ಹಿಂಬಾಗಿಲಿನಿಂದ ಸಿಎಂ ಭೇಟಿಯಾದ ಜಾರಕಿಹೊಳಿ: ಕಾರಣವೂ ಉಂಟು...!

Published : Feb 02, 2020, 07:37 PM ISTUpdated : Feb 02, 2020, 07:48 PM IST
ಹಿಂಬಾಗಿಲಿನಿಂದ ಸಿಎಂ ಭೇಟಿಯಾದ ಜಾರಕಿಹೊಳಿ: ಕಾರಣವೂ ಉಂಟು...!

ಸಾರಾಂಶ

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಉಳುವಿಗೆ ಪ್ರಮುಖ ಕಾರಣರಾಗಿರುವ ರಮೇಶ್ ಜಾರಕಿಹೊಳಿ ಅವರು ದಿಢೀರ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಅವರು ಹಿಂಬಾಗಿನಿಂದ ಮನೆ ಪ್ರವೇಶಿಸಿರುವುದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಅಷ್ಟಕ್ಕೂ ಸಾಹುಕಾರ ಸಿಎಂ ಭೇಟಿ ಮಾಡಿದ್ಯಾಕೆ..? ಈ ಕೆಳಗಿನಂತಿದೆ ಕಾರಣ

ಬೆಂಗಳೂರು, [ಫೆ.02]: ಸಂಪುಟ ವಿಸ್ತರಣೆಗೆ ಸಿಎಂ ಯಡಿಯೂಪ್ಪ ಮುಹೂರ್ತ ನಿಗದಿಪಡಿಸಿದ್ದಾರೆ.  ಇದೇ ಗುರುವಾರ [ಫೆ.6]ದಂದು ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ 13 ಶಾಸಕರು ಮಂತತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸ್ವತಃ ಬಿಎಸ್ ವೈ ಸ್ಪಷ್ಟಪಡಿಸಿದ್ದಾರೆ.

ಆದರೆ, ಯಾರೆಗೆಲ್ಲ ಸಚಿವ ಸ್ಥಾನ ಎನ್ನುವುದನ್ನು ಬಹಿರಂಗಪಡಿಸಿಲ್ಲ.ಇದರಿಂದ ಸಚಿವಾಕಾಂಕ್ಷಿಗಳ ಎದೆಬಡಿತ ಜೋರಾಗಿದ್ದು, ಒಬ್ಬೊಬ್ಬರಾಗಿಯೇ ಯಡಿಯೂರಪ್ಪ ಅವರನ್ನ ಭೇಟಿ ಮಾಡುತ್ತಿದ್ದಾರೆ.

10+3 ಅಡಿಯಲ್ಲಿ ಸಂಪುಟ ವಿಸ್ತರಣೆ: ಗೆದ್ದ ಓರ್ವ ಶಾಸಕನಿಗಿಲ್ಲ ಮಂತ್ರಿಗಿರಿ.!

ಅದರಲ್ಲೂ ನೂತನ ಶಾಸಕರ ನಾಯಕ ರಮೇಶ್ ಜಾರಕಿಗಹೊಳಿ ಖುದ್ದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಅದರಲ್ಲೂ ಹಿಂಬಾಗಿಲಿನಿಂದ ಭೇಟಿಯಾಗಿರುವುದು ಬಾರೀ ಕುತೂಹಲಕ್ಕೆ ಕಾರಣವಾಗಿದೆ.

ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾದ ಬಳಿಕ ರಮೇಶ್ ಜಾರಕಿಹೊಳಿ ಇದುವರೆಗೂ ಯಡಿಯೂರಪ್ಪನವರ ಮನೆ ಬಾಗಿಲು ತುಳಿದಿಲ್ಲ. ಕೇವಲ ಫೋನ್ ಗಳಲ್ಲೇ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧ ಚರ್ಚೆ ನಡೆಸುತ್ತಿದ್ದರು. ಆದ್ರೆ, ಇದೀಗ ದಿಢೀರನೇ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಹಿಂಬಾಗಿಲಿನಿಂದ ಕಾಲಿಟ್ಟಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಸಂಪುಟ ವಿಸ್ತರಣೆ ಫಿಕ್ಸ್ ಆಗುತ್ತಿದ್ದಂತೆಯೇ ಸಂಭವನೀಯ ಸಚಿವರಿಂದ ಖಾತೆಗಾಗಿ ಪೈಪೋಟಿ

ಬಿಜೆಪಿ ಶಾಸಕರಾಗಿ ಏಕೆ ಅವರು ಮುಂಬಾಗಿಲು ಬಿಟ್ಟು ಹಿಂಬಾಗಿಲಿನಿಂದ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ ಎನ್ನುವ ಚರ್ಚೆಗಳು ಬಿಜೆಪಿ ವಲಯದಲ್ಲಿ ನಡೆದಿವೆ.

ಯಾಕಾಗಿ ಭೇಟಿ ಮಾಡಿದ್ದು? 
11 ಶಾಸಕರಿಗೂ ಮಂತ್ರಿ ಮಾಡುವಂತೆ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಆದ್ರೆ, 10 ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪ ಈಗಾಗಲೇ ತೀರ್ಮಾನಿಸಿದ್ದಾರೆ. 

ಮಹೇಶ್ ಕುಮಟಳ್ಳಿಯನ್ನು ಸಂಪುಟದಿಂದ ಕೈಬಿಡಲಾಗುತ್ತಿದ್ದು ಅವರನ್ನು ಸಮಧಾನ ಮಾಡುವಂತೆ ಬಿಎಸ್ ವೈ, ರಮೇಶ್ ಜರಾಕಿಹೊಳಿಗೆ ಸಂದೇಶ ನೀಡಿದ್ದಾರೆ. ಆದ್ರೆ, ಇದಕ್ಕೆ ಒಪ್ಪದ ರಮೇಶ್ ಜಾರಕಿಹೊಳಿ ಅದು ಸಾಧ್ಯವೇ ಇಲ್ಲ. 11 ಶಾಸಕರಿಗಳಿಗೂ ಮಂತ್ರಿ ಸ್ಥಾನ ಕೊಡಬೇಕೆಂದು ಯಡಿಯೂರಪ್ಪಗೆ ಮರು ಸಂದೇಶ ಕೊಟ್ಟಿದ್ದಾರೆ.

ಇದರಿಂದ ಸಿಎಂ ಕೊಂಚ ಆತಂಕಕ್ಕೊಳಗಾಗಿದ್ದು, ಈ ಬಗ್ಗೆ ಚರ್ಚೆ ಮಾಡಲು ರಮೇಶ್ ಜಾರಕಿಹೊಳಿಗೆ ಧವಳಗಿರಿ ನಿವಾಸಕ್ಕೆ ಬರುವಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಅದರಂತೆ  ರಮೇಶ್ ಜಾರಕಿಹೊಳಿ ಯಾರ ಕಣ್ಣಿಗೂ ಬೀಳಬಾರದೆಂದು ಯಡಿಯೂರಪ್ಪನವರನ್ನ ಭೇಟಿ ಮಾಡಲು ಹಿಂಬಾಗಿನಿಂದ ತೆರಳಿದ್ದಾರೆ. ಆದ್ರೆ, ಇಬ್ಬರ ನಡುವೆ ಏನೆಲ್ಲಾ ಚರ್ಚೆಗಳು ನಡೆದವು ಎನ್ನುವುದು ಮಾತ್ರ ತಿಳಿದುಬಂದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೀಚ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಬಗ್ಗೆ ಚರ್ಚೆ: ಡಿ.ಕೆ.ಶಿವಕುಮಾರ್‌
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