
ಬೆಂಗಳೂರು (ಅ.25): ರಾಜ್ಯದ ಉಸ್ತುವಾರಿ ಬದಲಾವಣೆ ಕುರಿತು ಹೈಕಮಾಂಡ್ ಶೀಘ್ರವೇ ಮಹತ್ವದ ನಿರ್ಣಯ ಕೈಗೊಳ್ಳಲಿದ್ದು, ಈ ಸ್ಥಾನದಲ್ಲಿರುವ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಬದಲಾವಣೆ ಮಾತುಗಳು ಕೇಳಿಬರುತ್ತಿವೆ.
ರಾಜ್ಯದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಉಸ್ತುವಾರಿ ವಹಿಸಿಕೊಂಡ ಸುರ್ಜೇವಾಲಾ ಅನಂತರ ಮುಂದೆ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಅವರು ಮುಖ್ಯಮಂತ್ರಿ ಆಗುವವರೆಗೂ ಸುರ್ಜೇವಾಲಾ ಹಿಡಿತ ಹೊಂದಿದ್ದರು. ಅಷ್ಟೇ ಅಲ್ಲದೆ ಕಾಂಗ್ರೆಸ್ ಜಯಭೇರಿ ಬಾರಿಸಿದಾಗ ದೆಹಲಿಯಲ್ಲಿ ನಡೆದ ಅಧಿಕಾರ ಹಂಚಿಕೆಯಲ್ಲೂ ಸುರ್ಜೇವಾಲಾ ಅವರ ಮಾತಿಗೆ ಮಹತ್ವ ನೀಡಲಾಗಿತ್ತು.
ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಸ್ತುತ ಸ್ಟಿಂಗ್ ಆಪರೇಷನ್ ನಂತಹ ಕೋಲಾಹಲ ರಾಜ್ಯಾದ್ಯಂತ ನಡೆಯುತ್ತಿದ್ದರೂ, ಹೈಕಮಾಂಡ್ ಮಟ್ಟಕ್ಕೆ ತಲುಪಿದ್ದರೂ ಈ ಬಗ್ಗೆ ಸುರ್ಜೇವಾಲಾ ಈವರೆಗೆ ಎಲ್ಲ ಮಾತನಾಡದೆ, ಮಾಧ್ಯಮಗಳಿಗೂ ಕಾಣಿಸಿಕೊಳ್ಳದೆ, ಅಟ್ಲಿಸ್ಟ್ ಈ ವಿಷಯ ಕುರಿತು ಹೈಕಮಾಂಡ್ ಮಟ್ಟದಲ್ಲಿ ಮಾತನಾಡದಿರುವುದರ ಹಿಂದೆ ಬದಲಾವಣೆಯ ವದಂತಿ ಕೇಳಿ ಬಂದಿದೆ.
ಒಂದು ವೇಳೆ ಸುರ್ಜೇವಾಲಾ ಬದಲಾದರೆ ಕೇರಳ ಮೂಲದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರಿಗೆ ರಾಜ್ಯ ಉಸ್ತುವಾರಿ ಹೊಣೆ ದೊರೆಯಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಹೈಕಮಾಂಡ್ ದೃಢಪಡಿಸಿಲ್ಲವಾದರೂ ರಾಜ್ಯ ರಾಜಕೀಯದಲ್ಲಿ ಮುಂದಿನ ಉಸ್ತುವಾರಿ ಆ ನಾಯಕನಿಗೆ ಸಿಗಲಿದೆ ಎಂಬ ಮಾತುಗಳು ಕೇಳಿಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.