ಕೇಂದ್ರ ಸರ್ಕಾರದ ಯೋಜನೆಗಳ ಅರಿವು ಮೂಡಿಸಲು ರಥಯಾತ್ರೆ: ಸಂಸದ ಮುನಿಸ್ವಾಮಿ

By Kannadaprabha News  |  First Published Dec 10, 2023, 8:44 PM IST

ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರ ಬದಕು ಹಸನವಾಗಲು ಕೇಂದ್ರ ಸರ್ಕಾರದ ಮೂಲಕ ನೀಡಿರುವ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಯೋಜನೆಗಳನ್ನು ತಲುಪದಿರುವವರಿಗೆ ತಲುಪಿಸುವ ಕಾರ್ಯಕ್ರಮವೇ ವಿಕಸಿತ ಭಾರತ ಸಂಕಲ್ಪ ರಥ ಯಾತ್ರೆಯ ಉದ್ದೇಶ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. 


ಕೋಲಾರ (ಡಿ.10): ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರ ಬದಕು ಹಸನವಾಗಲು ಕೇಂದ್ರ ಸರ್ಕಾರದ ಮೂಲಕ ನೀಡಿರುವ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಯೋಜನೆಗಳನ್ನು ತಲುಪದಿರುವವರಿಗೆ ತಲುಪಿಸುವ ಕಾರ್ಯಕ್ರಮವೇ ವಿಕಸಿತ ಭಾರತ ಸಂಕಲ್ಪ ರಥ ಯಾತ್ರೆಯ ಉದ್ದೇಶ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ತಾಲೂಕಿನ ಹೋಳೂರು ಗ್ರಾಪಂ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಇಲಾಖೆಗಳು ಹಾಗೂ ಲೀಡ್ ಬ್ಯಾಂಕ್‌ಗಳು ಮತ್ತು ದಿಶಾ ಕಮಿಟಿಯಿಂದ ವಿಕಸಿತ ಭಾರತ ಸಂಕಲ್ಪ ರಥ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೋಂದ್ರದ ಯೋಜನೆಗಳು: ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಉಚಿತ ಕೊರೋನಾ ಲಸಿಕೆ, ಆಯುಷ್ಮಾನ್ ಆರೋಗ್ಯ ಕಾರ್ಡ್, ಗರೀಬ್ ಅನ್ನ ಭಾಗ್ಯ ಅಡಿಯಲ್ಲಿ ಪ್ರತಿಯೊಬ್ಬರಿಗೆ ೧೦ ಕೆ.ಜಿ ಅಕ್ಕಿ, ರಸ ಗೊಬ್ಬರಕ್ಕೆ ಸಬ್ಸಿಡಿ, ಕಿಸಾನ್ ಸನ್ಮಾನ್ ಯೋಜನೆ ಅಡಿಯಲ್ಲಿ ಪ್ರತಿ ರೈತರಿಗೆ ವರ್ಷಕ್ಕೆ ೬ ಸಾವಿರ, ಮಹಿಳೆಯರಿಗೆ ಶೇ.೩೩ ಮೀಸಲಾತಿ, ಭೇಟಿ ಪಡಾವೋ ಬೇಟಿ ಬಚಾವೋ, ಬಾಣಂತಿಯರಿಗೆ ಮಾತೃವಂದನಾ ಸ್ಕೀಂನಲ್ಲಿ ಪೌಷ್ಟಿಕ ಆಹಾರ, ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆಗಳ ಅಭಿವೃದ್ಧಿ, ಉಚಿತ ಶೌಚಾಲಯಗಳನ್ನು ನೀಡಿದೆ ಎಂದು ಹೇಳಿದರು.

Tap to resize

Latest Videos

ಚಾರಿತ್ರ್ಯಹರಣ ಶಾಸಕ ಯತ್ನಾಳ್‌ಗೆ ಶೋಭೆ ತರಲ್ಲ: ಸಚಿವ ಎಂ.ಬಿ.ಪಾಟೀಲ್‌

ಅಮೃತ್ ಯೋಜನೆ ಅಡಿಯಲ್ಲಿ ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ೩೨ ಕೋಟಿ ನೀಡಿರುವುದು, ಕುಶಲ ಕರ್ಮಿಗಳ ಅಭಿವೃದ್ಧಿಗೆ ವಿಶ್ವಕರ್ಮ ಯೋಜನೆ ಮೂಲಕ ತರಭೇತಿ ಸಾಲ ನೀಡುವ ಹಾಗೂ ಇನ್ನೂ ಹಲವಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರ ನೀಡಿರುವ ಬಗ್ಗೆ ವಿವರಿಸಿದರು.

ಪ್ರಧಾನಿ ಸಂವಾದ ಪ್ರಸಾರ: ವೇದಿಕೆಯಲ್ಲಿ ಅಳವಡಿಸಿದ್ದ ಬೃಹತ್ ಎಲ್.ಇ.ಡಿ. ಸ್ಕ್ರೀನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಫಲಾನುಭವಿಗಳೊಂದಿಗೆ ಚರ್ಚೆ ಮಾಡಿದನ್ನು ನೇರವಾಗಿ ಪ್ರಸಾರ ಮಾಡಲಾಯಿತು ಹಾಗೂ ಕಾರ್ಯಕ್ರಮದಲ್ಲಿ ಉಚಿತ ಗ್ಯಾಸ್ ಮತ್ತು ಅಯುಷ್ಮಾನ್ ಕಾರ್ಡ್‌ಗಳನ್ನು ಆಯ್ದ ಫಲಾನುಭವಿಗಳಿಗೆ ಸ್ಥಳದಲ್ಲೇ ವಿತರಣೆ ಮಾಡಿದರು.

ಮೈಯೆಲ್ಲಾ ಹಿಂದುತ್ವ ತುಂಬಿಕೊಂಡ ವ್ಯಕ್ತಿ ಶಾಸಕ ಯತ್ನಾಳ್‌: ಎಂ.ಪಿ.ರೇಣುಕಾಚಾರ್ಯ

ಮಾಜಿ ಶಾಸಕ ಸಂಪಂಗಿ, ಹೋಳೂರು ಗ್ರಾ.ಪಂ ಅಧ್ಯಕ್ಷೆ ಜಿ.ಅನಿತ, ನಿರ್ದೇಶಕ ಭುವನೇಶ್ವರ್ ಕುಮಾರ್, ಕೃಷಿ ಕೇಂದ್ರದ ಕಾರ್ಯದರ್ಶಿ ಕೆ.ಜಿ.ಮನೋಜ್ ಕುಮಾರ್, ವಿನೋದ್ ಕುಮಾರ್, ಅನಿಲ್ ಕುಮಾರ್, ಶಿವಶಂಕರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸುಧೀರ್, ಪ್ರವೀಣ್ ಕುಮಾರ್, ಡಾ.ನಾರಾಯಣ ಸ್ವಾಮಿ, ಡಾ.ಎ.ವಿ.ನಾರಾಯಣ ಸ್ವಾಮಿ, ಬಿ.ಜೆ.ಪಿ ಪಕ್ಷದ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮುಖಂಡರಾದ ಕೃಷ್ಣಮೂರ್ತಿ, ಸಿ.ಡಿ.ರಾಮಚಂದ್ರ ಗೌಡ, ಕೆಂಬೋಡಿ ನಾರಾಯಣ ಸ್ವಾಮಿ, ಎಸ್.ಬಿ.ಮುನಿವೆಂಕಟಪ್ಪ, ವಿಜಯಕುಮಾರ್, ಪಿ.ಡಿ.ಓ ನಾಗರಾಜ್ ಇದ್ದರು.

click me!