ಪುತ್ತಿಲರ ಸ್ಪರ್ಧೆ ಹಿಂದೂ ಸಮುದಾಯದ ಏಳಿಗೆಗೆ: ಸೇಡಿಯಾಪು ಜನಾರ್ದನ ಭಟ್‌

Published : Apr 27, 2023, 04:54 AM IST
ಪುತ್ತಿಲರ ಸ್ಪರ್ಧೆ ಹಿಂದೂ ಸಮುದಾಯದ ಏಳಿಗೆಗೆ: ಸೇಡಿಯಾಪು ಜನಾರ್ದನ ಭಟ್‌

ಸಾರಾಂಶ

ಇಂದಿನ ಕಾಲಘಟ್ಟದಲ್ಲಿ ಅರುಣ್‌ ಕುಮಾರ್‌ ಪುತ್ತಿಲರಂತಹ ಸಮರ್ಥ ವ್ಯಕ್ತಿಗಳ ಅಗತ್ಯವಿದ್ದು, ರಾಮಭಟ್‌ ಅವರನ್ನು ಹೊರತು ಪಡಿಸಿ ಈ ತನಕ ಇಂತಹ ಸಮರ್ಥರನ್ನು ಪುತ್ತೂರು ಕಂಡಿಲ್ಲ. ಪುತ್ತಿಲರ ಸ್ಪರ್ಧೆಯು ಹಿಂದೂ ಸಮುದಾಯದ ಏಳಿಗೆಗಾಗಿ ಹೊರತು ಯಾರದೇ ವಿರುದ್ಧವಲ್ಲ ಎಂದು ಪ್ರಗತಿಪರ ಕೃಷಿಕ ಸೇಡಿಯಾಪು ಜನಾರ್ದನ ಭಟ್‌ ಹೇಳಿದರು.

ಪುತ್ತೂರು (ಏ.27) : ಇಂದಿನ ಕಾಲಘಟ್ಟದಲ್ಲಿ ಅರುಣ್‌ ಕುಮಾರ್‌ ಪುತ್ತಿಲರಂತಹ ಸಮರ್ಥ ವ್ಯಕ್ತಿಗಳ ಅಗತ್ಯವಿದ್ದು, ರಾಮಭಟ್‌ ಅವರನ್ನು ಹೊರತು ಪಡಿಸಿ ಈ ತನಕ ಇಂತಹ ಸಮರ್ಥರನ್ನು ಪುತ್ತೂರು ಕಂಡಿಲ್ಲ. ಪುತ್ತಿಲರ ಸ್ಪರ್ಧೆಯು ಹಿಂದೂ ಸಮುದಾಯದ ಏಳಿಗೆಗಾಗಿ ಹೊರತು ಯಾರದೇ ವಿರುದ್ಧವಲ್ಲ ಎಂದು ಪ್ರಗತಿಪರ ಕೃಷಿಕ ಸೇಡಿಯಾಪು ಜನಾರ್ದನ ಭಟ್‌(Sediyapu Janardana Bhatt) ಹೇಳಿದರು.

ಅವರು ಬುಧವಾರ ಮುಕ್ರಂಪಾಡಿಯ ಸುಭದ್ರಾ ಸಭಾಂಗಣದ ಬಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ(Arun kumar puttila) ಅವರ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

Karnataka election 2023: ಮಂಗಳೂರು ದಕ್ಷಿಣ: ಕಾಂಗ್ರೆಸ್ಸಿಗೂ, ಬಿಜೆಪಿಗೂ ಗೆಲವು ಕೊಟ್ಟಕ್ಷೇತ್ರ...

ಪುತ್ತೂರು(Putturu) ಸೇರಿದಂತೆ ರಾಜ್ಯದಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ. ಆದರೆ ಜಾತಿ ರಾಜಕಾರಣ ನಮ್ಮದಲ್ಲ. ನಾವೆಲ್ಲರೂ ಅದರಿಂದ ಹೊರಬಂದು ಭಾರತೀಯ ಹಿಂದೂಗಳಾಗಬೇಕು ಎಂದರು. ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅವರು ಮಾತನಾಡಿ, ನನಗೆ ಜನರ ಆಶೀರ್ವಾದದ ವಿಶ್ವಾಸವಿದೆ. ಧರ್ಮಾಧಾರಿತ ಹಿಂದುತ್ವದ ಪ್ರತಿಪಾದನೆಯೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ದಿಯೇ ನನ್ನ ಗುರಿಯಾಗಿದ್ದು, ಮುಂದಿನ 5 ವರ್ಷಗಳಲ್ಲಿ ಕಾರ್ಯಗತ ಮಾಡುತ್ತೇನೆ ಎಂದರು.

