ಮೈದಾನ ಖುಲ್ಲಾ ಹೈ.. ಎಂದು ಹಿರೋಯಿನ್‌ನಂತೆ ಸ್ಟೈಲ್‌ನಲ್ಲಿ ಕೈ ಬೆರಳು ತೋರಿಸಿ, ಈಗೇಕೆ ನಾಯಿಯಂತೆ ಒದ್ದಾಡುತ್ತಿದ್ದೀಯಾ ತಾಯಿ... ಮೈದಾನ ಖುಲ್ಲಾ ಇರುವುದರಿಂದಲೇ ನಾನು ಇಲ್ಲಿ ಬಂದಿರುವೆ. ಈಗೇಕೆ ಅಳುತ್ತಿದ್ದೀಯಾ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೇ ಹೆಬ್ಬಾಳಕರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.
ಬೆಳಗಾವಿ (ಮಾ.7) : ಮೈದಾನ ಖುಲ್ಲಾ ಹೈ.. ಎಂದು ಹಿರೋಯಿನ್‌ನಂತೆ ಸ್ಟೈಲ್‌ನಲ್ಲಿ ಕೈ ಬೆರಳು ತೋರಿಸಿ, ಈಗೇಕೆ ನಾಯಿಯಂತೆ ಒದ್ದಾಡುತ್ತಿದ್ದೀಯಾ ತಾಯಿ... ಮೈದಾನ ಖುಲ್ಲಾ ಇರುವುದರಿಂದಲೇ ನಾನು ಇಲ್ಲಿ ಬಂದಿರುವೆ. ಈಗೇಕೆ ಅಳುತ್ತಿದ್ದೀಯಾ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ(Ramesh Jarkiholi) ಅವರು ಶಾಸಕಿ ಲಕ್ಷ್ಮೇ ಹೆಬ್ಬಾಳಕರ(Lakshmi Hebbalkar) ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ಪಕ್ಷದ ಕರ್ತವ್ಯ. ಎಲ್ಲ ಹಂತಗಳಲ್ಲಿಯೂ ಹೋಗಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂದರು.
ಸಿಎಂಗೆ ಸೆಡ್ಡು ಹೊಡೆದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್: 2ನೇ ಸಲ ಶಿವಾಜಿ ಪ್ರತಿಮೆ ಉದ್ಘಾಟನೆ
ಸ್ವಯಂ ಘೋಷಿತ ನಾಯಕಿ ಅವರೇ. ನಾನಲ್ಲ. ರಾಜಹಂಸಗಡ(Rajahamsagadha)ದಲ್ಲಿ ಶಿವಾಜಿ ಪ್ರತಿಮೆ(Shivaji statue) ಲೋಕಾರ್ಪಣೆಗೆ ಸರ್ಕಾರಿ ಕಾರ್ಯಕ್ರಮ ನಡೆದಿದ್ದರೂ, ಮತ್ತೆ ಸ್ವಯಂ ಆಗಿ ಕಾರ್ಯಕ್ರಮ ಮಾಡಿದ್ದಾರಲ್ಲ ಅವರೇ ಸ್ವಯಂ ಘೋಷಿತ ನಾಯಕರು. ಆಕೆ ಹೆಣ್ಣು ಮಗಳು ಇರುವುದರಿಂದ ನಾನು ಬಹಳ ಜವಾಬ್ದಾರಿಯುತವಾಗಿ ಮಾತನಾಡಬೇಕಾಗುತ್ತದೆ. ನನ್ನ ವಿರುದ್ಧ ಅವರು ಹೇಳಿಕೆ ಕೊಟ್ಟಸ್ಥಳದಲ್ಲೇ ನಾನು ಉತ್ತರ ಕೊಡುತ್ತೇನೆ. ನನ್ನನ್ನು ಪ್ರಚೋದನೆ ಮಾಡುವಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿದರು.
ಎಂಎಲ್‌ಸಿ ಚುನಾವಣೆ(MLC Election) ವೇಳೆ ಮಹಾ ನಾಯಕ ಸಂಚು ಮಾಡಿ ಕ್ಷೇತ್ರದಲ್ಲಿ ವಾತಾವರಣ ಸೃಷ್ಟಿಮಾಡಿದ. ಆಗ ನಾವು ವಿಫಲರಾಗಿರಬಹುದು. ಆದರೆ, ಈಗ ನಮ್ಮ ರಾಜಕೀಯ ತಂತ್ರ ಈ ಬಾರಿ ವಿಫಲವಾಗದು ಎಂದರು.
ಸಂಜಯ ಪಾಟೀಲಗೆ ಬಿಜೆಪಿ ಸಿಗಲಿದೆ ಎಂದು ಹೇಳಿಕೆ ನೀಡಿದ್ದ ಸಚಿವ ಸಿ.ಸಿ.ಪಾಟೀಲ(CC Patil) ಅವರನ್ನು ನಾನು ಕಠೋರ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿದ್ದೇನೆ. ಸಂಜಯ ಪಾಟೀಲ ಅವರಿಗೆ ಇನ್ನೂ ಟಿಕೆಟ್ ಫೈನಲ್ ಆಗಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆಯೇ ಅವರನ್ನು ಗೆಲ್ಲಿಸಿ, ಆ ರಾಕ್ಷಸಿಯನ್ನು ಹೊಡೆದು ಹಾಕುತ್ತೇನೆ ಎಂದರು.
ಶಿವಾಜಿ ಪ್ರತಿಮೆ ಕ್ರೆಡಿಟ್ ಪಾಲಿಟಿಕ್ಸ್: ಮತ್ತೊಮ್ಮೆ ಪ್ರತಿಮೆ ಉದ್ಘಾಟಿಸಲು ಹೆಬ್ಬಾಳ್ಕರ್ ತಯಾರಿ
ಜಿಲ್ಲೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ನಿಮ್ಮನ್ನು ಕಡೆಗಣಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಂ.ಕೆ.ಹುಬ್ಬಳ್ಳಿಯಲ್ಲಿ ನಮ್ಮ ಅವಶ್ಯಕತೆ ಬೇಕಿರಲಿಲ್ಲವೇನೋ, ಹೀಗಾಗಿ ನಾನು ಅಲ್ಲಿಗೆ ಹೋಗಲಿಲ್ಲ. ಬಳಿಕ ಎಲ್ಲೆಡೆ ಹಾಜರಾಗಿದ್ದೇನೆ ಎಂದರು.