ಕರ್ನಾಟಕದಲ್ಲಿ 27 ದಿನ ರಾಹುಲ್‌ ಭಾರತ್‌ ಜೋಡೋ ಯಾತ್ರೆ

Published : Jul 08, 2022, 05:00 AM IST
ಕರ್ನಾಟಕದಲ್ಲಿ 27 ದಿನ ರಾಹುಲ್‌ ಭಾರತ್‌ ಜೋಡೋ ಯಾತ್ರೆ

ಸಾರಾಂಶ

*   ತಮಿಳ್ನಾಡು/ತೆಲಂಗಾಣ ಮೂಲಕ ಪ್ರವೇಶ? *   ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ‘ಭಾರತ್‌ ಜೋಡೋ ಯಾತ್ರೆ’ *   ಯಾವ ಮಾರ್ಗದ ಮೂಲಕ ಪ್ರವೇಶಿಸಬೇಕು ಎಂಬ ಬಗ್ಗೆ ರಾಜ್ಯ ಕಾಂಗ್ರೆಸ್‌ ನಾಯಕರ ಚರ್ಚೆ 

ಬೆಂಗಳೂರು(ಜು.08): ದೇಶದಲ್ಲಿ ಕಾಂಗ್ರೆಸ್‌ಗೆ ಮರು ಚೈತನ್ಯ ತರುವ ದೃಷ್ಟಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಡೆಯಲಿರುವ ‘ಭಾರತ್‌ ಜೋಡೋ ಯಾತ್ರೆ’ಯು ಕರ್ನಾಟಕದಲ್ಲಿ ಬರೋಬ್ಬರಿ 27 ದಿನಗಳ ಕಾಲ ನಡೆಯಲಿದೆ.

ಈ ಯಾತ್ರೆ ಕೇರಳ, ತಮಿಳುನಾಡು ಮತ್ತು ತೆಲಂಗಾಣ ಮೂರು ಮಾರ್ಗಗಳಲ್ಲಿ ಯಾವ ಮಾರ್ಗದ ಮೂಲಕ ಪ್ರವೇಶಿಸಬೇಕು ಎಂಬ ಬಗ್ಗೆ ರಾಜ್ಯ ಕಾಂಗ್ರೆಸ್‌ ನಾಯಕರು ಚರ್ಚೆ ನಡೆಸಿದ್ದಾರೆ.

ರಾಹುಲ್‌ ಗಾಂಧಿ ಕುರಿತಾಗಿ ಫೇಕ್‌ ನ್ಯೂಸ್‌, ಪತ್ರಕರ್ತ ರೋಹಿತ್‌ ರಂಜನ್‌ ಬಂಧನ!

ಕೇರಳದ ಕಡೆಯಿಂದ ಬಂದರೆ ಚಾಮರಾಜನಗರ ಜಿಲ್ಲೆಯ ಅರಣ್ಯ ಮಾರ್ಗದಲ್ಲಿ ಪಾದಯಾತ್ರೆ ಸಾಗಬೇಕಾಗುತ್ತದೆ. ತಮಿಳುನಾಡು ಕಡೆಯಿಂದ ಬಂದರೆ ಚೆನ್ನೈ ಮೂಲಕ ಪ್ರವೇಶಿಸಬೇಕು. ತೆಲಂಗಾಣ ಮೂಲಕ ಬಂದರೆ ಕೋಲಾರ ಮೂಲಕ ರಾಜ್ಯ ಪ್ರವೇಶಿಸಬೇಕು. ಚಾಮರಾಜನಗರ ಮಾರ್ಗದಲ್ಲಿ ಹೆಚ್ಚು ಅರಣ್ಯವಿರುವುದರಿಂದ ಆ ಮಾರ್ಗದ ಬದಲು ತಮಿಳುನಾಡು ಇಲ್ಲವೇ ತೆಲಂಗಾಣ ಕಡೆಯಿಂದ ಪ್ರವೇಶಿಸುವುದೇ ಸರಿ ಎಂಬುದು ನಾಯಕರ ಆಲೋಚನೆಯಾಗಿದೆ. ಹೀಗಾಗಿ ಈ ಎರಡರಲ್ಲಿ ಒಂದು ಮಾರ್ಗವನ್ನು ಅಂತಿಮಗೊಳಿಸಬೇಕಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