ರಾಜ್ಯಸಭಾ ಉಪ ಚುನಾವಣೆ: ಕೇರಳದ ಕುರಿಯನ್ ಸೇರಿ ಬಿಜೆಪಿಯಿಂದ ಯಾರ್ಯಾರಿಗೆ ಟಿಕೆಟ್ : ಇಲ್ಲಿದೆ ಫುಲ್ ಲಿಸ್ಟ್

By Suvarna News  |  First Published Aug 20, 2024, 10:42 PM IST

ರಾಜ್ಯಸಭೆಯ ಖಾಲಿಯಾದ 12 ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ 9 ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಕೇರಳದ ಜಾರ್ಜ್ ಕುರಿಯನ್ ಸೇರಿದಂತೆ ಇಬ್ಬರು ಕೇಂದ್ರ ಸಚಿವರು ಮತ್ತು ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಂದ ಕಿರಣ್ ಚೌಧರಿ ಸೇರಿದ್ದಾರೆ.


ನವದೆಹಲಿ:  ರಾಜ್ಯಸಭೆಯಲ್ಲಿ ಖಾಲಿ ಇರುವ ಸ್ಥಾನಗಳಿಗೆ ಶೀಘ್ರದಲ್ಲೇ ಉಪ ಚುನಾವಣೆ ನಡೆಯಲ್ಲಿದ್ದು, 12 ಸ್ಥಾನಗಳಿಗೆ ನಡೆಯಲಿರುವ ಈ ಉಪಚುನಾವಣೆಗೆ ಬಿಜೆಪಿ ಇಂದು 9 ಅಭ್ಯರ್ಥಿಗಳನ್ನು ಘೋಷಿಸಿದೆ. ಇಬ್ಬರು ಕೇಂದ್ರ ಸಚಿವರು ಸೇರಿದಂತೆ ಕಾಂಗ್ರೆಸ್ ತೊರೆದು ಬಂದ ಕಿರಣ್ ಚೌಧರಿ ಕೂಡ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ. ಸೆಪ್ಟೆಂಬರ್ 3 ರಂದು ರಾಜ್ಯಸಭೆಗೆ ಉಪ ಚುನಾವಣೆ ನಡೆಯಲಿದೆ.

ಬಿಜೆಪಿ ಯಾರ‍್ಯಾರಿಗೆ ಟಿಕೆಟ್ ನೀಡಿದೆ ನೋಡಿ...

Tap to resize

Latest Videos

ಕೇಂದ್ರ ಸಚಿವ ರವಿನೀತ್ ಸಿಂಗ್ ಬಿಟ್ಟು ಅವರನ್ನು ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದೆ. ಲೋಕಸಭಾ ಚುನಾವಣೆಗೂ ಮುನ್ನ ಬಿಟ್ಟು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಲುಧಿಯಾನಾದಿಂದ ರವಿನೀತ್ ಬಿಟ್ಟು ಅವರನ್ನು ಬಿಜೆಪಿ  ಕಣಕ್ಕಿಳಿಸಿತ್ತು. ಆದರೆ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಬಿಟ್ಟು ಅವರನ್ನು ಸೋಲಿಸಿದ್ದರು. ಸೋತ ನಂತರವೂ ಅವರಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲಾಯಿತು. ಈಗ ಅವರನ್ನು ರಾಜಸ್ಥಾನ ಕೋಟಾದಿಂದ ರಾಜ್ಯಸಭೆಗೆ ಕಳುಹಿಸಲಾಗುತ್ತಿದೆ. ಬಿಟ್ಟು ಪ್ರಸ್ತುತ ಕೇಂದ್ರ ರೈಲ್ವೆ ಮತ್ತು ಆಹಾರ ಸಂಸ್ಕರಣೆ ಉದ್ಯಮ ಇಲಾಖೆಯ ರಾಜ್ಯ ಸಚಿವರಾಗಿದ್ದಾರೆ.

ರಾಜ್ಯಸಭೆಯಲ್ಲೂ ಬಹುಮತದತ್ತ ಎನ್‌ಡಿಎ; ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರ ಇನ್ನು ಸುಲಭ!

