ಚಕ್ರವಿದ್ದರೂ ನಾಟಕ ಮಾಡಿದ್ದೇಕೆ? ಸೂಟ್‌ಕೇಸ್ ಹೊತ್ತು ಕೂಲಿಯಾದ ರಾಹುಲ್ ಗಾಂಧಿ ಟ್ರೋಲ್!

By Suvarna News  |  First Published Sep 21, 2023, 1:09 PM IST

ರಾಹುಲ್ ಗಾಂಧಿ ರೈಲು ನಿಲ್ದಾಣಕ್ಕೆ ತೆರಲಿ ಕೂಲಿ ಕಾರ್ಮಿಕರಂತೆ ಕೆಲಸ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಹಮಾಲಿ ಕಾರ್ಮಿಕರಂತೆ ಕೆಂಪು ಉಡುಪು ಧರಿಸಿ ಸೂಟ್‌ಕೇಸ್ ಹೊತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಟ್ರೋಲ್ ಆಗಿದ್ದಾರೆ. ಸೂಟ್‌ಕೇಸ್‌ಗೆ ಚಕ್ರಗಳಿವೆ. ಎಳೆದುಕೊಂಡೇ ಹೊಗಬಹುದಲ್ವಾ ಎಂಬ ಪ್ರಶ್ನೆ ಟ್ರೆಂಡ್ ಆಗುತ್ತಿದೆ.


ನವದೆಹಲಿ(ಸೆ.21)ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಭಿನ್ನ ಪ್ರಯತ್ನಗಳ ಮೂಲಕ ಜನರ ಮನಸ್ಸು ಗೆಲ್ಲುವ ಕಸರತ್ತು ಮಾಡುತ್ತಿದ್ದಾರೆ. ಟ್ರಕ್ ಚಾಲಕರ ಜೊತೆ ತೆರಳಿ ಅವರ ಸಮಸ್ಯೆಗಳ ಆಲಿಸುವುದು, ಡೆಲಿವರಿ ಬಾಯ್‌ಗಳ ಜೊತೆ ಚರ್ಚೆ ಸೇರಿದಂತೆ ಹಲವು ಪ್ರಯತ್ನ ಮಾಡಿದ್ದಾರೆ. ಇದೀಗ ರೈಲು ನಿಲ್ದಾಣದಲ್ಲಿ ಕೆಲಸ ಮಾಡವು ಹಮಾಲಿ ಕಾರ್ಮಿಕರ ಬಳಿ ತೆರಳಿ ಅವರಂತೆ ಉಡುಪು ಧರಿಸಿ ಸೂಟ್ ಕೇಸ್ ಹೊತ್ತಿದ್ದಾರೆ. ಕೆಂಪು ಉಡುಪು ಧರಿಸಿ ಸೂಟ್ ಹೊತ್ತು ಸಾಗಿದ ಫೋಟೋ, ವಿಡಿಯೋ ಭಾರಿ ವೈರಲ್ ಆಗಿದೆ. ಆದರೆ ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಟ್ರೋಲ್ ಆಗಿದ್ದಾರೆ. ಚಕ್ರವಿರುವ ಸೂಟ್‌ಕೇಸ್ ಹೊತ್ತಿರುವುದೇಕೆ? ಎಳೆದುಕೊಂಡು ಸಾಗಬಹುದಿತ್ತಲ್ಲಾ ಅನ್ನೋ ಪ್ರಶ್ನೆಗಳನ್ನು ಕೇಳಿದ್ದಾರೆ.

ದೆಹಲಿ ಆನಂದ್ ವಿಹಾರ್ ರೈಲು ನಿಲ್ದಾಣಕ್ಕೆ ತೆರಳಿದ ರಾಹುಲ್ ಗಾಂಧಿ ಹಮಾಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವ  ಪ್ರಯತ್ನ ಮಾಡಿದರು. ಈ ವೇಳೆ ಕೆಂಪು ಉಡುಪು ಹಾಗೂ ಕಾರ್ಮಿಕರ ಬ್ಯಾಡ್ಜ್ ಧರಿಸಿ ಸಾಂಕೇತಿಕವಾಗಿ ಸೂಟ್‌ಕೇಸ್ ಹೊತ್ತು ಸಾಗಿದ್ದಾರೆ. ಈ ವಿಡಿಯೋ, ಫೋಟೋ ವೈರಲ್ ಆಗಿದೆ. ರಾಹುಲ್ ಗಾಂಧಿ ಜನಸಾಮಾನ್ಯರ ಬಳಿ ತೆರಳಿ ಅವರ ಪರಿಸ್ಥಿತಿ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಬಿಜೆಪಿ ಉದ್ಯಮಿಗಳ ಜೊತೆ ಮಾತ್ರ ಮಾತನಾಡುತ್ತದೆ. ಅವರ ಸಮಸ್ಯೆಗಳಿಗೆ ಮಾತ್ರ ಪರಿಹಾರ ನೀಡುತ್ತದೆ ಎಂದು ಕಾಂಗ್ರೆಸ್ ಬೆಂಬಲಿಗರು, ಕೇಂದ್ರ ಸರ್ಕಾರವನ್ನು ವ್ಯಂಗ್ಯವಾಡಿತ್ತು.

