ರಾಜ್ಯ ಕಾಂಗ್ರೆಸ್ ನಾಯಕರಿಗೆ ಭಜರಂಗದಳ ನಿಷೇಧ ಇಷ್ಟವಿರಲಿಲ್ಲ. ಯಾರಿಗೂ ಇಷ್ಟವಿಲ್ಲದ ವಿಚಾರ ಪ್ರಣಾಳಿಕೆಯಲ್ಲಿ ಹಾಕಲು ರಣದೀಪ್ ಸುರ್ಜೆವಾಲಾ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.
ಬೆಂಗಳೂರು (ಮೇ.3): ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ವಿಚಾರ ಕೈ ಪಾಳಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯ ಕಾಂಗ್ರೆಸ್ ನಾಯಕರಿಗೆ ಭಜರಂಗದಳ ನಿಷೇಧ ಇಷ್ಟವಿರಲಿಲ್ಲ. ಯಾರಿಗೂ ಇಷ್ಟವಿಲ್ಲದ ವಿಚಾರ ಪ್ರಣಾಳಿಕೆಯಲ್ಲಿ ಹಾಕಲು ರಣದೀಪ್ ಸುರ್ಜೆವಾಲಾ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾರಿಂದ ಭಜರಂಗದಳ ನಿಷೇಧ ವಿಷಯ ಹಾಕಿಸಲು ಒತ್ತಾಯ ಇತ್ತು. ಆದ್ರೆ ನಿಷೇಧ ವಿಚಾರ ಅಗತ್ಯ ಇಲ್ಲ ಎಂದು ಡಾ.ಜಿ.ಪರಮೇಶ್ವರ ಪ್ರತಿಪಾದಿಸಿದ್ದರು. ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮಾತಿಗೆ ಸುರ್ಜೇವಾಲಾ ಸಹಮತ ವ್ಯಕ್ತಪಡಿಸದ ಕಾರಣ ಅನಿವಾರ್ಯವಾಗಿ ಸಮಿತಿ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ವಿಚಾರ ಹಾಕಿತು ಎನ್ನಲಾಗಿದೆ
ಭಜರಂಗದಳ ನಿಷೇಧ ವಿಚಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ, ಖಾಸಗಿ ಹೊಟೇಲ್ ನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ತುರ್ತು ಸಭೆ ಕರೆದಿದ್ದು, ಡ್ಯಾಮೇಜ್ ಕಂಟ್ರೋಲ್ ಮಾಡುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಸಭೆಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸುನೀಲ್ ಕನಗೋಳ್, ಸುರ್ಜೇವಾಲಾ ಭಾಗಿಯಾಗಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ನಿನ್ನೆ ಬಿಡುಗಡೆಯಾದಾಗಿನಿಂದ ಮೂಲಕ ಭಜರಂಗದಳ ನಿಷೇಧ ವಿಚಾರ ಕೈ ಪಾಳಯದಲ್ಲಿ ಬೆಂಕಿ ಹೊತ್ತಿಸಿದೆ. ಸಭೆಯಲ್ಲಿ ಪ್ರಣಾಳಿಕೆಯಲ್ಲಿ ಹಾಕಿರುವ ವಿಷಯ ಹಿಂಪಡೆಯದೇ ಇರಲು ಕಾಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಈ ವಿವಾದವನ್ನು ಕೈಬಿಡದೇ ಇರಲು ತೀರ್ಮಾನಿಸಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಇನ್ನಷ್ಟು ಪರಿಣಾಮಕಾರಿಯಾಗಿ ಹೋರಾಟಕ್ಕೆ ಮುಂದಾಗಿದೆ. ಹನುಮಂತನಿಗೂ ಭಜರಂಗದಳಕ್ಕೂ ಸಂಬಂಧ ಇಲ್ಲ. ಹನುಮನೇ ಬೇರೆ - ಭಜರಂಗದಳವೇ ಬೇರೆ. ಎಂಬುದನ್ನ ತಿಳಿಸಲು ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ.
ಸಭೆಯ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ, ನಾವು ಆಂಜನೇಯ ಭಕ್ತರು. ಅವರು ಮಾತ್ರನಾ? ಶಾಂತಿ ತೋಟ ಕದಲಬಾರದು. ಸೌಹಾರ್ದತೆ ಇರಬೇಕು. ಭಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ ಯಾಕೆ ಅವರು ಗಾಬರಿ ಆಗ್ತಿದ್ದಾರೆ. ಆಂಜನೇಯ ಗೂ ಭಜರಂಗದಳ ಕ್ಕೂ ಏನ್ ಸಂಬಂಧ?
