ಚುನಾವಣೆಯಲ್ಲಿ ಗೆದ್ದರೂ ನಲಪಾಡ್‌ಗೆ ಒಲಿಯಲಿಲ್ಲ ಅಧ್ಯಕ್ಷ ಪಟ್ಟ, ಬೇರೆಯವರ ಪಾಲಾದ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ.
ಬೆಂಗಳೂರು, (ಫೆ.04): ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮೊಹಮ್ಮದ್ ನಲಪಾಡ್ ಗೆದ್ದರೂ ಅಧ್ಯಕ್ಷ ಪಟ್ಟ ಕೈತಪ್ಪಿದೆ.
ಹೌದು.... ನಲ್ಪಾಡ್‌ಗಿಂತ ಕಡಿಮೆ ಮತ ಪಡೆದರೂ ರಕ್ಷ ರಾಮಯ್ಯ ಅವರು ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೇಸ್ ಇರುವುದರಿಂದ ನಲ್ಪಾಡ್ ಅವರನ್ನ ಎಐಸಿಸಿ ಅನರ್ಹ ಮಾಡಿದೆ.
ಮತ್ತೆ ವಿವಾದದಲ್ಲಿ ಸಿಲುಕಿದ ನಲಪಾಡ್!
ಇದರಿಂದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಹೆಚ್ಚು ಮತ ಪಡೆದಿದ್ದರೂ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಲ್ಪಾಡ್ ಗೆ ಒಲಿಯಲಿಲ್ಲ.. 57271 ಮತ ಪಡೆದ ರಕ್ಷ ರಾಮಯ್ಯ ಅಧ್ಯಕ್ಷರಾಗಿದ್ದಾರೆ.
ಶಾಂತಿನಗರ ಶಾಸಕ ಎನ್.ಎ.ಹಾರೀಸ್ ಅವರ ಪುತ್ರ ಮೊಹಮ್ಮದ್ ನಲ್ಲಪಾಡ್, ಎಂ.ಆರ್.ಸೀತಾರಾಮು ಅವರ ಪುತ್ರ ರಕ್ಷ ರಾಮಯ್ಯ, ಎನ್‍ಎಸ್‍ಯುಐನ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದ ಮಂಜುನಾಥ್ ಗೌಡ ಸೇರಿದಂತೆ ಅನೇಕರು ಕಣದಲ್ಲಿದ್ದರು.