ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಇದೀಗ ಹೊರಬಿದ್ದಿದ್ದು ಸಾಕಷ್ಟು ಚರ್ಚೆಗೆ ಎಡೆಯಾಗಿದೆ. ಇದೇ ವೇಳೆ ರಮೇಶ್ ಸಿದ್ದು ಓರ್ವ ಒಳ್ಳೆ ಮನುಷ್ಯ ಎಂದು ಬಿಎಸ್‌ವೈ ಬಗ್ಗೆಯೇ ಅಸಮಾಧಾನಿತರಾಗಿದ್ದಾರೆ.
ಬೆಂಗಳೂರು (ಮಾ.03): ಯುವತಿಯೊಂದಿಗೆ ಖಾಸಗಿ ಕ್ಷಣ ಕಳೆಯುವ ವೇಳೆ ಸಚಿವ ರಮೇಶ್ ಜಾರಕಿಹೊಳಿ ಅವರು ರಾಜ್ಯ ರಾಜಕೀಯದ ಕುರಿತು ಕೆಲ ಹೇಳಿಕೆ ನೀಡಿರುವುದು ರಾಜಕೀಯವಾಗಿ ಗುಲ್ಲೆಬ್ಬಿಸಿದೆ.
ವಿಶೇಷವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಒಳ್ಳೆಯ ಮನುಷ್ಯ ಎನ್ನುವ ರಮೇಶ್ ಜಾರಕಿಹೊಳಿ ಅವರು ಅದೇ ಮಾತುಕತೆಯ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭ್ರಷ್ಟಎಂದು ಹೇಳುತ್ತಾರೆ. ಇನ್ನು, ತಾವು ಮುಖ್ಯಮಂತ್ರಿಯಾಗಬೇಕು ಎಂಬ ಬಯಕೆಯನ್ನು ರಮೇಶ್ ಜಾರಕಿಹೊಳಿ ವ್ಯಕ್ತಪಡಿಸುತ್ತಾರೆ.
ಉಪ ಮುಖ್ಯಮಂತ್ರಿ ಹುದ್ದೆಯಲ್ಲಿ ಏನೂ ಇಲ್ಲ, ಅದು ಕೇವಲ ಸ್ಟೇಟಸ್ ಅಷ್ಟೇ. ನಾನು ಮುಖ್ಯಮಂತ್ರಿಯಾಗಬೇಕು. ಅಲ್ಲಿಯವರೆಗೂ ನಿದ್ದೆ ಬರಲ್ಲ ಎಂದು ಸಚಿವರು ಹೇಳುತ್ತಾರೆ.
ಮೂರು ವಿಡಿಯೋ, ಇಬ್ಬರು ಯುವತಿಯರು; ರಾಸಲೀಲೆಯಲ್ಲಿ ಜಾರಿಬಿದ್ರಾ ಜಾರಕಿಹೊಳಿ? ..
ಇನ್ನು ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠರ ನಡುವಿನ ತಿಕ್ಕಾಟದ ಬಗ್ಗೆಯೂ ಪ್ರಸ್ತಾಪಿಸಿದ್ದು, ಕನ್ನಡಿಗರು ಹಾಗೂ ಮರಾಠರು ಇಬ್ಬರೂ ಸರಿಯಿಲ್ಲ ಎಂಬಂತಹ ಹೇಳಿಕೆಯನ್ನು ರಮೇಶ್ ಜಾರಕಿಹೊಳಿ ನೀಡಿದ್ದಾರೆ ಎನ್ನಲಾಗಿದೆ. ಬೆಳಗಾವಿಯಲ್ಲಿ ಕನ್ನಡಿಗರು, ಮರಾಠಿಗರು ನಡೆಸುವ ಜಗಳದ ಬಗ್ಗೆ ಯುವತಿಯ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವ ಅವರು, ಮರಾಠಿಗರು ಒಳ್ಳೆಯ ಜನ ಅಲ್ಲ, ಇನ್ನು ಈ ಕನ್ನಡಿಗರಿಗೆ ಬೇರೆ ಕೆಲಸ ಇಲ್ಲ ಎನ್ನುತ್ತಾ ಕನ್ನಡಿಗರು ಮತ್ತು ಮರಾಠಿಗರು ಇಬ್ಬರ ಬಗ್ಗೆಯೂ ಅವಹೇಳನಕಾರಿ ಪದ ಪ್ರಯೋಗಿಸಿರುವುದು ವಿಡಿಯೋದಲ್ಲಿದೆ ಎನ್ನಲಾಗಿದೆ.