸಿ ತಂತ್ರಗಾರಿಕೆ ಮಾಡಿದ್ದಾರೆ. 

ಕೇವಿಯಟ್ ಅವಧಿ ಮೂರು ತಿಂಗಳಾಗಿದ್ದು ಅಷ್ಟರಲ್ಲಿ ಚುನಾವಣೆ ಮುಗಿದಿರುತ್ತದೆ. ಯಾರು ಕೂಡ ಇದರ ವಿರುದ್ಧ ಇಂಜೆಕ್ಷನ್ ಆರ್ಡರ್ ತರಲು ಬರುವುದಿಲ್ಲ ಎನ್ನುವುದು ಈಶ್ವರಪ್ಪನವರ ಲೆಕ್ಕಾಚಾರ. ಅಲ್ಲಿಗೆ ತಮ್ಮ ಚುನಾವಣೆಯಲ್ಲಿ ಮೋದಿ ಭಾವಚಿತ್ರ ಬಳಸಿಕೊಳ್ಳುವ  ಈಶ್ವರಪ್ಪನವರ ಇರಾದೆಗೆ ಯಾವುದೇ ಸಮಸ್ಯೆ ಇಲ್ಲ.

ದೆಹಲಿಯಿಂದ ಮತ್ತೆ ಕರೆ ಬಂದರೆ ಹೋಗುವೆ: ಕೆ.ಎಸ್.ಈಶ್ವರಪ್ಪ

ಸಂಸದ ಬಿ ವೈ ರಾಘವೇಂದ್ರ ವಿರುದ್ಧ ಬಂಡಾಯವೆದ್ದಿರುವ ನಾಯಕ  ಕೆ ಎಸ್ ಈಶ್ವರಪ್ಪನವರು ಮೋದಿ ಭಾವಚಿತ್ರ ಬಳಸಿ ಪ್ರಚಾರಕ್ಕೆ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಉತ್ತರ ಎಂಬಂತೆ ಈಶ್ವರಪ್ಪನವರು ಮೋದಿ ಭಾವಚಿತ್ರ ಯಾರು ಬೇಕಾದರೂ ಬಳಸಿ ಕೊಳ್ಳಬಹುದು. ಮೋದಿ ಏನು ಅವರಪ್ಪನ ಆಸ್ತಿನಾ?  ಎಂದು ತಿರುಗೇಟು ನೀಡಿದ್ದರು.

ಇದೀಗ ಈಶ್ವರಪ್ಪ ಶಿವಮೊಗ್ಗದ ಸಿವಿಲ್ ನ್ಯಾಯಾಲಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್ ರನ್ನು ಪ್ರತಿವಾದಿಯನ್ನಾಗಿಸಿ ಕೆವಿಯೆಟ್ ಹಾಕಿದ್ದಾರೆ. ಇದು ಮುಂದೆ ಬಿಜೆಪಿಗೆ ಯಾವ ರೀತಿಯ ಪೀಕಲಾಟ ತಂದೊಡ್ಡುತ್ತದೋ ಕಾದು ನೋಡಬೇಕು.

click me!