ಬಿಜೆಪಿಯವರು ಬಹಳ ಪ್ರವೋಕ್ ಮಾಡ್ತಿದ್ದಾರೆ. ಜನಕ್ಕೆ ಇದು ಅರ್ಥ ಅಗಿದೆ. ನಾವು ಹನುಮಂತ ಭಕ್ತರು. ನಾವು ಆಂಜನೇಯ ಪ್ರವೃತ್ತಿ ಬೆಳೆಸಿಕೊಂಡವರು. ಆಂಜನೇಯ ಬೇರೆ ಭಜರಂಗದಳ ಬೇರೆ. ಬಿಜೆಪಿ ಅವರು ಭಜರಂಗಿ ಅಂತ ಕ್ಯಾಂಪೇನ್ ಮಾಡೋದು ಬೇಡ. ಹೊಟ್ಟೆಗೆ ಏನ್ ಕೊಟ್ರಿ? ಉದ್ಯೋಗ ಏನ್ ಕೊಟ್ರಿ? ಹೇಳಿ.
ನಾಳೆ ಹನುಮ ಚಾಲಿಸ ಪಠಣೆ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ಹನುಮ ಚಾಲಿಸ್ ನಾವು ದಿನ ಪಠಣ ಮಾಡ್ತೀವಿ. ಅವರೊಬ್ಬರೇನಾ ಮಾಡೋದು? ಹಿಂದಿನ RSS ಬೇರೆ ಈಗಿನ RSS ಬೇರೆ. ನಮ್ಮ ಪ್ರಣಾಳಿಕೆಯಲ್ಲಿ ಬದಲಾವಣೆ ಇಲ್ಲ. ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತೀರಾ?
ಚುನಾವಣೆ ಬಂದಾಗ ಮಾತ್ರ ಮೋದಿ ಕರ್ನಾಟಕಕ್ಕೆ ಭೇಟಿ ಕೊಡ್ತಾರೆ: ರಾಹುಲ್ ಗಾಂಧಿ
ಹಿಂದಿನ RSS ಬೇರೆ ಈಗಿನ RSS ಬೇರೆ. ನಮ್ಮ ಪ್ರಣಾಳಿಕೆಯಲ್ಲಿ ಬದಲಾವಣೆ ಇಲ್ಲ. ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತೀರಾ? ಮೊದಲು ನೀವು ದೇಶ ಉಳಿಸಿ. ಆಯನೂರು ಮಂಜುನಾಥ್ ಏನ್ ಹೇಳಿದ್ರು? ಈಶ್ವರಪ್ಪಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಹೇಳಿ?
ಕಾಂಗ್ರೆಸ್ ವಿರುದ್ಧ ಆಕ್ರೋಶ, ಭಜರಂಗದಳದಿಂದ ಮೇ.4ರಂದು ರಾಜ್ಯಾದ್ಯಂತ ಹನುಮಾನ್
ನಮ್ಮ ಗ್ಯಾರಂಟಿ ಕಾರ್ಡ್ ಐತಿಹಾಸಿಕ. ನಮ್ಮ ಗ್ಯಾರಂಟಿ ನಾವು ಕೊಟ್ಟೇ ಕೊಡ್ತೀವಿ. ಬಿಜೆಪಿ ಅವರು ಒಂದೊಂದು ವಿಷಯ ತೆಗೆದುಕೊಂಡು ಹೀಗೆ ಮಾಡ್ತಿದ್ದಾರೆ. ಇದೆಲ್ಲ ವರ್ಕ್ ಆಗೊಲ್ಲ. ನಾನು ಹಿಂದು, ನಾನು ಆಂಜನೇಯ ಭಕ್ತ, ರಾಮನ ಭಕ್ತ. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮಗೆ 141ಸೀಟು ಬರೋದು ಪಕ್ಕಾ. 13 ಕ್ಕೆ ಫಲಿತಾಂಶ ಹೊರಗೆ ಬರುತ್ತೆ ಗೊತ್ತಾಗುತ್ತೆ ಎಂದು ಡಿಕೆಶಿ ಹೇಳಿದ್ದಾರೆ.