ಜನಾರ್ಧನರೆಡ್ಡಿ ಪಕ್ಷದ ಪರ ಪ್ರಚಾರ: ಪುರಸಭೆಯ ನಾಲ್ವರು ಸದಸ್ಯರನ್ನು ಅನರ್ಹಗೊಳಿಸಿದ ಜಿಲ್ಲಾಧಿಕಾರಿ

By Sathish Kumar KH  |  First Published Sep 5, 2023, 11:14 AM IST

ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಕೆಆರ್‌ಪಿ ಪಕ್ಷದ ಪರವಾಗಿ ಪ್ರಚಾರ ಮಾಡಿದ ನಾಲ್ವರು ಪುರಸಭೆ ಸದಸ್ಯರನ್ನು ಅಮಾನತುಗೊಳಿಸಲಾಗಿದೆ.


ರಾಯಚೂರು (ಸೆ.05): ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಶಾಸಕ ಜನಾರ್ಧನರೆಡ್ಡಿ ಅವರು ಸ್ಥಾಪಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್‌ಪಿಪಿ) ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ ಲಿಂಗಸೂರು ಪುರಸಭೆಯ ನಾಲ್ವರು ಸದಸ್ಯರನ್ನು ರಾಯಚೂರು ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ನಾಲ್ವರನ್ನು ಪುರಸಭೆ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ. ನಾಲ್ಕು ಜನ ಸದಸ್ಯರನ್ನ ಅನರ್ಹಗೊಳಿಸಿ ಜಿಲ್ಲಾಧಿಕಾರಿಯಿಂದ ಆದೇಶ ಹೊರಡಿಸಿದ್ದಾರೆ. ಪ್ರಮೋದ್ ಕುಲಕರ್ಣಿ‌ ಸೇರಿ ಮೂವರು ಸದಸ್ಯತ್ವ ಅನರ್ಹಗೊಂಡಿದ್ದಾರೆ. ಒಟ್ಟಾರೆ, ಪ್ರಮೋದ್‌ ಕುಲಕರ್ಣಿ, ಫಾತಿಮಾ ಬೇಗಂ, ಮೌಲಾಸಾಬ್ ಹಾಗೂ ಶರಣಪ್ಪ, ಅನರ್ಹಗೊಂಡ ನಾಲ್ವರು ಸದಸ್ಯರು ಆಗಿದ್ದಾರೆ. ಈ ನಾಲ್ವರು ಕಾಂಗ್ರೆಸ್ ಪಕ್ಷದಿಂದ‌ ಆಯ್ಕೆಯಾಗಿ ಜನಾರ್ಧನರೆಡ್ಡಿ ಸ್ಥಾಪಿಸಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿ) ಪರವಾಗಿ ಪ್ರಚಾರ ಮಾಡಿದ್ದಾರೆ ಎಂಬ ದೂರನ್ನು ನೀಡಲಾಗಿತ್ತು.

Latest Videos

undefined

ಪ್ರಜ್ವಲ್‌ ಬಳಿಕ ಈಗ ರೇವಣ್ಣ ವಿರುದ್ಧವೂ ಅನರ್ಹತೆ ಅರ್ಜಿ: ಸಮನ್ಸ್‌ ಜಾರಿಗೆ ಆದೇಶ

ಪಕ್ಷ ವಿರೋಧಿ ಚಟುವಟಿಕೆ: ಕರ್ನಾಟಕ ವಿಧಾನಸಭೆಯ 2023ರ ಚುನಾವಣೆಯಲ್ಲಿ ಕೆ.ಆರ್.ಪಿ ಪಕ್ಷದ ರಾಯಚೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರ‌ ಪ್ರಚಾರ ಮಾಡಿದ್ದಾರೆ ಎಂಬುದಾಗಿ ದೂರು ನೀಡಲಾಗಿತ್ತು. ಈ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್ ಎಂಬುವವರು ರಾಯಚೂರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ನಾಲ್ವರ ಪುರಸಭೆ ಸದಸ್ಯತ್ವ ಸ್ಥಾನವನ್ನು ಅನರ್ಹಗೊಳಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದರು. ಈ ಪ್ರಕರಣ ವಿಚಾರಣೆ ಮಾಡಿದ ನ್ಯಾಯಾಲಯ ನಾಲ್ವರ ಪುರಸಭೆ ಸದಸ್ಯತ್ವವನ್ನು ಅಮಾನತು ಮಾಡಿ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಅವರು ನಾಲ್ವರು ಪುರಸಭೆ ಸದಸ್ಯರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

click me!