'ಶಿವ ಮೂರನೇ ಕಣ್ಣುಬಿಟ್ಟರೆ ಸುಟ್ಟು ಬೂದಿಯಾಗುತ್ತಾನೆ..' ರಾಹುಲ್ ಗಾಂಧಿ ವಿರುದ್ಧ ಶಾಸಕ ಭರತ್ ಶೆಟ್ಟಿ ಏಕವಚನದಲ್ಲಿ ವಾಗ್ದಾಳಿ

By Ravi Janekal  |  First Published Jul 8, 2024, 4:28 PM IST

'ಪಾರ್ಲಿಮೆಂಟ್ ಒಳಗೆ ಹೋಗಿ ರಾಹುಲ್ ಗಾಂಧಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ' ಎಂದು ಶಾಸಕ ಡಾ ವೈ ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ


ಮಂಗಳೂರು (ಜು.8): 'ಪಾರ್ಲಿಮೆಂಟ್ ಒಳಗೆ ಹೋಗಿ ರಾಹುಲ್ ಗಾಂಧಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ' ಎಂದು ಶಾಸಕ ಡಾ ವೈ ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ, ಅವನು ಹಿಂದೂ ವಿರೋಧಿ ನೀತಿಯನ್ನ ಅನುಸರಿಸುತ್ತಿದ್ದಾನೆ. ನಾವು ಅವನಿಗೆ ಯಾವ ಶಬ್ದ ಪ್ರಯೋಗಿಸಬಹುದು ಅಂತಾ ನೋಡಿ. ಅವನ ಹೇಳಿಕೆಗಳನ್ನ ಗಮಿಸಿದರೆ ಅವನೊಬ್ಬ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

Tap to resize

Latest Videos

 ಹಿಂದೂಗಳನ್ನು ಹಿಂಸಾವಾದಿಗಳೆನ್ನುತ್ತಾನೆ. ಶಿವನ ಫೋಟೊ ಬೇರೆ ಹಿಡಿದು ನಿಂತಿದ್ದ. ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾನೆ ಅಂತಾ ಈ ಹುಚ್ಚನಿಗೆ ಗೊತ್ತಿಲ್ಲ ಹಿಂದೂಗಳ ಬಗ್ಗೆ ಏನೂ ಮಾತಾಡಿದರೂ ಸುಮ್ಮನಿರ್ತಾರೆ ಅನ್ನೋ ಭಾವನೆ ರಾಹುಲ್ ಗಾಂಧಿಗೆ ಬಂದಿರಬಹುದು. ಅವನು ಪಾರ್ಲಿಮೆಂಟ್‌ನಲ್ಲಿ ಬೊಗಳುವ ಸಂದರ್ಭ ಇಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕರು ಬಾಲ ಬಿಚ್ಚಲು ಶುರು ಮಾಡಿದ್ದಾರೆ ಎಂದು ಕಿಡಿಕಾರಿದರು.

ರಸ್ತೆ ಅಪಘಾತಕ್ಕೆ 13 ಜನ ದುರ್ಮರಣ ಪ್ರಕರಣ: ಎಮ್ಮೆಹಟ್ಟಿ ಗ್ರಾಮಕ್ಕೆ ಗೀತಾ ಶಿವರಾಜ್ ಕುಮಾರ ಭೇಟಿ

ಪೇಜಾವರ ಸ್ವಾಮೀಜಿ ಹೇಳಿಕೆಯನ್ನು ವಿರೋಧಿಸಿ ಸ್ಥಳೀಯ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಹಿಂದೂ ಮತ್ತು ಹಿಂದುತ್ವ ಬೇರೆ ಬೇರೆ ಎಂಬ ಥಿಯರಿ ಹೇಳೋದಕ್ಕೆ ಹೊರಟಿದ್ದಾರೆ. 99 ಸೀಟು ಹಿಡಿದುಕೊಂಡು ಏನೋ ಸಾಧನೆ ಮಾಡಿದವನ ಹಾಗೆ ಮಾತಾಡುತ್ತಿದ್ದಾನೆ. ಶಿವಾಜಿ, ರಾಣಾ ಪ್ರತಾಪ್ ನಮ್ಮ ಸಮಾಜದಲ್ಲೇ ಹುಟ್ಟಿದವರು, ಎಲ್ಲಿ ಶಸ್ತ್ರ ತೆಗಿಬೇಕೋ ಅಲ್ಲಿ ತೆಗೀತೇವೆ. ಶಸ್ತ್ರ ಪೂಜೆ ಮಾಡಿ ಉತ್ತರ ಕೊಡೋದಕ್ಕೂ ನಮಗೆ ಗೊತ್ತಿದೆ. ಅವನು ಕೇರಳಕ್ಕೆ ಬಂದಾಗ ಸೆಕ್ಯುಲರ್,ತಮಿಳುನಾಡಿಗೆ ಹೋದಾಗ ನಾಸ್ತಿಕ ಆಗ್ತಾನೆ, ಗುಜರಾತ್ ಭಾಗಕ್ಕೆ ಹೋದಾಗ ಶಿವಭಕ್ತನಾಗುತ್ತಾನೆ. ಅಂತಹ ದೊಡ್ಡ ಹುಚ್ಚ ರಾಹುಲ್ ಗಾಂಧಿ ಎಂದು ಲೇವಡಿ ಮಾಡಿದರು.

ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಪ್ರತಿಕೃತಿದಹಿಸುವ ನಿರ್ಧಾರ ಮಾಡಿದ್ದೆವು. ಆದರೆ ಪೊಲೀಸರು ಬೇಡ ಎಂದು ಹೇಳಿದ್ದಾರೆ. ಆ ರೀತಿ ಮಾಡಿದ್ರೆ ನಮ್ಮ ವರ್ಗಾವಣೆ ಆಗುತ್ತೆ ಎಂದು ಪೊಲೀಸರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸರು ಸಹ ನಮ್ಮ ಜೊತೆ ಪ್ರತಿಭಟನೆಗೆ ಬರಬಹುದು ಎಂದರು. 

ಕಮದಾಳ ಗ್ರಾಮದಲಿ ಚಿರತೆ ಹತ್ಯೆ ಪ್ರಕರಣ; ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

ಶ್ವಾನ ನೋಡಿ ರಾಹುಲ್ ಗಾಂಧಿ ಎಂದ ಪ್ರತಿಭಟನಾಕಾರರು

ಪ್ರತಿಭಟನೆ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಶ್ವಾನ ಬಂದಿದೆ. ಈ ವೇಳೆ ಪ್ರತಿಭಟನಾನಿರತರು ಶ್ವಾನವನ್ನು ಕಂಡು ರಾಹುಲ್ ಗಾಂಧಿ ರಾಹುಲ್ ಗಾಂಧಿ ಕೂಗಿ ವ್ಯಂಗ್ಯ ಮಾಡಿದ್ದಾರೆ. ರಾಹುಲ್ ಗಾಂಧಿಯನ್ನು ಶ್ವಾನಕ್ಕೆ ಹೋಲಿಸಿ ವ್ಯಂಗ್ಯ

click me!