Tap to resize

Latest Videos

ವಿಧಾನಸಭೆ, ಲೋಕಸಭೆ ಚುನಾವಣೆ ಗೆಲ್ಲಲು ಕೈ ರಣತಂತ್ರ; ಇಂದು ಕಾರ್ಯಕಾರಿ ಸಭೆ: 2ನೇ ಭಾರತ್ ಜೋಡೋ ಯಾತ್ರೆಗೆ ರಾಹುಲ್‌ ಸಿದ್ಧ!

ಇದರ ಬೆನ್ನಲ್ಲೇ ಬಿಜೆಪಿ ತಿರುಗೇಟು ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಸೂಟ್‌ಕೇಸ್ ಹೊತ್ತ ಫೋಟೋಗಳು ವೈರಲ್ ಆಗುತ್ತಿದೆ. ಇದೇ ವೇಳೆ ಹಲವರು ಸೂಟ್‌ಕೇಸ್‌ನಲ್ಲಿ ಚಕ್ರವಿದೆ. ಆದರೂ ಹೊತ್ತು ಯಾಕೆ ನಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ನೈಜತೆ ಇಲ್ಲ, ಇದು ಕೇವಲ ನಾಟಕ ಎಂದು ಹಲವರು ಕಮೆಂಟ್ ಮಾಡಿದ್ದಾರೆ.ಹೋರಾಟ, ಕಾರ್ಯಕ್ರಮದಲ್ಲಿ ಭಿನ್ನತೆಗಿಂತ ನೈಜತೆ ಇರಲಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.  ಇದೇ ಟ್ರೋಲ್‌ಗಳನ್ನು ಹಿಡಿದು ಬಿಜೆಪಿ ಮತ್ತೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.

 

Only someone as dumb as Rahul Gandhi would carry a suitcase on head when it has wheels… 🤦‍♂️

It is obvious he hasn’t been to a railway station off late… Several of them now have escalators or ramps for convenience of passengers and porters. All this is nothing but theatrics. pic.twitter.com/UVp7oyaGTG

— Amit Malviya (@amitmalviya)

 

ರೈಲು ನಿಲ್ದಾಣ ಕಾರ್ಮಿಕರು ಬೇಡಿಕೆಯಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕಾರ್ಮಿಕರನ್ನು ಭೇಟಿಯಾಗಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಕೆಲಸದ ವೇಳೆ ಎದುರಾಗುವ ಸವಾಲುಗಳ ಕುರಿತು ಮಾಹಿತಿ ಪಡೆದಿದ್ದಾರೆ. ಖುದ್ದು ರಾಹುಲ್ ಗಾಂಧಿ ಸೂಟ್‌ಕೇಸ್ ಹೊತ್ತು ಕಾರ್ಮಿಕರನ್ನು ಹುರಿದುಂಬಿಸಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಹೇಳಿದೆ.

ಹಿಂದುತ್ವಕ್ಕೂ ಬಿಜೆಪಿಗೂ ಸಂಬಂಧವಿಲ್ಲ, ಪ್ಯಾರಿಸ್‌ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ರಾಹುಲ್ ಗಾಂಧಿ ನಡೆಯನ್ನು ಕಾಂಗ್ರೆಸ್ ಕೊಂಡಾಡಿದ್ದರೆ, ಬಿಜೆಪಿ ಟೀಕಿಸಿದೆ. ರಾಜಕೀಯ ವಾಕ್ಸಮರ, ಟ್ರೋಲ್ ಹೆಚ್ಚಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಪ್ರತಿ ಅವಕಾಶವನ್ನು ಬಳಸಿಕೊಳ್ಳುತ್ತಿದೆ. 

 

That suitcase has wheels, , you don't need to carry it over your head!!!
😂🤣😂🤣😂🤣😂 pic.twitter.com/u97KpJ7ojN

— Priti Gandhi - प्रीति गांधी (@MrsGandhi)

 

click me!