ರಮೇಶ ಜಾರಕಿಹೊಳಿ ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಒಂದು ಕ್ರಿಮಿನಲ್ ಮೊಕದ್ದಮೆ ಇದೆ ಎಂದು ಉಲ್ಲೇಖಿಸಿದ್ದಾರೆ. ವಿಶೇಷ ತನಿಖಾ ತಂಡವು ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿದೆ. ಆದರೆ ಎದುರಾಳಿಗಳು ಎಸ್‌ಐಟಿಯ ಸಂವಿಧಾನವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಬೆಳಗಾವಿ(ಏ.21): ಮಾಜಿ ಸಚಿವ ಹಾಗೂ ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಆಸ್ತಿ ಐದು ವರ್ಷಗಳಲ್ಲಿ 72.25 ಕೋಟಿ ಕುಸಿತಗೊಂಡಿದೆ. ನಿನ್ನೆ(ಗುರುವಾರ) ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
2018ರಲ್ಲಿ ಒಟ್ಟು 122 ಕೋಟಿ ಆಸ್ತಿ ಘೋಷಿಸಿಕೊಂಡಿದ್ದ ಶಾಸಕ ರಮೇಶ್ ಈ ಬಾರಿ 49.25 ಕೋಟಿ ಆಸ್ತಿ ಹೊಂದಿದ್ದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷ ಅಂದ್ರೆ ಆಸ್ತಿ ಇಳಿಕೆಗೆ ಕಾರಣವನ್ನು ರಮೇಶ್ ಜಾರಕಿಹೊಳಿ ಉಲ್ಲೇಖಿಸಿಲ್ಲ. ರಮೇಶ ಜಾರಕಿಹೊಳಿ 2018ರಲ್ಲಿ ತಮ್ಮ, ಪತ್ನಿ ಜಯಶ್ರೀ ಹಾಗೂ ಇಬ್ಬರು ಪುತ್ರರಾದ ಅಮರನಾಥ ಹಾಗೂ ಸಂತೋಷ ಅವರ ಆಸ್ತಿ ವಿವರ ನೀಡಿದ್ದರು. ಆದರೆ ಈ ಬಾರಿ ತಮ್ಮ, ಪತ್ನಿ ಹಾಗೂ ಒಬ್ಬ ಪುತ್ರನ ಆಸ್ತಿ ಮಾತ್ರ ಘೋಷಿಸಿದ್ದಾರೆ. ಇನ್ನೊಬ್ಬ ಪುತ್ರ ಸಂತೋಷ ಆಸ್ತಿ ವಿವರ ನೀಡಿಲ್ಲ. 2013ರ ಚುನಾವಣೆ ವೇಳೆ ಒಟ್ಟು 57 ಕೋಟಿ ಘೋಷಿಸಿದ್ದರು. ಸದ್ಯ ಘೋಷಿಸಿದ ಆಸ್ತಿ ಅದಕ್ಕಿಂತಲೂ ಕಡಿಮೆ ಆಗಿದೆ. ಪುತ್ರ ಸಂತೋಷ್ ಜಾರಕಿಹೊಳಿ, ಈಗ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಅಥಣಿಯಲ್ಲಿ ಸವದಿ VS ಕುಮಟಳ್ಳಿ: ಹೇಗಿದೆ ರಣಕಣ?
ರಮೇಶ ಜಾರಕಿಹೊಳಿ ಅಫಿಡವಿಟ್‌ನಲ್ಲಿ ತಮ್ಮ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಒಂದು ಕ್ರಿಮಿನಲ್ ಮೊಕದ್ದಮೆ ಇದೆ ಎಂದು ಉಲ್ಲೇಖಿಸಿದ್ದಾರೆ. ವಿಶೇಷ ತನಿಖಾ ತಂಡವು ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿದೆ. ಆದರೆ ಎದುರಾಳಿಗಳು ಎಸ್‌ಐಟಿಯ ಸಂವಿಧಾನವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.