ಈ ಸಂದರ್ಭ ಉದ್ಯಮಿ ಭಾಸ್ಕರ ಆಚಾರ್ಯ ಹಿಂದಾರು, ನಿವೃತ್ತ ಉಪತಹಸೀಲ್ದಾರ್‌ ಮೋನಪ್ಪ ಪುರುಷ, ಐಎಂಎ ಅಧ್ಯಕ್ಷ ಡಾ.ಗಣೇಶ್‌ ಪ್ರಸಾದ್‌ ಮುದ್ರಾಜೆ, ಮುಖಂಡರಾದ ಸುನಿಲ್‌ ಬೋರ್ಕರ್‌, ಚಂದಪ್ಪ ಮೂಲ್ಯ, ಕುಶಾಲಪ್ಪ ಗೌಡ ಬಳಕ್ಕ, ರಾಜಶೇಖರ್‌ ಬನ್ನೂರು, ಉದ್ಯಮಿ ಸತೀಶ್‌, ಪ್ರವೀಣ್‌ ಭಂಡಾರಿ, ವರದಮುತ್ತು, ಲೋಕೇಶ್‌, ಅರುಣ್‌ ರೈ ಡಿಂಬ್ರಿ, ಪ್ರಣಾಳಿಕೆ ಸಂಚಾಲಕ ಪ್ರಸನ್ನಕುಮಾರ್‌ ಮಾರ್ತ, ಸತೀಶ್‌ ನೀರ್ಪಾಡಿ, ಮನ್ಮಥ ಶೆಟ್ಟಿಮತ್ತಿತರರು ಉಪಸ್ಥಿತರಿದ್ದರು.

ರಣಭೂಮಿಯಲ್ಲಿ ಬಂಡಾಯದ ಬಿರುಗಾಳಿ..ಪುತ್ತೂರಲ್ಲಿ ಬಿಜೆಪಿಗೆ ಶಾಕ್ ಕೊಟ್ಟ ಕಟ್ಟರ್ ಹಿಂದುತ್ವವಾದಿ..!

 

ಪುತ್ತಿಲ ಪ್ರಣಾಳಿಕೆ: ದಿವಂಗತ ಸೌಮ್ಯಭಟ್‌ ಸ್ಮರಣಾರ್ಥ ಯುವತಿಯರಿಗೆ ಸ್ವದ್ಯೋಗ ತರಬೇತಿ ಕೇಂದ್ರ, ದಿವಂಗತ ಕಾರ್ತಿಕ್‌ ಮೇರ್ಲ ಸ್ಮರಣಾರ್ಥ ಸರ್ಕಾರಿ ಐಟಿಐ ಸ್ಥಾಪನೆ, ದಿವಂಗತ ಪ್ರವೀಣ್‌ ನೆಟ್ಟಾರು ಸ್ಮರಣಾರ್ಥ ಯುವಕರಿಗೆ ಸ್ವ ಉದ್ಯೋಗ ತರಬೇತಿ ಕೇಂದ್ರ ಸ್ಥಾಪನೆ ಮತ್ತು ಸೈನಿಕಕ್ಕೆ ಸೇರಲು ತರಬೇತಿ ವ್ಯವಸ್ಥೆ ಸೇರಿದಂತೆ ಭ್ರಷ್ಟಾಚಾರ, ಲಂಚ ರಹಿತ ಜನಸ್ನೇಹಿ ಆಡಳಿತ ವ್ಯವಸ್ಥೆ, ಜನವಿರೋಧಿ ಕಾನೂನುಗಳ ರದ್ಧತಿ, ಜಿಲ್ಲಾ ಕೇಂದ್ರವಾಗಿಸಲು ಕ್ರಮ, ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆ, ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಕ್ರಮ ಹೀಗೆ ಹಲವು ಭರವಸೆಗಳನ್ನು ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅವರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