ಜಾರ್ಜ್ ಕುರಿಯನ್ ಕೂಡ ರಾಜ್ಯಸಭೆಗೆ

ಮೋದಿ ಸರ್ಕಾರದಲ್ಲಿ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಖಾತೆ ರಾಜ್ಯ ಸಚಿವರಾಗಿರುವ ಜಾರ್ಜ್ ಕುರಿಯನ್ ಅವರನ್ನು ಕೂಡ ರಾಜ್ಯಸಭೆಗೆ ಕಳುಹಿಸಲಾಗುತ್ತಿದೆ. ಕೇರಳ ಮೂಲದ ಜಾರ್ಜ್ ಕುರಿಯನ್ ಬಿಜೆಪಿಯ ಯುವ ಮೋರ್ಚಾದ ಮೂಲಕ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದ್ದರು. ಸುಮಾರು ನಾಲ್ಕು ದಶಕಗಳಿಂದ ಕೇರಳದಲ್ಲಿ ಬಿಜೆಪಿಗಾಗಿ ಸಕ್ರಿಯರಾಗಿರುವ ಕುರಿಯನ್ ಅವರನ್ನು ಈ ಬಾರಿ ಮೋದಿ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಲಾಗಿತ್ತು. ಅವರನ್ನು ಮಧ್ಯಪ್ರದೇಶ ಕೋಟಾದಿಂದ ರಾಜ್ಯಸಭೆಗೆ ಕಳುಹಿಸಲಾಗುತ್ತಿದೆ.

ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಕೂಡ ಬಿಜೆಪಿ ಅಭ್ಯರ್ಥಿ

ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರನ್ನು ಕೂಡ ರಾಜ್ಯಸಭೆಗೆ ಕಳುಹಿಸುವುದಾಗಿ ಬಿಜೆಪಿ ಘೋಷಿಸಿದೆ. ಮನನ್ ಮಿಶ್ರಾ ಅವರನ್ನು ಬಿಹಾರ ಕೋಟಾದಿಂದ ಕಳುಹಿಸಲಾಗುತ್ತಿದೆ.

ಹರಿಯಾಣ ಕಾಂಗ್ರೆಸ್‌ನ ಹಿರಿಯ ನಾಯಕಿ ಕಿರಣ್ ಚೌಧರಿ

ಹರಿಯಾಣ ಕಾಂಗ್ರೆಸ್‌ನ ಹಿರಿಯ ನಾಯಕಿ ಕಿರಣ್ ಚೌಧರಿ ಅವರನ್ನು ಬಿಜೆಪಿ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಮಾಡಿದೆ. ಕಿರಣ್ ಚೌಧರಿ ತಮ್ಮ ಮಗಳೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಅವರು  ರೋಹ್ತಕ್‌ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿರುವುದರಿಂದ ಅವರ ಸ್ಥಾನ ತೆರವಾಗಿದ್ದು, ಈ  ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಕಿರಣ್ ಚೌಧರಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ.

ಮಹಾರಾಷ್ಟ್ರದಿಂದ ಧೈರ್ಯಶೀಲ್, ಒಡಿಶಾದಿಂದ ಮಮತಾ ಮೊಹಾಂತ, ತ್ರಿಪುರಾದಿಂದ ರಾಜೀಬ್

ಹಾಗೆಯೇ ಬಿಜೆಪಿ ಮಹಾರಾಷ್ಟ್ರ ಕೋಟಾದಿಂದ ಬಿಜೆಪಿ ನಾಯಕ ಧೈರ್ಯಶೀಲ್ ಪಾಟೀಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಒಡಿಶಾದಿಂದ ಮಮತಾ ಮೊಹಾಂತ ರಾಜ್ಯಸಭೆಗೆ ತೆರಳಲಿದ್ದಾರೆ. ತ್ರಿಪುರಾದಿಂದ ಬಿಜೆಪಿ ರಾಜೀಬ್ ಭಟ್ಟಾಚಾರ್ಯ ಅವರನ್ನು ಕಣಕ್ಕಿಳಿಸಿದೆ.

ಕಿರಿಕ್‌ ಮಾಡಿದ ಜಯಾ ಬಚ್ಚನ್‌ಗೆ ರಾಜ್ಯಸಭಾಧ್ಯಕ್ಷರ ಸಖತ್ ಕ್ಲಾಸ್‌: ಧನಕರ್‌ ಪಾಠಕ್ಕೆ ನೆಟ್ಟಿಗರ ಶಹಭಾಷ್‌

click me!