ಕುಂದಗೋಳ (ಆ.24) : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆಎಸೆದ ಘಟನೆ ಖಂಡಿಸಿ ಮಂಗಳವಾರ ಛಬ್ಬಿ ಮತ್ತು ಕುಂದಗೋಳ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಶಾಸಕಿ ಕುಸುಮಾವತಿ ಶಿವಳ್ಳಿ(MLA Kusumavati shivalli) ಮಾತನಾಡಿ, ಸಿದ್ದರಾಮಯ್ಯನವರ ರಾಜಕೀಯ ಏಳಿಗೆ ಸಹಿಸದ ಬಿಜೆಪಿ ಕಾರ್ಯಕರ್ತರು(BJP Workers) ಅವರ ಕಾರಿನ ಮೇಲೆ ಮೊಟ್ಟೆಎಸೆದು ಹೆಡಿತನ ಪ್ರದರ್ಶಿಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ರಾಜ್ಯ ಸರ್ಕಾರ(Govt of Karnataka) ಎಚ್ಚರವಹಿಸಬೇಕೆಂದು ಆಗ್ರಹಿಸಿದರು.
ಸಿದ್ದರಾಮಯ್ಯಗೆ ರಾಜ್ಯವ್ಯಾಪಿ ಬೆಂಗಾವಲು ಭದ್ರತೆ: ಪ್ರವೀಣ್ ಸೂದ್ ಸೂಚನೆ
ಮಾಜಿ ಶಾಸಕ ಎಂ.ಎಸ್. ಅಕ್ಕಿ(Former MLA M.S.Akki) ಮಾತನಾಡಿ, 5 ವರ್ಷಗಳ ಕಾಲ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸಿದ್ದರಾಮಯ್ಯ(Siddaramaiah) ಆಡಳಿತ ನಡೆಸಿದ್ದಾರೆ. ದಾವಣಗೆರೆ(Davanagere) ಜಿಲ್ಲೆಯಲ್ಲಿ ನಡೆದ ಸಿದ್ದರಾಮೋತ್ಸವ(Siddaramotsava)ಕ್ಕೆ ವ್ಯಕ್ತವಾದ ಅಭೂತಪೂರ್ವ ಬೆಂಬಲ ಸಹಿಸಲಾಗದೆ ಇಂತಹ ಕೆಲಸಕ್ಕೆ ಬಿಜೆಪಿ ಕಾರ್ಯಕರ್ತರು ಕೈ ಹಾಕಿರುವುದು ಖಂಡನೀಯ ಎಂದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಉಪ್ಪಿನ್ ಹಾಗೂ ಮುಖಂಡರಾದ ಅಡಿವೆಪ್ಪ ಶಿವಳ್ಳಿ, ಚಂದ್ರಶೇಖರ ಜುಟ್ಟಲ್, ವಿ.ಎಸ್. ಹಾಲಿ, ಶ್ರೀಕಂಠಗೌಡ, ಹಿರೇಗೌಡ್ರ ಮಾತನಾಡಿದರು. ಇದಕ್ಕೂ ಮುನ್ನ ಪಟ್ಟಣದ ಗಾಳಿಮಾರೆಮ್ಮ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮುಖಂಡರಾದ ಸುರೇಶ ಸವಣೂರ, ರಮೇಶ ಕೊಪ್ಟದ, ಸುರೇಶ ಗಂಗಾಯಿ, ತಿಪ್ಪಣ್ಣ ಡೊಳ್ಳಿನ, ಬಸಲಿಂಗಪ್ಪ ಕೋರಿ, ಮಲ್ಲೇಶ ಬೆಳವಡಿ, ವೆಂಕನಗೌಡ್ರ ಪಾಟೀಲ್, ಬಸವರಾಜ ಶಿರಸಂಗಿ, ಬೀರಪ್ಪ ಕುರಬರ, ರಾಮಣ್ಣ ಸೊಟ್ಟಮ್ಮನವರ, ಅಪ್ಪಣ್ಣ ಹಿರೇಗೌಡ್ರ, ವೀಣಾ ಆಣಿ, ಹನುಮಂತ ಕಂಬಳಿ, ಗಂಗಾಧರ ಪಾಣಿಗಟ್ಟಿ, ಗುರು ಚಲವಾದಿ ಹಾಗೂ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರಿದ್ದರು. ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ಶಾಸಕರ ಕೊಠಡಿಗೆ ಪೊಲೀಸ್ ಭದ್ರತೆ!